ಮಡಿಕೇರಿ, ಫೆಬ್ರವರಿ,19,2026 (www.justkannada.in): ವಾಹನಗಳ ತಪಾಸಣೆ ನಡೆಸುತ್ತಿದ್ದ ಪೊಲೀಸರಿಂದ ತಪ್ಪಿಸಿಕೊಳ್ಳುವ ಬರದಲ್ಲಿ ಅಪಘಾತವಾಗಿ ಬೈಕ್ ಸವಾರ ಸಾವನ್ನಪ್ಪಿ ಆತನ ಪತ್ನಿ ಗಂಭೀರ ಗಾಯಗೊಂಡ ಘಟನೆ ಕೊಡಗು ಜಿಲ್ಲೆ ಯಲ್ಲಿ ನಡೆದಿದೆ.
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡುಮಂಗಳೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮರೂರು ಗ್ರಾಮದ ನಟೇಶ್ (31) ಮೃತ ವ್ಯಕ್ತಿ, ಅವರ ಪತ್ನಿ ದಿವ್ಯಾ (30) ಸ್ಥಿತಿ ಚಿಂತಾಜನಕವಾಗಿದೆ. ಅಪಘಾತದಲ್ಲಿ ದಿವ್ಯಾರ ಎರಡೂ ಕಾಲುಗಳು ಮುರಿದಿವೆ ಎನ್ನಲಾಗಿದೆ.
ಬೈಕ್ ನಲ್ಲಿ ತೆರಳುತ್ತಿದ್ದಾಗ ವಾಹನದ ಕಾಗದಪತ್ರಗಳು ಇಲ್ಲದ ಹಿನ್ನೆಲೆ ಪೊಲೀಸರನ್ನು ನೋಡಿ ಗಾಬರಿಯಾದ ಬೈಕ್ ಸವಾರ ನಟೇಶ್ ಏಕಾಏಕಿ ವಾಹನ ತಿರುಗಿಸುವ ವೇಳೆ ಗೂಡ್ಸ್ ವಾಹನ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ. ಈ ಕುರಿತು ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: Accident, Rider, dies, wife, critical condition
The post ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಅಪಘಾತ: ಸವಾರ ಸಾವು: ಪತ್ನಿ ಸ್ಥಿತಿ ಗಂಭೀರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





