26
February, 2026

A News 365Times Venture

26
Thursday
February, 2026

A News 365Times Venture

ಧಾರವಾಡ ವಿದ್ಯಾರ್ಥಿಗಳ ಹೋರಾಟಕ್ಕೆ ಸರ್ಕಾರ ಗಡಗಡ: ಸುಳ್ಳುರಾಮಯ್ಯ ಅಂತಾಗಬೇಡಿ- ಅರವಿಂದ ಬೆಲ್ಲದ್

Date:

ಹುಬ್ಬಳ್ಳಿ,ಫೆಬ್ರವರಿ,25,2026 (www.justkannada.in):  ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗೆ ರಾಜ್ಯ ಸರ್ಕಾರ ಗಡಗಡ ನಡುಗಿದೆ. ಸಿದ್ದರಾಮಯ್ಯನವರೇ ಸುಳ್ಳು ಹೇಳಬೇಡಿ. ಸುಳ್ಳುರಾಮಯ್ಯ ಅಂತಾಗಬೇಡಿ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಅರವಿಂದ ಬೆಲ್ಲದ್,  ಧಾರವಾಡ ವಿದ್ಯಾರ್ಥಿಗಳ ಹೋರಾಟಕ್ಕೆ ಸರ್ಕಾರ ಗಡಗಡ ನಡುಗಿದೆ. ಖಾಲಿ ಹುದ್ದೆ ಭರ್ತಿ ಮಾಡುತ್ತೇವೆಂದು ಸಿಎಂ ಟ್ವಿಟ್ ಮಾಡಿದ್ದಾರೆ ಇದು ಹೋರಾಟಕ್ಕೆ ಸರ್ಕಾರ ಯಾವ ರೀತಿ ಅಂಜಿದೆ ಅಂತಾ ತೋರಿಸುತ್ತದೆ. ಖಾಲಿ ಹುದ್ದೆಗಳ ನೇಮಕಾತಿಗಾಗಿ ಈ ಹಿಂದೆ ಅನೇಕ ಹೋರಾಟ ನಡೆದಿದೆ. ವಿದ್ಯಾರ್ಥಿಗಳ ಪ್ರತಿಭಟನೆಗೆ ಅನುಮತಿ ನೀಡಿರಲಿಲ್ಲ ಎಂದರು.

ಉರ್ದು ಭಾಷೆಯಲ್ಲಿ ಸರ್ಕಾರದ ಆಹ್ವಾನ ಪತ್ರ ಪ್ರಕಟ ವಿಚಾರ ಕುರಿತು ಪ್ರತಿಕ್ರಿಯಿಸಿದ ಅರವಿಂದ ಬೆಲ್ಲದ್, ಸರ್ಕಾರ ಈ ರೀತಿ ಒಣ ರಾಜಕಾರಣ ಮಾಡುವ  ಅವಶ್ಯಕತೆ ಇಲ್ಲ.  ಅತಿಯಾದ ಓಲೈಕೆಯಿಂದ ಭಾಷಾ ಬಾಂದವ್ಯ ಹಾಳು ಮಾಡಬಾರದು ಕಾಂಗ್ರೆಸ್ ಮೊದಲಿನಿಂದಲೂ ಜಗಳ ತಂದಿಡುವ ಕೆಲಸ ಮಾಡುತ್ತಿದೆ . ಕಾಂಗ್ರೆಸ್  ಆಡಳಿತ ಮರೆತು ರಾಜಕಾರಣ ಮಾಡಬಾರದು. ಆಡಳಿತ ಮರೆತು ರಾಜಕಾರಣ ಮಾಡಿದರೆ ಮತ್ತೆ ಅಧಿಕಾರಕ್ಕೆ ಬರಲ್ಲ. ಕಾಂಗ್ರೆಸ ನವರೇ ನಮಗೆ ತಟ್ಟೆಯಲ್ಲಿ ಅಧಿಕಾರ ಬಿಟ್ಟು ಕೊಡುತ್ತಾರೆ ಎಂದು ಅರವಿಂದ ಬೆಲ್ಲದ್ ಹೇಳಿದರು.

Key words: Government, Dharwad, students, protest, Arvind Bellad

The post ಧಾರವಾಡ ವಿದ್ಯಾರ್ಥಿಗಳ ಹೋರಾಟಕ್ಕೆ ಸರ್ಕಾರ ಗಡಗಡ: ಸುಳ್ಳುರಾಮಯ್ಯ ಅಂತಾಗಬೇಡಿ- ಅರವಿಂದ ಬೆಲ್ಲದ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

അസമില്‍ 10 അടി ഉയരമുള്ള നെഹ്റുവിന്റെ പ്രതിമ തകര്‍ത്ത് അജ്ഞാതര്‍

ഗുവാഹത്തി: അസമില്‍ ഇന്ത്യയുടെ പ്രഥമ പ്രധാനമന്ത്രി ജവഹര്‍ലാല്‍ നെഹ്റുവിന്റെ പ്രതിമ തകര്‍ത്ത്...

நல்லகண்ணு மறைவு: "அரசியல்வாதிகளுக்கு பாடமாக விளங்கியவர்.!"- ஸ்டாலின் நேரில் அஞ்சலி

கம்யூனிஸ்ட் கட்சியின் மூத்த தலைவர் நல்லகண்ணு (101) உடல் நலக்குறைவால் இன்று...

Off The Record : నరసన్నపేట పొలిటికల్ స్క్రీన్‌పై మారుతున్న సీన్స్..

Off The Record : ఏపీ పాలిటిక్స్‌లో శ్రీకాకుళం జిల్లా నరసన్నపేట...

ರಾಜ್ಯದಲ್ಲಿ ಎಐ ಡೇಟಾ ಹಬ್ ಅಭಿವೃದ್ಧಿ: ಎಂ ಬಿ ಪಾಟೀಲ

  ಬೆಂಗಳೂರು,ಫೆ.೨೫,೨೦೨೬:  ಇ.ಎಸ್.ಡಿ.ಎಂ ವಲಯದ ಬೆಳವಣಿಗೆಗೆ ಪೂರಕವಾಗಿ ಕರಾವಳಿಯ ದಕ್ಷಿಣ ಕನ್ನಡ...