12
February, 2026

A News 365Times Venture

12
Thursday
February, 2026

A News 365Times Venture

ಮಾ.5 ರಂದು ಸರ್ಕಾರದ ವಿರುದ್ದ ಗುತ್ತಿಗೆದಾರರ ಸಂಘದಿಂದ ಮುಷ್ಕರ-ಮಂಜುನಾಥ್ ಎಚ್ಚರಿಕೆ

Date:

ಮೈಸೂರು,ಫೆಬ್ರವರಿ,11,2026 (www.justkannada.in): ಬಾಕಿ ಹಣ ಬಿಡುಗಡೆ ಮಾಡದ ಸರ್ಕಾರದ ನಡೆ ಖಂಡಿಸಿ ಗುತ್ತಿಗೆದಾರರು ಮಾರ್ಚ್ 5 ರಂದು ರಾಜ್ಯ ಸರ್ಕಾರದ ವಿರುದ್ದ ಮುಷ್ಕರ ಹೂಡುತ್ತೇವೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಮಂಜುನಾಥ್, ಸಿಎಂ ತವರು ಜಿಲ್ಲೆಯಿಂದಲೇ ಹೋರಾಟದ ಕಹಳೆ ಮೊಳಗಿಸುತ್ತೇವೆ.  37 ಸಾವಿರ ಕೋಟಿ ಬಾಕಿ ಹಣ ಕೂಡಲೇ ಬಿಡಗಡೆ ಮಾಡಬೇಕು ಸರ್ಕಾರ ಬಾಕಿ ಹಣ ಬಿಡುಗಡೆ ಮಾಡದಿದ್ದರೆ ಪ್ರತಿಭಟನೆ  ಮಾಡುತ್ತೇವೆ. ಮಾರ್ಚ್ 5 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಗೆ ಸಿದ್ದತೆ ನಡೆಸಲಾಗುತ್ತಿದೆ ಎಂದರು.

ಮುಷ್ಕರದಲ್ಲಿ ಸುಮಾರು 30 ಸಾವಿರ ಗುತ್ತಿಗೆದಾರರು ಭಾಗಿಯಾಗಲಿದ್ದಾರೆ.  ಮುಖ್ಯ ಕಾರ್ಯದರ್ಶಿ ಸಚಿವರಿಗೆ ಪತ್ರ ಬರೆದರೂ ಪ್ರಯೋಜನವಾಗುತ್ತಿಲ್ಲ. ಕಳೆದ 2 ವರ್ಷದಲ್ಲಿ ಸಿಎಂ ಸಿದ್ದರಾಮಯ್ಯ ಒಂದು ಸಭೆಯನ್ನೂ ಮಾಡಿಲ್ಲ.  ಸರ್ಕಾರಲ್ಲಿ ಹಣ ಇಲ್ಲದಿದ್ದರಿಂದ ಗುತ್ತಿಗೆದಾರರಿಗೆ ಹಣ ನೀಡುತ್ತಿಲ್ಲ ಗುತ್ತಿಗೆದಾರರ ಮೇಲೆ ಸರ್ಕಾರಕ್ಕೆ ಯಾಕೆ ತಾತ್ಸಾರ ಗೊತ್ತಿಲ್ಲ . ನಮ್ಮ ಸರ್ಕಾರ ಬಂದ್ರೆ 1 ರೂ. ಕಮಿಷನ್ ತೆಗೆದುಕೊಳ್ಳಲ್ಲ ಅಂತಿದ್ದರು. ಈ ಹಿಂದೆ ಸಿದ್ದರಾಮಯ್ಯ ಭರವಸೆ ನೀಡಿದ್ದರು.  ಅದರೆ ಈಗ ಕೋರ್ಟ್ ಗೆ ಹೋಗಲಿ ಅಂತಾ ಸಿದ್ದರಾಮಯ್ಯ ಹೇಳುತ್ತಿದ್ದಾರೆ.  ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದರೇ ಸಮಸ್ಯೆಗೆ ಶೇ 75ರಷ್ಟು ಪರಿಹಾರ ಸಿಗಲಿದೆ ಎಂದರು.

ನೀರಾವರಿ ಇಲಾಖೆಯಲ್ಲಿ ಸುಮಾರು 3500 ಕೋಟಿ ರೂ. ಬರಬೇಕು. ಕಾಂಗ್ರೆಸ್ ಸರ್ಕಾರದಲ್ಲಿ ಬಹಳಷ್ಟು ಮಂದಿ ಮಧ್ಯವರ್ತಿಗಳಿದ್ದಾರೆ.  ಸಿದ್ದರಾಮಯ್ಯ ಸರ್ಕಾರದಲ್ಲಿ ಇನ್ನೂ ಹೆಚ್ಚು ಕಮಿಷನ್ ಪಡೆಯುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ 40 % ಎಂದು ಹೇಳಿದ್ದು ತಪ್ಪಾಗಿದೆ ಅನ್ನಿಸುತ್ತಿದೆ. ಸಮಸ್ಯೆ ಬಗೆಹರಿಯದಿದ್ದರೆ ಮಾರ್ಚ್ 5 ರಿಂದ ಎಲ್ಲಾ ಕಾಮಗಾರಿ ನಿಲ್ಲಿಸುತ್ತೇವೆ ಎಂದು ಸರ್ಕಾರಕ್ಕೆ ಮಂಜುನಾಥ್ ವಾರ್ನಿಂಗ್ ನೀಡಿದರು.

Key words: Contractors, Association, strike, against, government, Manjunath

The post ಮಾ.5 ರಂದು ಸರ್ಕಾರದ ವಿರುದ್ದ ಗುತ್ತಿಗೆದಾರರ ಸಂಘದಿಂದ ಮುಷ್ಕರ-ಮಂಜುನಾಥ್ ಎಚ್ಚರಿಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

‘മറ്റേ മോന്‍’ എന്നത് നിങ്ങള്‍ വ്യാഖ്യാനിച്ചതാണ്; ഞാനതല്ല ഉദ്ദേശിച്ചത്; ന്യായീകരണവുമായി സുരേഷ് ഗോപി

തിരുവനന്തപുരം: എയിംസ് കേരളത്തില്‍ വരുന്നതുമായി ബന്ധപ്പെട്ട് സംസാരിക്കുന്നതിനിടെ നടത്തിയ വിവാദ പരാമര്‍ശത്തില്‍...

குண்டு வீசும் முதல்வர்; திகைப்பில் கதர் சட்டைகள் – புகையும் திமுக – காங்கிரஸ் கூட்டணி!

தமிழக சட்டமன்றத் தேர்தல் நெருங்கும் நிலையில் திமுக - காங்கிரஸ் கூட்டணிக்குள்...

Seetha Payanam: బ్రహ్మానందం చేతుల మీదుగా ‘సీతా పయనం’ ప్రీ-రిలీజ్ ఈవెంట్.. హైలైట్స్ ఇవే!

Seetha Payanam: యాక్షన్ కింగ్ అర్జున్ సర్జా దర్శకత్వంలో నిరంజన్, ఐశ్వర్య...

ಮೈಸೂರು ಪೊಲೀಸರ ಕಾರ್ಯಾಚರಣೆ: ಅಕ್ರಮ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಅರೋಪಿಗಳ ಬಂಧನ

ಮೈಸೂರು,ಫೆಬ್ರವರಿ,11,2026 (www.justkannada.in): ಅಕ್ರಮ ಮಾದಕ ವಸ್ತು ಸಾಗಾಟದ ಮೇಲೆ ಮೈಸೂರಿನ...