14
February, 2026

A News 365Times Venture

14
Saturday
February, 2026

A News 365Times Venture

ಮೈಸೂರು: ಶ್ರದ್ಧೆ, ಭಕ್ತಿಭಾವದಿಂದ ನೆರವೇರಿದ ಸಾಮೂಹಿಕ ಶ್ರೀ ಹನುಮಾನ್ ಚಾಲೀಸಾ ಪಾರಾಯಣ

Date:

ಮೈಸೂರು,ಫೆಬ್ರವರಿ,14,2026 (www.justkannada.in):  ಅವಧೂತ ದತ್ತಪೀಠದ ವತಿಯಿಂದ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಸಾಮೂಹಿಕ ಶ್ರೀ ಹನುಮಾನ್ ಚಾಲೀಸಾ ಪಾರಾಯಣ ಮಹಾಯಜ್ಞ ಶನಿವಾರ ಶ್ರದ್ಧೆ, ಭಕ್ತಿಭಾವದಿಂದ ನೆರವೇರಿತು.

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಿಕ್ಕಿರಿದು ಸೇರಿದ್ದ 50 ಸಾವಿರಕ್ಕೂ ಹೆಚ್ಚು ಹನುಮ ಭಕ್ತರ ಸಿರಿಕಂಠದಲ್ಲಿ ಹನುಮ ಸ್ಮರಣೆ ದೇಶದ ಧಿಕ್ಕಿಗೂ ಮಾರ್ದನಿಸಿತು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರೊಂದಿಗೆ ಪವಮಾನ ಹೋಮಕ್ಕೆ ಪೂರ್ಣಾಹುತಿ ಅರ್ಪಿಸಿದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ನಂತರ ವೇದಿಕೆಗೆ ಆಗಮಿಸಿದರು. ಈ ವೇಳೆ ಶಾಸಕರಾದ ಟಿ.ಎಸ್. ಶ್ರೀವತ್ಸ, ಜಿ.ಟಿ. ದೇವೇಗೌಡ, ಕೆ. ಹರೀಶ್ಗೌಡ ಹಾಗೂ ನಗರದ ಪ್ರಮುಖ ಗಣ್ಯರು ಸ್ವಾಮೀಜಿ ಭಕ್ತಿಪೂರ್ವಕವಾಗಿ ಸ್ವಾಗತಿಸಿದರು. ರಾಮ ಲಕ್ಷ್ಮಣ ಜಾನಕಿ ಜೈ ಬೋಲೋ ಹನುಮಾನ್ ಕಿ ಎಂಬ ಜೈ ಘೋಷದೊಂದಿಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸುಂದರಕಾಂಡದ ಕಥಾ ನಿರೂಪಣೆಯೊಂದಿಗೆ ಸಾಗಿದ ಈ ಪಾರಾಯಣವು ಸುಮಾರು 2 ಗಂಟೆಗಳ ಕಾಲ ನಿರಂತರವಾಗಿ ನಡೆಯಿತು. ಈ ಅವಧಿಯಲ್ಲಿ ಒಟ್ಟು 18 ಬಾರಿ ಹನುಮಾನ್ ಚಾಲೀಸಾ ಪಠಿಸಲಾಯಿತು.

ಕೇಸರಿಮಯವಾದ ಮೈದಾನ

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತರ ಕೈಯಲ್ಲಿ ಕೇಸರಿ ಧ್ವಜಗಳು ರಾರಾಜಿಸುತ್ತಿದ್ದವು. ಮೈದಾನದ ತುಂಬೆಲ್ಲಾ ಕೇಸರಿ ವರ್ಣದ ಧ್ವಜ ಕಳೆ ಕಟ್ಟಿದ್ದು, ಹನುಮ ಭಕ್ತರ ಸಾಗರವೇ ಹರಿದುಬಂದಂತಿತ್ತು. ದೇಶ ವಿದೇಶದ ಹಲವು ಮಂದಿ ಹನುಮ ಭಕ್ತರು ಭಗವಧ್ವಜ ಹಿಡಿದು ನೃತ್ಯ ಮಾಡುವ ಮೂಲಕ ಹನುಮಂತನನ್ನು ಆರಾಧಿಸಿದ್ದು ವಿಶೇಷವಾಗಿತ್ತು.

ಬರೋಬ್ಬರಿ 50 ಸಾವಿರಕ್ಕೂ ಹೆಚ್ಚು ಮಂದಿ ಈ ಪಾರಾಯಣ ಮಹಾಯಜ್ಞದಲ್ಲಿ ಭಾಗಿಯಾಗಿದ್ದರು. ನೆರೆದಿದ್ದ ಜನಸ್ತೋಮವನ್ನು ಉದ್ದೇಶಿಸಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.  ಕಾರ್ಯಕ್ರಮದ ಅಂತ್ಯದಲ್ಲಿ ರಾಷ್ಟ್ರಗೀತೆ ಹಾಡುವುದರೊಂದಿಗೆ ಮಹಾಯಜ್ಞ ಸಂಪನ್ನಗೊಂಡಿತು.

Key words: Mysore, Shri Hanuman Chalisa Parayana, devotion

The post ಮೈಸೂರು: ಶ್ರದ್ಧೆ, ಭಕ್ತಿಭಾವದಿಂದ ನೆರವೇರಿದ ಸಾಮೂಹಿಕ ಶ್ರೀ ಹನುಮಾನ್ ಚಾಲೀಸಾ ಪಾರಾಯಣ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

പുതിയ ബംഗ്ലാദേശ് സര്‍ക്കാര്‍ ഇന്ത്യയുമായുള്ള ബന്ധം ശക്തിപ്പെടുത്താന്‍ ആഗ്രഹിക്കുന്നു: താരിഖ് റഹ്‌മാന്റെ വക്താവ്

ധാക്ക: ഇന്ത്യയുമായി ഉഭയകക്ഷി ബന്ധം ശക്തമാക്കാന്‍ ആഗ്രഹിക്കുന്നെന്ന് ബംഗ്ലാദേശില്‍ ഭരണമുറപ്പിച്ച ബി.എന്‍.പി...

`அமித் ஷா உள்ளிட்டோர் அடிக்கடி தமிழ்நாட்டுக்கு வர வேண்டும்; அப்படி வந்தால்தான்…' – அன்பில் மகேஸ்

திருச்சி, திருவெறும்பூரில் பள்ளிக்கல்வித்துறை அமைச்சர் அன்பில் மகேஸ், செய்தியாளர்களைச் சந்தித்தார். அப்போது...

Indian Army Agniveer 2026: ఇండియన్ ఆర్మీలో అగ్నివీర్ రిక్రూట్‌మెంట్.. ఇలా దరఖాస్తు చేసుకోండి

భారత సైన్యంలో చేరాలని కలలు కనే అభ్యర్థులకు శుభవార్త. అగ్నివీర్ రిక్రూట్...

ಸರ್ಕಾರಕ್ಕೆ ಸಾವಿರ ದಿನ: ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಿ ವಿಶ್ವಾಸ ಗಳಿಸಿದೆ-ಹೆಚ್.ಎ ವೆಂಕಟೇಶ್

ಬೆಂಗಳೂರು,ಫೆಬ್ರವರಿ,14,2026 (www.justkannada.in): ರಾಜ್ಯದ ಕಾಂಗ್ರೆಸ್ ಸರ್ಕಾರ ಅತ್ಯಧಿಕ ಬಹುಮತದಿಂದ ಅಧಿಕಾರಕ್ಕೆ...