2
March, 2026

A News 365Times Venture

2
Monday
March, 2026

A News 365Times Venture

‘ಕನ್ನಡದಲ್ಲಿ ಕೃಷಿ ವಿಜ್ಞಾನ ಸಾಹಿತ್ಯ ಇನ್ನಷ್ಟು ವಿಸ್ತಾರವಾಗಲಿ- ಎನ್. ದೇವಕುಮಾರ್

Date:

ಮೈಸೂರು,ಫೆಬ್ರವರಿ,28,2026 (www.justkannada.in): ‘ಕನ್ನಡದಲ್ಲಿ ಕೃಷಿ ವಿಜ್ಞಾನ ಸಾಹಿತ್ಯ ಇನ್ನಷ್ಟು ವಿಸ್ತಾರವಾಗಬೇಕು. ರೈತರ ವ್ಯವಸಾಯ ಜ್ಞಾನ ದಾಖಲಾಗಬೇಕು. ಕೃಷಿ ವಿಜ್ಞಾನ ಮಾಹಿತಿ ಹೆಚ್ಚು ಹೆಚ್ಚು ರೈತರಿಗೆ ತಲುಪುವಂತಾಗಲಿ ಎಂದು ಕೃಷಿ ವಿಜ್ಞಾನಿ ಎನ್. ದೇವಕುಮಾರ್ ಆಶಿಸಿದರು.

ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(ಕೆಎಸ್‌ಒಯು) ಆವರಣದಲ್ಲಿ ನಡೆಯುತ್ತಿರುವ ಕಿಸಾನ್ ಸ್ವರಾಜ್ ಸಮ್ಮೇಳನದ ‘ಕೃಷಿ ಮಾಧ್ಯಮ ಕೇಂದ್ರ ಮತ್ತು ಬುಕ್ಸ್‌ ಲೋಕ ಮಳಿಗೆಯಲ್ಲಿ ಬೆಂಗಳೂರಿನ ನದಿ ಪ್ರಕಾಶನ ಪ್ರಕಟಿಸಿರುವ ಡಾ. ಗಣೇಶ ಹೆಗಡೆ ನೀಲೇಸರ ಅವರ ‘ಮರ ಮೇವು’ ಮತ್ತು ಕೇಶವ ಎಚ್‌. ಕೊರ್ಸೆ ಅವರ ‘ನೆಲ ಮುಗಿಲ ಮಾತು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಎನ್. ದೇವಕುಮಾರ್ ಅವರು ಮಾತನಾಡಿದರು.

ಮರ–ಮೇವು ಕೃತಿಯಲ್ಲಿ ಮೇವು ನೀಡುವ ವಿವಿಧ ಮರಗಳ ಕುರಿತ ಮಾಹಿತಿ ಇದೆ. ಈ ಕೃತಿ ಪಶುವೈದ್ಯಕೀಯ ಪದವಿ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಹೆಚ್ಚಾಗಿ ತಲುಪಬೇಕು. ಹೈನುಗಾರಿಕೆ ಕೈಗೊಳ್ಳುತ್ತಿರುವ ರೈತರಿಗೆ ಇದು ತಲುಪುವಂತಾಗಬೇಕು. ಹೈನುಗಾರಿಕೆ ಕುರಿತು ತರಬೇತಿ ನೀಡುವ ಸಂಸ್ಥೆಗಳನ್ನು ಈ ಪುಸ್ತಕವನ್ನು ರೈತರಿಗೆ ತಲುಪಿಸುವ ಪ್ರಯತ್ನ ಮಾಡಬಹುದು ಎಂದು ಸಲಹೆ ನೀಡಿದರು.

ಮರ–ಮೇವು ಕೃತಿಯ ಲೇಖಕ ಡಾ. ಗಣೇಶ ಹೆಗಡೆ ನೀಲೇಸರ ಮಾತನಾಡಿ, ‘ಕೃತಿಯಲ್ಲಿ 59 ಮೇವಿನ ಮರಗಳ ಕುರಿತು ಸಚಿತ್ರ ಮಾಹಿತಿ ಇದೆ. ಮೇವು–ಮರ ಕುರಿತ ವೈಜ್ಞಾನಿಕ ಮಾಹಿತಿಯನ್ನು ಕಥನ ರೂಪದಲ್ಲಿ ನಿರೂಪಿಸಿದ್ದೇನೆ’ ಎಂದು ತಿಳಿಸಿದರು.

ಪತ್ರಕರ್ತ ಗಾಣಧಾಳು ಶ್ರೀಕಂಠ ಕೃತಿಗಳನ್ನು ಪರಿಚಯಿಸಿದರು. ಕೃಷಿ ಬರಹಗಾರ ಮಲ್ಲಿಕಾರ್ಜುನ ಹೊಸಪಾಳ್ಯ ಕಾರ್ಯಕ್ರಮ ನಿರೂಪಿಸಿದರು. ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗದ ಸಂಚಾಲಕ ಜಿ. ಕೃಷ್ಣಪ್ರಸಾದ್, ಸಾವಯವ ಕೃಷಿಕ ಅಂದನೂರು ಎಚ್. ಆಂಜನೇಯ, ಕೃಷಿಕ ಆನಂದತೀರ್ಥ ಪ್ಯಾಟಿ, ಬುಕ್ಸ್‌ಲೋಕದ ಫಣೀಶ್– ಭಾರ್ಗವಿ ಫಣೀಶ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Key words: agricultural science, literature ,Kannada, expand, N. Devakumar, Mysore

The post ‘ಕನ್ನಡದಲ್ಲಿ ಕೃಷಿ ವಿಜ್ಞಾನ ಸಾಹಿತ್ಯ ಇನ್ನಷ್ಟು ವಿಸ್ತಾರವಾಗಲಿ- ಎನ್. ದೇವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഒമാന്‍ വിദേശകാര്യ മന്ത്രിയുമായുള്ള സംഭാഷണത്തില്‍ ചര്‍ച്ചയ്ക്ക് തയ്യാറെന്ന് ഇറാന്‍; സൂചന നല്‍കി ട്രംപും

മസ്‌കറ്റ്: പശ്ചിമേഷ്യയിലെ സംഘര്‍ഷം ലഘൂകരിക്കുന്നതിനായി ചര്‍ച്ചയ്ക്ക് തയ്യാറെന്ന് ഇറാന്‍. ഒമാന്‍ വിദേശകാര്യമന്ത്രി...

கமேனி கொலை: ஈரான் இடைக்கால மதத்தலைவராக மூத்த மதகுரு அயதுல்லா அராபி நியமனம்

ஈரானில் இஸ்ரேல் மற்றும் அமெரிக்க கூட்டுப்படைகள் நேற்று நடத்திய தாக்குதலில் அந்நாட்டின்...

യു.എ.ഇയില്‍ മൂന്ന് മരണം, കൊല്ലപ്പെട്ടത് വിദേശ പൗരന്മാര്‍, ഇന്ത്യക്കാരുള്‍പ്പെടെ 58 പേര്‍ക്ക് പരിക്ക്

അബുദാബി: യു.എ.ഇയില്‍ ഇറാന്റെ ആക്രമണത്തില്‍ മൂന്ന് മരണം. പാകിസ്ഥാന്‍, ബംഗ്ലാദേശ്, നേപ്പാള്‍...