18
February, 2026

A News 365Times Venture

18
Wednesday
February, 2026

A News 365Times Venture

ಪಿಸಿಒಡಿ ಸಮಸ್ಯೆ ಬಗ್ಗೆ ಎಚ್ಚರದಿಂದಿರಿ- ಡಾ. ತೇಜಸ್ವಿನಿ ಸಲಹೆ

Date:

ಮೈಸೂರು, ಫೆಬ್ರವರಿ, 17, 2026 (www.justkannada.in): ಹೆಣ್ಣುಮಕ್ಕಳಲ್ಲಿ ಕಾಣಿಸಿಕೊಳ್ಳುವ ಪಿಸಿಒಡಿ ಸಮಸ್ಯೆ ಬಗ್ಗೆ ಎಚ್ಚರದಿಂದಿರಿ ಎಂದು ಡಾ. ತೇಜಸ್ವಿನಿ ಕಿವಿಮಾತು ಹೇಳಿದರು.

ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು (ಸ್ವಾಯತ್ತ) ವಿದ್ಯಾರ್ಥಿ ಕ್ಷೇಮಪಾಲನೆ  ಸಮಿತಿ, ಲೈಂಗಿಕ ಕಿರುಕುಳ ತಡೆ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ಸಂಯುಕ್ತ ಆಶ್ರಯದಲ್ಲಿ ಪಿಸಿಒಡಿ ಕುರಿತು ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ತೇಜಸ್ವಿನಿ, ಪಿಸಿಒಡಿ  ಸಮಸ್ಯೆಯ ಕಾರಣಗಳು, ಲಕ್ಷಣಗಳು, ಪರಿಣಾಮಗಳು ಹಾಗೂ ಚಿಕಿತ್ಸೆ ಕುರಿತು ಉಪನ್ಯಾಸದಲ್ಲಿ ವಿವರವಾಗಿ ತಿಳಿಸಿದರು.  ಹೆಣ್ಣುಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆ ಬಗ್ಗೆ ಎಚ್ಚರದಿಂದಿರಿ ಎಂದು ಸಲಹೆ ನೀಡಿದರು.

ಡಾ. ಆಯೀಷಾ ಅಮ್ ರೀತ್ ಮಾತನಾಡಿ, ಯುವತಿಯರಲ್ಲಿ ಹಾರ್ಮೋನ್ ಅಸಮತೋಲನ, ಅಸಮಯದ ಮಾಸಿಕ ಚಕ್ರ, ತೂಕ ಹೆಚ್ಚಳ, ಮೊಡವೆ, ಕೂದಲು ಉದುರುವಿಕೆ ಮುಂತಾದ ಸಮಸ್ಯೆಗಳ ಬಗ್ಗೆ ವಿವರಿಸಿದರು.  ಸಮತೋಲನ ಆಹಾರ, ನಿಯಮಿತ ವ್ಯಾಯಾಮ, ಯೋಗಾಭ್ಯಾಸ ಹಾಗೂ ಮಾನಸಿಕ ಒತ್ತಡ ನಿಯಂತ್ರಣದ ಅಗತ್ಯತೆಯನ್ನು ಒತ್ತಿಹೇಳಿದರು. ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸಲಹೆ ಪಡೆಯಲು ತಿಳಿಸಿದರು.

ವಿದ್ಯಾರ್ಥಿನಿಯರು ಮತ್ತು ಮಹಿಳಾ ಅಧ್ಯಾಪಕರು ಹಾಗು ಅಧ್ಯಪಕೇತರರ ಜತೆ ಸಂವಹನ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿ ಕ್ಷೇಮಪಾಲನೆ ಸಮಿತಿಯ ಸಂಯೋಜಕ ಡಾ. ಪ್ರೀತಿ ಎನ್. ತಲ್ಲೂರು ಅವರು ಅತಿಥಿಗಳನ್ನು ಹಾಗೂ ವಿದ್ಯಾರ್ಥಿನಿಯರನ್ನು ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಸುಮಾರು 350 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅರೋಗ್ಯ ತಪಾಸಣೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಅಬ್ದುಲ್ ರಹಿಮಾನ್ ಎಂ. ಅವರು ವಹಿಸಿದ್ದರು. IQAC ಸಂಯೋಜಕ  ಡಾ. ನಂದಕುಮಾರ್ ವಿ. ಅಧ್ಯಪಕರಾದ ರಾಜೇಶ್ವರಿ, ಬೃಂದಾ ಎನ್, ಸುಧಾ ಎಂ.ಸಿ., ಲೀಲಾವತಿ ಎನ್.ಕೆ., ಮಮತಾ ಎಂ., ಡಾ. ಲಕ್ಷ್ಮಿ ಎಂ ಪಲ್ಲೋಟಿ ಹಾಗೂ  ಸಿದ್ದುರಾಜು ಸಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Key words: Be careful, PCOD, Mysore maharani college

The post ಪಿಸಿಒಡಿ ಸಮಸ್ಯೆ ಬಗ್ಗೆ ಎಚ್ಚರದಿಂದಿರಿ- ಡಾ. ತೇಜಸ್ವಿನಿ ಸಲಹೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

സ്വകാര്യ സ്ഥലത്ത് നിസ്‌കരിച്ചവരെ കസ്റ്റഡിയിലെടുത്തു: ബറേലി എസ്.പിക്ക് അലഹബാദ് ഹൈക്കോടതിയുടെ കോടതിയലക്ഷ്യ നോട്ടീസ്

ലഖ്‌നൗ: സ്വകാര്യസ്ഥലങ്ങളില്‍ പ്രാര്‍ത്ഥനായോഗങ്ങള്‍ സംഘടിപ്പിക്കുന്നതിന് അനുമതി ആവശ്യമില്ലെന്ന കോടതി ഉത്തരവ് ലംഘിച്ച...

"அந்த போன்கால் வரட்டும்!" – காத்திருக்கும் அறிவாலயம்

நேற்று பிப்.17-ம் தேதி, தமிழ்நாடு காங்கிரஸ் கமிட்டியின் மாவட்டத் தலைவர்கள் கூட்டம்...

Regina Cassandra : బాలీవుడ్ గుట్టు విప్పిన రెజీనా కసాండ్రా!

తెలుగు ప్రేక్షకులో రెజీనా కసాండ్రా అంటే ఒక స్పెషల్ ఇమేజ్ ఉంది....

ಮಾಧ್ಯಮಗಳಿಗೆ ಕಡಿವಾಣ?  ಸರ್ಕಾರದ ವಿರುದ್ದ ಬಿಜೆಪಿ ನಾಯಕರಿಂದ ಕಿಡಿ

ಬೆಂಗಳೂರು,ಫೆಬ್ರವರಿ,18,2026 (www.justkannada.in): ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಬೈಟ್ ತೆಗೆದುಕೊಳ್ಳಲು ಸ್ಥಳ ನಿಗದಿ...