8
March, 2026

A News 365Times Venture

8
Sunday
March, 2026

A News 365Times Venture

MDA ವಿಶೇಷ ತಹಶೀಲ್ದಾರ್ ವಿರುದ್ಧ ಶಿಸ್ತು ಕ್ರಮ: ಸರ್ಕಾರದಿಂದ ಮತ್ತೆ ಸೂಚನೆ

Date:

 

ಮೈಸೂರು, ಮಾ.೦೮,೨೦೨೬ : ಅಧಿಕಾರ ದುರುಪಯೋಗದ ಆರೋಪ ಎದುರಿಸುತ್ತಿರುವ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ವಿಶೇಷ ತಹಶೀಲ್ದಾರ್ ರಾಜಶೇಖರ್ ಕೆ.ವಿ. ವಿರುದ್ಧ ಶಿಸ್ತು ಕ್ರಮ ಜರುಗಿಸುವ ವಿಚಾರದಲ್ಲಿ ಸರ್ಕಾರ ಮತ್ತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಕಾರ್ಯದರ್ಶಿಯವರ ಅನುಮೋದನೆ ಪಡೆಯದೇ ತಮ್ಮ ಹಂತದಲ್ಲಿಯೇ ತಿದ್ದುಪಡಿ ಕ್ರಯಪತ್ರ ನೀಡಿದ ಆರೋಪದ ಹಿನ್ನೆಲೆಯಲ್ಲಿ, ಆಯುಕ್ತಾಲಯ ಹಾಗೂ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಪ್ರಸ್ತಾವನೆ ಆಧರಿಸಿ ಸರ್ಕಾರ ಈ ಮೊದಲು ರಾಜಶೇಖರ್ ಅವರನ್ನು ಅಮಾನತುಗೊಳಿಸಿ ಇಲಾಖಾ ವಿಚಾರಣೆಗೆ ಆದೇಶಿಸಿತ್ತು. ಜೊತೆಗೆ, ಆರೋಪಿತ ಅಧಿಕಾರಿ ವಿರುದ್ಧ ಕರಡು ದೋಷಾರೋಪಣಾ ಪಟ್ಟಿ ಹಾಗೂ ಸಂಬಂಧಿಸಿದ ಮೂಲ ಅಥವಾ ದೃಢೀಕೃತ ದಾಖಲೆಗಳನ್ನು ಸಲ್ಲಿಸಲು ಸೂಚನೆ ನೀಡಲಾಗಿತ್ತು.

ಆದರೆ, ಅಮಾನತು ಆದೇಶ ಹೊರಡಿಸಿ ಹಲವಾರು ದಿನಗಳು ಕಳೆದರೂ, ಕರಡು ದೋಷಾರೋಪಣಾ ಪಟ್ಟಿ ಅಥವಾ ಸಂಬಂಧಿಸಿದ ಯಾವುದೇ ದಾಖಲೆಗಳು ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ ಎಂದು ತಿಳಿದುಬಂದಿದೆ. ಇದೇ ವೇಳೆ, ಅಮಾನತು ಆದೇಶದಂತೆ ಅಧಿಕಾರಿಯ ಸೇವೆಯನ್ನು ಬಿಡುಗಡೆ ಮಾಡಿರುವ ಬಗ್ಗೆ ಅನುಪಾಲನಾ ವರದಿಯನ್ನೂ ಸರ್ಕಾರಕ್ಕೆ ಕಳುಹಿಸಲಾಗಿಲ್ಲ ಎಂಬುದೂ ಗಮನಕ್ಕೆ ಬಂದಿದೆ.

ಈ ಹಿನ್ನೆಲೆಯಲ್ಲಿ, ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯತ್ರಣ ಮತ್ತು ಮೇಲ್ಮನವಿ) ನಿಯಮಗಳು–1957 ಅನ್ವಯ ಶಿಸ್ತು ಕ್ರಮ ಕೈಗೊಳ್ಳಲು ಅಗತ್ಯವಿರುವ ದೋಷಾರೋಪಣಾ ಪಟ್ಟಿ, ಮೂಲ ದಾಖಲೆಗಳು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು 3 ದಿನಗಳೊಳಗೆ ಸರ್ಕಾರಕ್ಕೆ ಸಲ್ಲಿಸುವಂತೆ ನಗರಾಭಿವೃದ್ಧಿ ಪ್ರಾಧಿಕಾರಗಳ ಆಯುಕ್ತರು ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಮತ್ತೊಮ್ಮೆ ಸೂಚಿಸಿದ್ದಾರೆ.

ಸೂಚನೆಯಂತೆ ದಾಖಲೆಗಳನ್ನು ಸಲ್ಲಿಸಲು ವಿಳಂಬವಾದರೆ, ಪ್ರಾಧಿಕಾರದಿಂದ ಸಂಬಂಧಪಟ್ಟ ಪ್ರಸ್ತಾವನೆ ಅಥವಾ ವರದಿ ಸ್ವೀಕೃತವಾಗಿಲ್ಲ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಎಚ್ಚರಿಸಲಾಗಿದೆ.

ಆಯುಕ್ತರ ಪ್ರತಿಕ್ರಿಯೆ:

K.R.Rakshith, commissioner, MDA

ಸರಕಾರದ ಈ ಪತ್ರಕ್ಕೆ ಸಂಬಂಧಿಸಿದಂತೆ ಎಂಡಿಎ ಆಯುಕ್ತ ಕೆ.ಆರ್.ರಕ್ಷಿತ್‌ ಅವರನ್ನು ಸಂಪರ್ಕಿಸಿದಾಗ, ಸರಕಾರದಿಂದ ಪತ್ರ ಬಂದಿರುವ ಬಗ್ಗೆ ಸದ್ಯದಲ್ಲೇ ಸೂಕ್ತ ಕ್ರಮ ಜರುಗಿಸಲಾಗುವುದು. ಸರಕಾರ ಕೇಳಿರುವ ಮಾಹಿತಿಗಳನ್ನು ಒದಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

key words:  Disciplinary Action, Against ,Mysuru Development Authority, Special Tahsildar, Government, Issues Fresh Direction

SUMMARY:

Disciplinary Action Against Mysuru Development Authority Special Tahsildar: Government Issues Fresh Direction

Mysuru: The government has issued a fresh directive regarding disciplinary action against K.V. Rajashekar, Special Tahsildar of the Mysuru Development Authority (MDA), who is facing allegations of misuse of authority.

According to officials, Rajashekar allegedly issued a rectified sale deed on his own authority without obtaining approval from the Secretary. Based on proposals from the Commissionerate and MDA, the government had earlier placed the officer under suspension and ordered a departmental inquiry.

The government had also directed the authorities to submit a draft charge sheet along with original or authenticated supporting documents against the accused officer. However, it has been noted that no draft charge sheet or related documents have been submitted to the government so far.

Further, even after several days of issuing the suspension order, the authorities have not submitted a compliance report confirming the officer’s relief from service, which could lead to delays in the disciplinary proceedings.

In this regard, under the provisions of the Karnataka Civil Services (Classification, Control and Appeal) Rules, 1957, the Commissioner of Urban Development Authorities has again instructed MDA to submit the draft charge sheet, original or authenticated documents, and all related records within three days to facilitate disciplinary action against the officer.

The communication also warns that if the required documents are not submitted without further delay, it will be reported to the government that no proposal or report has been received from the authority.

The post MDA ವಿಶೇಷ ತಹಶೀಲ್ದಾರ್ ವಿರುದ್ಧ ಶಿಸ್ತು ಕ್ರಮ: ಸರ್ಕಾರದಿಂದ ಮತ್ತೆ ಸೂಚನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

അമേരിക്കയുടെയും ഇസ്രഈലിന്റെയും സാമ്പത്തിക താല്പര്യങ്ങളാണ് ആക്രമണങ്ങൾക്ക് കാരണം: ഇസ്രഈൽ പാർലമെന്റ് അംഗം

ജെറുസലേം: അമേരിക്കയുടെയും ഇസ്രഈലിന്റെയും സാമ്പത്തിക, രാഷ്ട്രീയ താത്പര്യങ്ങളാണ് ആക്രമണങ്ങൾക്ക് കാരണമെന്ന് ഇസ്രഈൽ...

கடுமையாகும் ஈரான் போர்: முன்பை விட வேகமாக வலுவாகும் அமெரிக்க டாலர்! – இது 'எப்படி' சாத்தியம்?

ஈரான் போருக்கு மத்தியில் அமெரிக்க டாலர் மதிப்பு தொடர்ந்து வலுவடைந்து வருகிறது.சொல்லப்...

Iran War: “ట్రంప్‌ను వదిలిపెట్టం, మూల్యం చెల్లించుకోవాల్సిందే”.. ఇరాన్ బిగ్ వార్నింగ్..

Iran War: అమెరికా అధ్యక్షుడు డొనాల్డ్ ట్రంప్‌కు ఇరాన్ భారీ హెచ్చరిక...

ಜನರ ಆಶೀರ್ವಾದವಿದ್ದರೆ ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ- ಸಿಎಂ ಸಿದ್ದರಾಮಯ್ಯ

ಮೈಸೂರು, ಮಾರ್ಚ್,7,2026 (www.justkannada.in):  ಜನರ ಆಶೀರ್ವಾದವಿದ್ದರೆ ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ....