ಮೈಸೂರು,ಫೆಬ್ರವರಿ,18,2026 (www.justkannada.in): ಸಾಂಸ್ಕೃತಿಕ ಮೈಸೂರಿನಲ್ಲಿ 38ನೇ ಅಖಿಲ ಭಾರತೀಯ ಅಂಚೆ ಸಾಂಸ್ಕೃತಿಕ ಸಮ್ಮೇಳನ ನಡೆಯುತ್ತಿದ್ದು ಕರ್ನಾಟಕ ಅಂಚೆ ವೃತ್ತವು ಆಯೋಜಿಸಿರುವ ಈ ಐದು ದಿನಗಳ ಸಾಂಸ್ಕೃತಿಕ ಹಬ್ಬದಲ್ಲಿ ವಿವಿಧ ಸ್ಪರ್ಧೆಗಳು ನಡೆಯಿತು.
ಇಂದಿನ ಎರಡನೇ ದಿನದ ಸ್ಪರ್ಧೆಗಳಲ್ಲಿ 11 ಪ್ರಥಮ, 13 ದ್ವಿತೀಯ ಮತ್ತು 2 ತೃತೀಯ ಬಹುಮಾನಗಳನ್ನು ಗಳಿಸುವ ಮೂಲಕ ಕರ್ನಾಟಕ ಅಂಚೆ ವೃತ್ತ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಹಾಗೆಯೇ 14 ಪ್ರಥಮ, 4 ದ್ವಿತೀಯ ಮತ್ತು 1 ತೃತೀಯ ಬಹುಮಾನಗಳನ್ನು ಪಡೆಯುವ ಮೂಲಕ ಕೇರಳ ಅಂಚೆ ವೃತ್ತ ಎರಡನೇ ಸ್ಥಾನವನ್ನು, ಒಟ್ಟು 9 ಬಹುಮಾನಗಳನ್ನು ಪಡೆಯುವ ಮೂಲಕ ಒಡಿಶಾ ಅಂಚೆ ವೃತ್ತವು ಮೂರನೇ ಸ್ಥಾನವನ್ನು ಪಡೆದಿದೆ.
ಕರ್ನಾಟಕ ಅಂಚೆ ವೃತ್ತದ ಚಾರ್ಮಿ ಎಸ್, ಕಿರಿಯರ ವಿಭಾಗದ ಕರ್ನಾಟಕ ಶೈಲಿಯ ಜಾನಪದ ಗಾಯನದಲ್ಲಿ ಪ್ರಥಮ, ಒಡಿಸ್ಸಿ ನೃತ್ಯದಲ್ಲಿ, ಪಲ್ಲವಿ ಎಲ್ ಕೊಡಿಯ ಅವರು ದ್ವಿತೀಯ ಬಹುಮಾನ ಪಡದರೇ, ಹಿರಿಯರ ವಿಭಾಗದ ಕರ್ನಾಟಕ ಮತ್ತು ಹಿಂದೂಸ್ಥಾನಿ ಶೈಲಿಯ ಜಾನಪದ ಗಾಯನದಲ್ಲಿ ಪ್ರಥಮ ಮತ್ತು ತೃತೀಯ ಬಹುಮಾನವನ್ನು, ಶಾಂಭವಿ ದೇಗಾವಿ ಮಠ್ ಅವರು ತನ್ನದಾಗಿಸಿಕೊಂಡಿದ್ದಾರೆ. ಇನ್ನು ಕಿರಿಯರ ವಿಭಾಗದ ಹಿಂದೂಸ್ಥಾನಿ ಶೈಲಿಯ ಜಾನಪದ ಗಾಯನದಲ್ಲಿ ಪ್ರಥಮ ಬಹುಮಾನವನ್ನು ಪ್ರದ್ಯುಮ್ ಕೌಶಿಕ್ ಸಿ.ಜಿ. ಅವರು, ಹಿರಿಯರ ವಿಭಾಗದ ಹಿಂದೂಸ್ಥಾನಿ ಶೈಲಿಯ ಪಿಟೀಲು ವಾದನದಲ್ಲಿ ಸ್ಪರ್ಶ ಅವರು ಪ್ರಥಮ ಬಹುಮಾನ ಪಡೆದಿದ್ದಾರೆ. ಹಿರಿಯರ ವಿಭಾಗದ ಭರತ ನಾಟ್ಯದಲ್ಲಿ ಪ್ರಥಮ ಬಹುಮಾನ, ಶೃಷ್ಠಿ ಅವರು ಕಿರಿಯರ ವಿಭಾಗದ ಸಾತ್ರಿಯ ನೃತ್ಯದಲ್ಲಿ ದ್ವಿತೀಯ, ಪುಣ್ಯಶ್ರೀ ಡಿ ಎಂ ಕಿರಿಯರ ವಿಭಾಗದ ಮೋಹಿನಿಆಟ್ಟಂ ನೃತ್ಯದಲ್ಲಿ ದ್ವಿತೀಯ ಸೇರಿದಂತೆ ಹಲವರು ಬಹುಮಾನಗಳನ್ನು ಪಡೆದರು.
ಕೇರಳ ಅಂಚೆ ವೃತ್ತದ ನಿರಂಜನಾ ಕೆ. ಎಸ್. ಕಿರಿಯರ ವಿಭಾಗದ ಭರತನಾಟ್ಯಂನಲ್ಲಿ ಪ್ರಥಮ, ದುರ್ಗಾರಾಂ ಹಿರಿಯರ ವಿಭಾಗದ ಮೋಹಿನಿಆಟ್ಟಂನಲ್ಲಿ ಪ್ರಥಮ, ಗೌತಮ್ ಗಣೇಶ್ ಹಿರಿಯರ ವಿಭಾಗದ ಕಥಕಳಿ ನೃತ್ಯದಲ್ಲಿ ಪ್ರಥಮ, ನಯನ ವಾಸುದೇವ್ ಎನ್ ಅವರು ಹಿರಿಯರ ವಿಭಾಗದ ಕರ್ನಾಟದ ಶೈಲಿ ಜಾನಪದ ಗಾಯನದಲ್ಲಿ ದ್ವಿತೀಯ ಬಹುಮಾನ ಮತ್ತು ಕೆ. ಎನ್. ಶಿವಾನಂದನ ಎನ್ ಅವರು ಕಿರಿಯರ ವಿಭಾಗದ ಕರ್ನಾಟಕ ಶೈಲಿ ಜಾನಪದ ಗಾಯನದಲ್ಲಿ ದ್ವಿತೀಯ ಬಹುಮಾನವನ್ನು ಪಡೆದರು.
ಒಡಿಶಾ ಅಂಚೆ ವೃತ್ತದ ಬನಶ್ರೀ ಪಟ್ನಾಯಕ್ ಅವರು ಹಿರಿಯರ ವಿಭಾಗದ ಕರ್ನಾಟಕ ಶೈಲಿ ಜಾನಪದ ಗಾಯನದಲ್ಲಿ ದ್ವಿತೀಯ ಬಹುಮಾನವನ್ನುವಿಶೇಷ ಬಹುಮಾನವನ್ನು ಲಕ್ಷ್ಮಣ್ ದಾಸ್, ಕಿರಿಯರ ವಿಭಾಗದ ತಬಲ ವಾದನದಲ್ಲಿ ಅಮನ್ ಕುಮಾರ್ ದಾಸ್ ಪ್ರಥಮ ಬಹುಮಾನ ಹಾಗೂ ಹಿರಿಯರ ವಿಭಾಗದದಲ್ಲಿ ಪಡೆದರು.
ಕರ್ನಾಟಕ ಅಂಚೆ ವೃತ್ತವು ಆಯೋಜಿಸಿರುವ ಈ ಐದು ದಿನಗಳ ಸಾಂಸ್ಕೃತಿಕ ಹಬ್ಬದಲ್ಲಿ ಭಾರತದಾದ್ಯಂತದ 21 ಅಂಚೆ ವೃತ್ತಗಳ 335 ಅಂಚೆ ನೌಕರರು ಭಾಗವಹಿಸಿದ್ದು ಅಂಚೆ ನೌಕರರಲ್ಲಿ ಸಾಂಸ್ಕೃತಿಕ ವಿನಿಮಯ ಮತ್ತು ರಾಷ್ಟ್ರೀಯ ಏಕೀಕರಣವನ್ನು ಬಲಪಡಿಸುವ ಪ್ರಮುಖ ವೇದಿಕೆಯಾಗಿದೆ.
Key words: Mysore, All India Postal Cultural Conference, Karnataka Postal Circle
The post ಅಖಿಲ ಭಾರತೀಯ ಅಂಚೆ ಸಾಂಸ್ಕೃತಿಕ ಸಮ್ಮೇಳನ: 2ನೇ ದಿನದ ಸ್ಪರ್ಧೆಯಲ್ಲಿ ಕರ್ನಾಟಕ ಅಂಚೆ ವೃತ್ತ ಮೊದಲ ಸ್ಥಾನ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





