20
February, 2026

A News 365Times Venture

20
Friday
February, 2026

A News 365Times Venture

ಸಫಾರಿ ಆರಂಭಿಸದಂತೆ ಆಗ್ರಹ: ರೈತರಿಂದ ಪ್ರತಿಭಟನೆ

Date:

ಚಾಮರಾಜನಗರ,ಫೆಬ್ರವರಿ,19,2026 (www.justkannada.in):  ಬಂಡೀಪುರ ಅಭಯಾರಣ್ಯದಲ್ಲಿ ಸಫಾರಿ ಆರಂಭಿಸದಂತೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಮೇಲುಕಾಮನಹಳ್ಳಿಯಲ್ಲಿ ರೈತರು ಪ್ರತಿಭಟನೆ ನಡೆಸಿದರು.

ಮೇಲುಕಾಮನಹಳ್ಳಿಯ ಸಫಾರಿ ಕೇಂದ್ರದ ಬಳಿ ರೈತರು ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಸಫಾರಿ ಪುನಾರಂಭಿಸದಂತೆ ಹಾಗೂ ಸಫಾರಿಗೆ ಅನುಮತಿ ನೀಡಿರುವ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾನಿರತ ರೈತರನ್ನ ಪೊಲೀಸರು ವಶಕ್ಕೆ ಮುಂದಾಗಿದ್ದು ಈ ವೇಳೆ  ತಳ್ಳಾಟ ನೂಕಾಟ  ಮಾತಿನ ಚಕಮಕಿ ನಡೆಯಿತು.  ಎಲ್ಲಾ ರೈತರನ್ನ ಪೊಲೀಸರು ವಶಕ್ಕೆ ಪಡೆದರು. ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಬೇಗೂರು ಪೊಲೀಸ್ ಠಾಣೆಗೆ ರೈತರನ್ನ ರವಾನಿಸಿದರು.

ಇದಕ್ಕೂ ಮೊದಲು ಪೊಲೀಸರು ರೆಸಾರ್ಟ್ ಮಾಲೀಕರನ್ನು ವಶಕ್ಕೆ  ಪಡೆದಿದ್ದರು ಸಫಾರಿ ಪುನಾರಂಭ ಮಾಡಬೇಕೆಂದು ಆಗ್ರಹಿಸಿ ರೆಸಾರ್ಟ್ ಮಾಲೀಕರು ಪ್ರತಿಭಟನೆ ನಡೆಸಿದ್ದರು. ರೈತರ ಪ್ರತಿಭಟನಾ ಸ್ಥಳಕ್ಕೆ ನುಗ್ಗಲು ಯತ್ನಿಸಿ ರಸ್ತೆಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ರೆಸಾರ್ಟ್ ಮಾಲೀಕರು ಬೆಂಬಲಿಗರನ್ನ ಪೊಲೀಸರು ವಶಕ್ಕೆ ಪಡೆದು  ತೆರಕಣಾಂಬಿ ಠಾಣೆಗೆ ಕರೆದೊಯ್ದಿದ್ದರು.

Key words: Farmers, protest, safari , Chamaraja nagar

The post ಸಫಾರಿ ಆರಂಭಿಸದಂತೆ ಆಗ್ರಹ: ರೈತರಿಂದ ಪ್ರತಿಭಟನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

സുസ്ഥിരമായ സമൂഹം കെട്ടിപ്പടുക്കുന്നതിലാണ് ശ്രദ്ധ കേന്ദ്രീകരിക്കുന്നത്; ഇന്‍സ്റ്റഗ്രാമിനെതിരായ പരാതിയില്‍ സുക്കര്‍ബര്‍ഗ്

ലോസ് ഏഞ്ചല്‍സ്: മെറ്റയുടെ ഉടമസ്ഥതയിലുള്ള ഇന്‍സ്റ്റഗ്രാം മനപൂര്‍വം കുട്ടികളെ അടിമകളാക്കുന്നുവെന്നത് അടക്കമുള്ള...

ஒரே இரவில் 'ஓகே' ஆன கூட்டணி; கச்சிதமாக முடித்த மூவர் அணி! – திமுக முகாமில் தேமுதிக இணைந்தது எப்படி?

தேசிய முற்போக்கு திராவிடக் கழகத்தை ஆரம்பித்த விஜயகாந்த், அ.தி.மு.கவுடன் ஒருமுறை கூட்டணி...

Oil Imports: భారత్-అమెరికా ఆయిల్ ఘర్షణలో గెలిచిన సౌదీ అరేబియా..

Oil Imports: భారత్ రష్యా నుంచి చమురు దిగుమతి చేసుకుంటుందనే కోపంతో...