ಮೈಸೂರು, ಫೆ.೨೫,೨೦೨೬: ಸರಕಾರಿ ಉದ್ಯೋಗ ನೇಮಕಾತಿ ಕುರಿತಾಗಿ ಬಜೆಟ್‌ನಲ್ಲಿ ಮಹತ್ವದ ಘೋಷಣೆ ಮಾಡುವ ಸುಳಿವು ನೀಡಿದ ಸಿಎಂ ಸಿದ್ದರಾಮಯ್ಯ.
ಖಾಸಗಿ ಕಾರ್ಯಕ್ರಮ ನಿಮ್ಮಿತ್ತ ಇಂದು ಮೈಸೂರಿಗೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ, ಏರ್ಪೋರ್ಟ್ ನಲ್ಲಿ ಮಾಧ್ಯಮದವರ ಜತೆ ಮಾತನಾಡಿದರು.
ಒಳಮೀಸಲಾತಿ ಗೊಂದಲದಿಂದ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿದ್ದರೂ, ಈಗ ಸಮಸ್ಯೆ ಇತ್ಯರ್ಥಗೊಂಡಿದ್ದು ಶೀಘ್ರದಲ್ಲೇ ನೇಮಕಾತಿ ಆರಂಭವಾಗಲಿದೆ ಎಂದು ಭರವಸೆ ನೀಡಿದರು.
ಇದೇ ವೇಳೆ “ಕಾಂಗ್ರೆಸ್ ಕೊಟ್ಟ ಮಾತಿಗೆ ತಪ್ಪಲ್ಲ. ಸರಕಾರಿ ಉದ್ಯೋಗ ನೇಮಕಾತಿ ಮಾಡೇ ಮಾಡ್ತೀವಿ” ಎಂದು ಸಿಎಂ ಸ್ಪಷ್ಟಪಡಿಸಿದರು.
ಪ್ರತಿಭಟನೆ ಬಿಜೆಪಿ ಚಾಳಿ:
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ಅಧಿಕಾರದಲ್ಲಿದ್ದ ನಾಲ್ಕು ವರ್ಷಗಳಲ್ಲಿ ಒಂದೇ ಒಂದು ನೇಮಕಾತಿಯನ್ನೂ ಮಾಡಲಿಲ್ಲ ಎಂದು ಆರೋಪಿಸಿದರು. ಅಧಿಕಾರ ಕಳೆದುಕೊಂಡ ನಂತರ ಆಡಳಿತ ಪಕ್ಷದ ವಿರುದ್ಧ ಪ್ರತಿಭಟನೆ ನಡೆಸುವುದು ಬಿಜೆಪಿಗೆ ಚಾಳಿ ಆಗಿದೆ ಎಂದು ವ್ಯಂಗ್ಯವಾಡಿದರು. ಧಾರವಾಡದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಬಿಜೆಪಿ ನಾಯಕರನ್ನು ಸ್ಥಳದಿಂದ ಹೊರಹಾಕಿದ ಘಟನೆಗೆ ಇದೇ ಕಾರಣ ಎಂದು ಹೇಳಿದರು.

ನೈತಿಕತೆ ಎಲ್ಲಿದೆ:
ಕೇಂದ್ರ ಸರ್ಕಾರದ ವಿರುದ್ಧವೂ ಸಿಎಂ ತೀಕ್ಷ್ಣ ಟೀಕೆ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ( Narendra Modi ) ಅಧಿಕಾರಕ್ಕೆ ಬರುವ ಮುನ್ನ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು. ಆದರೆ 11 ವರ್ಷಗಳಾದರೂ ಭರವಸೆ ಈಡೇರಿಲ್ಲ. ಈ ಹಿಂದೆ ಯುವಕರು ಉದ್ಯೋಗ ವಿಚಾರವಾಗಿ ಕೇಳಿದಾಗ ‘ಸರಕಾರಿ ಉದ್ಯೋಗಕ್ಕಾಗಿ ಕಾಯಬೇಡಿ, ಸ್ವಂತ ಉದ್ಯೋಗ ಮಾಡಿ, ಪಕೋಡ ಮಾರಿರಿ’ ಎಂದು ಹೇಳಿದ ಮಾತನ್ನೂ ಸಿಎಂ ನೆನಪಿಸಿದರು.
“ಒಂದು ದೊಡ್ಡ ಪ್ರಮಾಣದ ಉದ್ಯೋಗ ಭರ್ತಿ ಮಾಡದ ಬಿಜೆಪಿ, ನಮ್ಮನ್ನು ಪ್ರಶ್ನಿಸುವ ನೈತಿಕತೆ ಏನು?” ಎಂದು ಸಿಎಂ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.

KEY WORDS:
Siddaramaiah, Government Job Recruitment, Budget Announcement Hint, Internal Reservation Issue Resolved, Recruitment to Begin Soon, Congress Keeps Its Promise, BJP Criticism, No Recruitment in 4 Years (BJP Rule), Dharwad Student Protest, Narendra Modi, 2 Crore Jobs Promise, 11 Years in Power, Pakoda Remark, Moral Right Questioned, Political Attack, Employment Debate,

SUMMARY:
Siddaramaiah made sharp remarks regarding government job recruitment and hinted at a major announcement in the upcoming Budget. He stated that the recruitment process had been delayed due to confusion over internal reservation, but the issue has now been resolved and appointments will begin soon.
“The Congress does not go back on its word. We will definitely carry out government job recruitments,” the Chief Minister assured.

Launching an attack on the BJP, he alleged that during its four years in power, not a single recruitment was undertaken. He mocked the party, saying it has become a habit for the BJP to stage protests against the ruling government only after losing power. Referring to the incident in Dharwad, he said BJP leaders were sent away from the students’ protest site for this very reason.

The Chief Minister also criticized the Central government. He recalled that before coming to power, Narendra Modi had promised to create 2 crore jobs annually. However, even after 11 years, the promise remains unfulfilled, he said. He further pointed out that when youth questioned the government about jobs, they were told not to wait for government employment but to pursue self-employment — even to sell pakodas.

“What moral right does the BJP have to question us when they themselves have not filled jobs on a large scale?” Siddaramaiah asked.

The post ಸರಕಾರಿ ಉದ್ಯೋಗ ನೇಮಕಾತಿ : “ ಗುಡ್ ನ್ಯೂಸ್” ನೀಡಿದ ಸಿಎಂ ಸಿದ್ದರಾಮಯ್ಯ.. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





