ಮಂಡ್ಯ,ಮಾರ್ಚ್,6,2026 (www.justkannada.in): ದಂಪತಿಗಳು ತಮ್ಮ ಎರಡು ವರ್ಷದ ಮಗುವಿನ ಕತ್ತು ಹಿಸುಕಿ ಬಳಿಕ ತಾವು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ನಡೆದಿದೆ.
ಕೆಆರ್ ಪೇಟೆಯ ಜಯನಗರದಲ್ಲಿ ಇಂದು ಅತ್ಯಂತ ದಾರುಣ ಘಟನೆ ನಡೆದಿದೆ. ದರ್ಶನ್ ಮತ್ತು ದಿವ್ಯಶ್ರೀ ಆತ್ಮಹತ್ಯೆಗೆ ಶರಣಾದವರು. ತಮ್ಮ ಎರಡು ವರ್ಷದ ಮಗುವಿನ ಕತ್ತು ಹಿಸುಕಿ, ತಾವು ನೇಣಿಗೆ ಶರಣಾಗಿದ್ದಾರೆ. ಅದೃಷ್ಟವಶಾತ್ ಮಗು ಬದುಕುಳಿದು ಅಪಾಯದಿಂದ ಪಾರಾಗಿದೆ.
ಮೃತ ದರ್ಶನ್ ಮತ್ತು ದಿವ್ಯಶ್ರೀ ಕಳೆದ ಮೂರು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಕೆ.ಆರ್. ಪೇಟೆ ಟೌನ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣ ದಾಖಲಾಗಿದೆ.
Key words: Couple, suicide, Mandya
The post ಎರಡು ವರ್ಷದ ಮಗುವಿನ ಕತ್ತು ಹಿಸುಕಿ ದಂಪತಿ ಆತ್ಮಹತ್ಯೆಗೆ ಶರಣು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





