ಮೈಸೂರು,ಮಾರ್ಚ್,5,2026 (www.justkannada.in): ವಕೀಲರ ಗೃಹ ನಿರ್ಮಾಣ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಹಿರಿಯ ವಕೀಲ ಶಂಬುಗೌಡ, ಉಪಾಧ್ಯಕ್ಷರಾಗಿ ಸೋಮನಾಯಕ.ಬಿ ಆಯ್ಕೆಯಾಗಿದ್ದಾರೆ.
ಗುರುವಾರ ಸಂಘದ ಕಚೇರಿಯಲ್ಲಿ ಚುನಾವಣಾ ಪ್ರಕ್ರಿಯೆನ್ನು ನಡೆಯಿತು. ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಮೈಸೂರು ವಕೀಲರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೋಭಾ ಅವರು ಘೋಷಿಸಿದರು. ಶಂಭುಗೌಡ ಅವರು 5ನೇ ಬಾರಿಗೆ ಆಯ್ಕೆ ಮೈಸೂರು ವಕೀಲರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷ ಶಂಭುಗೌಡ ಮಾತನಾಡಿ, ತಮ್ಮನ್ನೂ ಆಯ್ಕೆ ಮಾಡಿದ ಎಲ್ಲ ನಿರ್ದೇಶಕರಿಗೆ ಧನ್ಯವಾದ ತಿಳಿಸುತ್ತೇನೆ. ನಿರ್ದೇಶಕರ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ನಡೆದುಕೊಂಡು ಸಂಘವನ್ನು ಅಭಿವೃದ್ಧಿಪಡಿಸಲು ಸಹಕರಿಸುವೆ ಎಂದು ಹೇಳಿದರು.
ಈ ಸಂದರ್ಭ ನಿರ್ದೇಶಕರುಗಳಾದ ಎಲ್.ಎಲಿಜಾ, ಜೆ.ಲೋಕೇಶ್ ಗೌಡ, ಜಿ.ಡಿ.ಸುಮಂತ್, ಪಿ. ಎಲ್. ಪಂಚಲಿಂಗೇಗೌಡ, ಪ್ರಸನ್ನ ಕುಮಾರ್.ಕೆ.(ಗಂಜಾಂ), ರಾಜು.ಪಿ , ಎನ್.ಮಂಜುನಾಥ್, ಪಿ. ತೇಜಸ್ವಿ, ಸಿದ್ದಪ್ಪಾಜಿ ಚಾರಿ, ಗೋಪಾಲೇಗೌಡ. ಎಸ್.ಆರ್, ಪ್ರಸಾದ್ ಕುಮಾರ್. ಎಸ್, ಸೋಮನಾಯಕ .ಬಿ, ಬಿ.ಆರ್ ಅನುರಾಧ ಮತ್ತು ಮಂಗಳ. ಸಿ. ರವರುಗಳು ಉಪಸ್ಥಿತರಿದ್ದರು.
Key words: Shambhu Gowda, Mysore Lawyers’ Housing Cooperative Society, President
The post ಮೈಸೂರು ವಕೀಲರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ 5ನೇ ಭಾರಿ ಅಧ್ಯಕ್ಷರಾಗಿ ಶಂಭುಗೌಡ ಆಯ್ಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





