6
March, 2026

A News 365Times Venture

6
Friday
March, 2026

A News 365Times Venture

ರಾಜ್ಯ ಬಜೆಟ್: ಮೈಸೂರು ಜಯದೇವ ಆಸ್ಪತ್ರೆ ಉನ್ನತೀಕರಣಕ್ಕೆ 180 ಕೋಟಿ ರೂ. ಅನುದಾನ

Date:

ಮೈಸೂರು,ಮಾರ್ಚ್,6,2026 (www.justkannda.in):  ಮೈಸೂರಿನ ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆಯನ್ನು ಉನ್ನತೀಕರಣಗೊಳಿಸಲು 180 ಕೋಟಿ ರೂ.ಗಳ ಅನುದಾನ ಮೀಸಲಿಡುವುದಾಗಿ ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ.

ಇಂದು ವಿಧಾನಸಭೆಯಲ್ಲಿ 2026-27ನೇ ಸಾಲಿನ ರಾಜ್ಯ ಬಜೆಟ್‌ ಮಂಡಿಸಿದ ಸಿಎಂ ಸಿದ್ದರಾಮಯ್ಯ,  ಜನ ಸಂಖ್ಯೆ ಮತ್ತು ಬೇಡಿಕೆಗೆ ಅನುಗುಣವಾಗಿ ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಈಗಿರುವ 400 ಹಾಸಿಗೆ ಸಾಮರ್ಥ್ಯವನ್ನು 600 ಹಾಸಿಗೆಗೆ ಹೆಚ್ಚಿಸಲಾಗುವುದು ಹಾಗೂ ಅಗತ್ಯ ಯಂತ್ರೋಪಕರಣಗಳನ್ನು ಖರೀದಿಸಲು 180 ಕೋಟಿ ರೂ.ಗಳನ್ನು ಮೀಸಲಿಡಲಾಗುವುದು ಎಂದು ತಿಳಿಸಿದರು.

ಮೈಸೂರಿನಲ್ಲಿ ಏರೋಸ್ಪೇಸ್ ಕೈಗಾರಿಕೆಗಳನ್ನು ಉತ್ತೇಜಿಸಲು ಮೈಸೂರು ವಿಮಾನ ನಿಲ್ದಾಣದ ಹತ್ತಿರದಲ್ಲಿ ಏರೋಸ್ಪೇಸ್ ಪಾರ್ಕ್ ಅನ್ನು KIADB ವತಿಯಿಂದ ಅಭಿವೃದ್ಧಿಪಡಿಸಲಾಗುವುದು. ಅಲ್ಲದೆ, ಮೈಸೂರು ತಾಲೂಕಿನ ತಾಂಡವಪುರದಲ್ಲಿ ಸಿಲ್ಕ್‌ ಪಾರ್ಕ್‌ ಸ್ಥಾಪನೆ ಆಗಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Key words: State Budget, Rs 180 crore, grant ,Mysore, Jayadeva Hospital

The post ರಾಜ್ಯ ಬಜೆಟ್: ಮೈಸೂರು ಜಯದೇವ ಆಸ್ಪತ್ರೆ ಉನ್ನತೀಕರಣಕ್ಕೆ 180 ಕೋಟಿ ರೂ. ಅನುದಾನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഇറാന്‍ പരമാധികാരം മുറുകെ പിടിക്കും; സംഘര്‍ഷത്തിന് തിരികൊളുത്തിയവരോടാണ് സംസാരിക്കേണ്ടത്: മധ്യസ്ഥരോട് പെസസ്‌കിയാന്‍

ടെഹ്‌റാന്‍: ഇറാന്‍-യു.എസ്, ഇസ്രഈല്‍ സംഘര്‍ഷത്തില്‍ മധ്യസ്ഥ ശ്രമങ്ങള്‍ക്കാനായി നിരവധി രാഷ്ട്രങ്ങള്‍ മുന്നോട്ട്...

போர் எதிரொலி: இந்தியாவில் சமையல் எரிவாயு தட்டுப்பாட்டைத் தவிர்க்க மத்திய அரசு நடவடிக்கை!

ஈரான், இஸ்ரேல், அமெரிக்கா இடையேயான போர் சூழல் காரணமாக ஹார்முஸ் ஜலசந்தி...

Food Tips : పురుగులు పట్టకుండా పిండి 6 నెలలు ఫ్రెష్‌గా ఉండాలంటే… ఈ ట్రిక్ మిస్ చేయకు.!

మన వంటగదిలో బియ్యం, గోధుమ పిండి ఎప్పుడూ ఉంటాయి కదా.. చపాతీలు,...