27
February, 2026

A News 365Times Venture

27
Friday
February, 2026

A News 365Times Venture

ಖಾಲಿ  ಹುದ್ದೆಗಳ ಭರ್ತಿ: ಪ್ರಧಾನಿ ಮೋದಿಗೆ ಪತ್ರ ಬರೆದ ಅರವಿಂದ ಬೆಲ್ಲದ್

Date:

ಬೆಂಗಳೂರು,ಫೆಬ್ರವರಿ,27,2026 (www.justkannada.in):   ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ದ ಉದ್ಯೋಗಾಕಾಂಕ್ಷಿಗಳು ಬೃಹತ್ ಪ್ರತಿಭಟನೆ ನಡೆಸಿದ ಬೆನ್ನಲ್ಲೆ ಬೆದರಿದ ಸರ್ಕಾರ ಇದೀಗ ನಿನ್ನೆ 56 ಸಾವಿರ ಹುದ್ದೆಗಳ ಭರ್ತಿಗೆ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಿದೆ.

ಈ ಮಧ್ಯೆ ಇತ್ತ ಬಿಜೆಪಿ ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿ ವಿಷಯ ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದು  ಇದೀಗ ಈ ವಿಚಾರವನ್ನ ಶಾಸಕ ಅರವಿಂದ ಬೆಲ್ಲದ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ  ತಂದಿದ್ದಾರೆ.

ತಾವು ಬರೆದಿರುವ ಪತ್ರವನ್ನ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ಶಾಸಕ ಅರವಿಂದ ಬೆಲ್ಲದ್, ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ವಿಫಲವಾಗಿದೆ, ಇದು ಲಕ್ಷಾಂತರ ಆಕಾಂಕ್ಷಿಗಳನ್ನು ಹತಾಶೆ ಮತ್ತು ಅನಿಶ್ಚಿತತೆಯ ಕೂಪಕ್ಕೆ ತಳ್ಳಿದೆ. ಧಾರವಾಡದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಈ ಆಕ್ರೋಶವು ವ್ಯಕ್ತವಾಗಿದೆ, ಅಲ್ಲಿ ಯುವಕರು ಉದ್ಯೋಗ, ಪಾರದರ್ಶಕತೆ ಮತ್ತು ಜವಾಬ್ದಾರಿಗಾಗಿ ಒತ್ತಾಯಿಸಿದ್ದಾರೆ ಎಂದು ತಿಳಿಸಿದ್ದಾರೆ.

ಆದರೆ ರಾಜ್ಯ ಸರ್ಕಾರ ಸರಿಯಾಗಿ ಸ್ಪಂದಿಸದೆ ನಿರ್ಬಂಧಗಳು ಮತ್ತು ಲಾಠಿಚಾರ್ಜ್‌ ಗಳನ್ನು ಮಾತ್ರ ಮಾಡುತ್ತಿದ್ದಾರೆ. ಇದು ಆಡಳಿತದಲ್ಲಿನ ವೈಫಲ್ಯವನ್ನು ಮತ್ತು ಪ್ರಜಾಸತ್ತಾತ್ಮಕ ಭಿನ್ನಾಭಿಪ್ರಾಯಗಳನ್ನು ನಿಭಾಯಿಸುವಲ್ಲಿನ ಲೋಪವನ್ನು ಎತ್ತಿ ತೋರಿಸುತ್ತದೆ. ಕರ್ನಾಟಕದ ಯುವಜನತೆಯ ಆಕಾಂಕ್ಷೆಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಪ್ರಸ್ತುತ 2.86 ಲಕ್ಷ ಖಾಲಿ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವ ಸ್ಪಷ್ಟ ಭರವಸೆಯನ್ನು ಕಾಂಗ್ರೆಸ್  ನೀಡಿತ್ತು,ಆದರೆ  ಕಳೆದ ಎರಡು ವರ್ಷಗಳಲ್ಲಿ ಕೇವಲ 8,157 ನೇಮಕಾತಿಗಳು ಮಾತ್ರ ನಡೆದಿವೆ. ಯಾವುದೇ ಪಾರದರ್ಶಕ ಅಥವಾ ಕಾಲಮಿತಿಯ ನೇಮಕಾತಿ ಮಾರ್ಗಸೂಚಿ ಇಲ್ಲದಿರುವುದು ವ್ಯಾಪಕ ಅನಿಶ್ಚಿತತೆ ಮತ್ತು ಹತಾಶೆಗೆ ಕಾರಣವಾಗಿದೆ.  ಕರ್ನಾಟಕದ ಯುವಜನತೆಯ ಆಕಾಂಕ್ಷೆಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಕರ್ನಾಟಕದಲ್ಲಿನ ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯದಿಂದ ಉದ್ಭವಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ನಿಮ್ಮ ಗಮನಕ್ಕೆ ತರಲು ನಾನು ಈ ಮೂಲಕ ಬಯಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Key words: Filling, vacancies, Arvind Belladh, letter, PM, Modi

The post ಖಾಲಿ  ಹುದ್ದೆಗಳ ಭರ್ತಿ: ಪ್ರಧಾನಿ ಮೋದಿಗೆ ಪತ್ರ ಬರೆದ ಅರವಿಂದ ಬೆಲ್ಲದ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

பணி நிறைவுபெறாத தக்கலை பேருந்து நிலையத்தைத் திறந்து வைத்த முதல்வர்; போராடிய பா.ஜ.க; நடந்தது என்ன?

கன்னியாகுமரி மாவட்டத்தில் கடந்த 25-ம் தேதி நடைபெற்ற அரசு நலத்திட்ட உதவிகள்...

കേരളയോ, കേരളമോ അല്ല: നമ്മുടെ നാടിന്റെ പേര് മലയാളം എന്നാണ്; ചരിത്ര രേഖകള്‍ നിരത്തി ഡോ. അബ്ബാസ് പനക്കല്‍

സംസ്ഥാനത്തിന്റെ ഔദ്യോഗിക പേര് ‘കേരള’ എന്നതില്‍ നിന്ന് ‘കേരളം’ എന്നാക്കാനുള്ള നടപടികള്‍...

Vijay : '2 ஆண்டுகளாக பிரிந்து வாழ்கிறோம்…' – விவாகரத்து கேட்கும் விஜய்யின் மனைவி சங்கீதா!

தவெக தலைவர் விஜய்யின் மனைவி சங்கீதா செங்கல்பட்டு குடும்ப நல நீதிமன்றத்தில்...