ಮೈಸೂರು,ಮಾರ್ಚ್,6,2026 (www.justkannada.in): ಈಗ ಎಲ್ಲೆಡೆ ಗ್ಯಾರಂಟಿಗಳು ಸದ್ದು ಮಾಡುತ್ತಿದ್ದು ಮೈಸೂರಿನ ಜೆಎಸ್ಎಸ್ ವಿದ್ಯಾ ಸಂಸ್ಥೆ ಜೀವನಪರ್ಯಂತ ಮೂರು ಗ್ಯಾರಂಟಿ ಕೊಡುವುದಾಗಿ ಹಿರಿಯ ವಕೀಲರು ಹಾಗೂ ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಗೌರವ ಸಂಪಾದಕ ವೆಂಕಟೇಶ್ ತಿಳಿಸಿದ್ದಾರೆ.
ಇಂದು ಮೈಸೂರಿನ ಸರಸ್ವತಿಪುರಂನ ಜೆ ಎಸ್ ಎಸ್ ಕಾನೂನು ಕಾಲೇಜಿನಲ್ಲಿ ನಡೆದ ಸಿವಿಲ್ ಜಡ್ಜ್ ಆಗಿ ಆಯ್ಕೆಯಾದವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಲಾಗೈಡ್ ವೆಂಕಟೇಶ್ ಅವರು, ಜೆ ಎಸ್ ಎಸ್ ಅನ್ನದಾನ ವಿದ್ಯಾದಾನ ಉದ್ಯೋಗದಾನದ ಮೂರು ಗ್ಯಾರಂಟಿಯನ್ನು ನೀಡುತ್ತದೆ. ಅಷ್ಟೇ ಅಲ್ಲ ಈ ಮೂರು ಗ್ಯಾರಂಟಿಗಳು ಜೀವನ ಪರ್ಯಂತ ಇರುತ್ತದೆ. ಯುವ ವಯಸ್ಸಿನಲ್ಲಿ ಸಿವಿಲ್ ಜಡ್ಜ್ ಹುದ್ದೆಗೆ ಆಯ್ಕೆಯಾಗಿರುವುದು ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಪ್ರತಿಫಲ ಎಂದು ಹೇಳಿದರು.
ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಅವರ ಸಾಧನೆ ಇತರೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ. ಈ ಸಾಧನೆ ಜೆಎಸ್‌ಎಸ್ ವಿದ್ಯಾಪೀಠವು ತನ್ನ ಸ್ಥಾಪಕ ತತ್ವಗಳಿಗೆ ನಿಷ್ಠೆಯಿಂದ ಕೆಲಸ ಮಾಡುತ್ತಿರುವುದಕ್ಕೆ ಉತ್ತಮ ಉದಾಹರಣೆ ಎಂದು ಲಾಗೈಡ್ ವೆಂಕಟೇಶ್ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಿವಿಲ್ ಜಡ್ಜ್ ಆಗಿ ಆಯ್ಕೆಯಾದವರನ್ನು ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜೆಎಸ್ಎಸ್ ಮಹಾ ವಿದ್ಯಾಪೀಠದ ಕಾರ್ಯದರ್ಶಿ ಪ್ರೊ ಎಸ್. ಪಿ.ಮಂಜುನಾಥ್, ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟ್ಟೂರಮಠ ಕಾರ್ಯನಿರ್ವಾಹಕ ಅಧಿಕಾರಿ ಪ್ರೊ ಸುರೇಶ್ ಕಾನೂನು ವಿದ್ಯಾರ್ಥಿಗಳು ಸೇರಿ ಹಲವರು ಭಾಗಿಯಾಗಿದ್ದರು.
Key words: JSS, guarantees, food donation, education donation, Law Guide, Venkatesh
The post JSS ವಿದ್ಯಾಸಂಸ್ಥೆಯಿಂದ ಅನ್ನದಾನ, ವಿದ್ಯಾದಾನ, ಉದ್ಯೋಗ ದಾನದ ಗ್ಯಾರಂಟಿ – ಲಾಗೈಡ್ ವೆಂಕಟೇಶ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





