12
February, 2026

A News 365Times Venture

12
Thursday
February, 2026

A News 365Times Venture

ಲೈಂಗಿಕ ದೌರ್ಜನ್ಯ ಕೇಸ್: ಸಾಧುಕೋಕಿಲ, ಮಂಡ್ಯ ರಮೇಶ್ ವಿರುದ್ದದ ಪ್ರಕರಣ ರದ್ದು

Date:

ಬೆಂಗಳೂರು,ಫೆಬ್ರವರಿ,11,2026 (www.justkannada.in):  ಹಾಸ್ಯನಟರಾದ ಸಾಧುಕೋಕಿಲ ಮತ್ತು ಮಂಡ್ಯ ರಮೇಶ್ ವಿರುದ್ದ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಈ ಮೂಲಕ ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಸಾಧುಕೋಕಿಲ, ಮಂಡ್ಯ ರಮೇಶ್ ಗೆ ಬಿಗ್ ರಿಲೀಫ್ ಸಿಕ್ಕಿದೆ.  ಹೈಕೋರ್ಟ್ ನ್ಯಾಯಮೂರ್ತಿ ಎಂಜಿ ಉಮಾ ಅವರಿದ್ದ ಪೀಠ ಪ್ರಕರಣವನ್ನು ರದ್ದುಗೊಳಿಸಿ ಆದೇಶಿಸಿದೆ.

ಸಾಧುಕೋಕಿಲ ಮತ್ತು ಮಂಡ್ಯ ರಮೇಶ್ ವಿರುದ್ದ ಮಸಾಜ್ ಮಾಡಿಸಿಕೊಳ್ಳುವಾಗ ಲೈಂಗಿಕ ದೌರ್ಜನ್ಯವೆಸಗಿದ್ದ ಆರೋಪ ಕೇಳಿ ಬಂದಿತ್ತು. ಮೈಸೂರಿನ ಬ್ಯೂಟಿ ಪಾರ್ಲರ್ ಮಹಿಳೆಯೊಬ್ಬರು ಈ ರೀತಿ ಆರೋಪ ಮಾಡಿದ್ದರು.

ಪ್ರಕರಣ ಸಂಬಂಧ ಮೈಸೂರಿನ ಸರಸ್ವತಿಪುರಂ ಠಾಣಾ ಪೊಲೀಸರು ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ್ದರು.  ಆರೋಪಪಟ್ಟಿ ರದ್ದುಗೊಳಿಸುವಂತೆ ಕೋರಿ ಸಾಧು ಕೋಗಿಲ ಮತ್ತು ಮಂಡ್ಯರಮೇಶ್ ಅರ್ಜಿ ಸಲ್ಲಿಸಿದ್ದರು.

ಎಫ್ ಐಆರ್ ನಲ್ಲಿ ಹೆಸರಿಲ್ಲ. ಆರೋಪಕ್ಕೆ ಸಾಕ್ಷ್ಯಗಳಿಲ್ಲವೆಂದು ಅರ್ಜಿದಾರರ ಪರ ವಕೀಲ ಹೆಚ್ ಎಸ್ ಚಂದ್ರಮೌಳಿ ವಾದ ಮಂಡಿಸಿದ್ದರು.  ಸಾಕ್ಷಾಧಾರ ಕೊರತೆ ಹಿನ್ನೆಲೆಯಲ್ಲಿ ಹೈಕೋರ್ಟ್ ಪ್ರಕರಣವನ್ನು ರದ್ದುಪಡಿಸಿದೆ.

Key words: Sadhukokila, Mandya Ramesh, Sexual assault case, Case,  cancelled

 

The post ಲೈಂಗಿಕ ದೌರ್ಜನ್ಯ ಕೇಸ್: ಸಾಧುಕೋಕಿಲ, ಮಂಡ್ಯ ರಮೇಶ್ ವಿರುದ್ದದ ಪ್ರಕರಣ ರದ್ದು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

യു.എസിന്റെ അമിത ആവശ്യങ്ങള്‍ക്ക് ഇറാന്‍ വഴങ്ങില്ല: പെസസ്‌കിയാന്‍

ടെഹ്‌റാന്‍: സമാധാന ചര്‍ച്ചകള്‍ പുനരാരംഭിച്ചെങ്കിലും യു.എസിന്റെ അമിത ആവശ്യങ്ങള്‍ക്ക് കീഴടങ്ങില്ലെന്ന് ഇറാന്‍....

`ராஜா என்னுடைய பிள்ளை; யாரோ ஒரு தாய், தவறான கணிப்பிலே.!' – சர்ச்சை சம்பவம் குறித்து சாலமன் பாப்பையா

அமெரிக்காவில் நடைபெற்ற தமிழ்ச் சங்கம் நிகழ்ச்சியில், பிரபல பட்டிமன்றப் பேச்சாளர் ராஜா...

Off The Record: ఎస్.కోట టీడీపీలో మూడు గ్రూపుల మంట..

Off The Record: విజయనగరం జిల్లా శృంగవరపుకోట టీడీపీలో ప్రస్తుతం మూడు...

ಮಾ.5 ರಂದು ಸರ್ಕಾರದ ವಿರುದ್ದ ಗುತ್ತಿಗೆದಾರರ ಸಂಘದಿಂದ ಮುಷ್ಕರ-ಮಂಜುನಾಥ್ ಎಚ್ಚರಿಕೆ

ಮೈಸೂರು,ಫೆಬ್ರವರಿ,11,2026 (www.justkannada.in): ಬಾಕಿ ಹಣ ಬಿಡುಗಡೆ ಮಾಡದ ಸರ್ಕಾರದ ನಡೆ...