ಮಂಡ್ಯ,ಫೆಬ್ರವರಿ,26,2026 (www.justkannada.in): ವ್ಯಕ್ತಿಯೊಬ್ಬರಿಗೆ ಕ್ಷುಲ್ಲಕ ಕಾರಣಕ್ಕೆ ಸೈಜುಗಲ್ಲಿನಿಂದ ಕಾಲನ್ನ ಜಜ್ಜಿ ಕ್ರೂರವಾಗಿ ಅಮಾನವೀಯವಾಗಿ ಹಲ್ಲೆ ನಡೆಸಿದ್ದ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗಿರೀಶ್, ಮದ್ದಪ್ಪ, ಪ್ಲಗ್ ಮಂಜ, ಗಣೇಶ, ಶಿವಣ್ಣ, ನಿಂಗಣ್ಣ ಸೇರಿ 11 ಮಂದಿ ಬಂಧಿತರು. ಫೆ.22 ರಂದು ಪಾಂಡವಪುರದ ಕನಗನಹಳ್ಳಿಯಲ್ಲಿ ಈ ಘಟನೆ ನಡೆದಿತ್ತು. ಬೊಮ್ಮಲಾಪುರ ನವೀನ್, ಪ್ರಕಾಶ್ ಎಂಬುವವರಿಗೆ ಹಲ್ಲೆ ನಡೆಸಿದ್ದರು .ಯುವತಿಯೊಬ್ಬಳಿಗೆ ಪ್ರೀತಿಸಿ ಮದುವೆಯಾಗಲು ಸಹಾಯ ಮಾಡಿದ್ದರು ಎಂಬ ಕಾರಣಕ್ಕೆ ಪ್ರಕಾಶ್ ಮೇಲೆ ದ್ವೇಷ ಬೆಳೆಸಿಕೊಂಡಿದ್ದರು.
ಈ ಮಧ್ಯೆ ಪ್ರಕಾಶ್ ಹಾಗೂ ಆತನ ಬಾಮೈದ ನವೀನ್ ಮೇಲೆ ಗಿರೀಶ್ ಅಂಡ್ ಗ್ಯಾಂಗ್ ಕ್ರೂರವಾಗಿ ಹಲ್ಲೆ ನಡೆಸಿದ್ದು ನವೀನ್ ಕಾಲನ್ನ ಸೈಜ್ ಗಲ್ಲಿನಿಂದ ಜಜ್ಜಿ ಹಾಕಿದ್ದರು. ಕಾಲು ಮುರಿಯುವ ದೃಶ್ಯವನ್ನ ಮೊಬೈಲ್ ನಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಹಲ್ಲೆ ವಿಡಿಯೋ ವೈರಲ್ ಆಗಿತ್ತು. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ಎಸ್ಕೇಪ್ ಆಗಿದ್ದರು.
ಪಾಂಡವಪುರ ಠಾಣೆಯ ಇನ್ಸ್ ಪೆಕ್ಟರ್ ಶರತ್ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿ ಮೊದಲ ದಿನವೇ ಇಬ್ಬರನ್ನ ಬಂಧಿಸಿದ್ದರು. ಬಳಿಕ ಸಂಬಂಧಿಕರ ಮನೆಗಳಲ್ಲಿ ಅಡಗಿದ್ದ ಉಳಿದ ಆರೋಪಿಗಳನ್ನಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ಒಟ್ಟು 14 ಆರೋಪಿಗಳ ಪೈಕಿ 11 ಮಂದಿ ಬಂಧನವಾಗಿದೆ.
Key words: Man, stone, Assault, 11 people, Arrest
The post ವ್ಯಕ್ತಿಗೆ ಸೈಜುಗಲ್ಲಿನಿಂದ ಜಜ್ಜಿ ಅಮಾನವೀಯ ಹಲ್ಲೆ: 11 ಮಂದಿ ಅಂದರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





