11
February, 2026

A News 365Times Venture

11
Wednesday
February, 2026

A News 365Times Venture

ಎಸ್ ಸಿ-ಎಸ್ ಟಿಯ ಮೀಸಲಾತಿಯ ಹೆಚ್ಚಳಕ್ಕೆ ಕೇಂದ್ರಕ್ಕೆ ಒತ್ತಾಯ-ಸಿಎಂ ಸಿದ್ದರಾಮಯ್ಯ

Date:

ಹರಿಹರ , ಫೆಬ್ರವರಿ, 09,2026 (www.justkannada.in) : ಸರ್ಕಾರ ಸಾಮಾಜಿಕ ನ್ಯಾಯದ ಪರವಾಗಿದ್ದು, ಜನಸಂಖ್ಯೆಯ ಅನುಗುಣವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಠ ವರ್ಗಗಳ ಮೀಸಲಾತಿಯ ಹೆಚ್ಚಳಕ್ಕೆ ಕೇಂದ್ರವನ್ನು ಒತ್ತಾಯಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿ ಇವರ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೆ -2026 ಜನ ಜಾಗೃತಿ ಜಾತ್ರ ಮಹೋತ್ಸವ ಉದ್ಘಾಟನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಹಕ್ಕುಗಳ ರಕ್ಷಣೆಗೆ ಶಿಕ್ಷಣ ಅಗತ್ಯ

ವಾಲ್ಮೀಕಿ ಸಮುದಾಯವಷ್ಟೇ ಅಲ್ಲದೇ, ಎಲ್ಲ ಶೋಷಿತ ಸಮಾಜಗಳೂ ತಮ್ಮ ಇತಿಹಾಸ ಮರೆಯಬಾರದು. ಈ ದಿಸೆಯಲ್ಲಿ ಇಂದಿನ ಜಾತ್ರೆ ಅತ್ಯಂತ ಮಹತ್ವವಾಗಿದೆ. ಇತಿಹಾಸ ತಿಳಿಯದಿದ್ದರೆ ಭವಿಷ್ಯ ನಿರ್ಮಾಣ ಸಾಧ್ಯವಿಲ್ಲ. ಶಿಕ್ಷಣ , ಸಂಘಟನೆ ಹಾಗೂ ಹೋರಾಟಗಳಿಂದ ಮಾತ್ರ ಶೋಷಿತರು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಬಹುದು. ಮೌಢ್ಯ ಕಂದಾಚಾರಗಳಿಂದ ದೂರವಾಗಲು ಶಿಕ್ಷಣ ಅಗತ್ಯ.  ಹಿಂದಿನಿಂದಲೂ ಶೋಷಿತ ಸಮುದಾಯ ಶಿಕ್ಷಣದಿಂದ ವಂಚಿತವಾಗಿತ್ತು.   ಮಹರ್ಷಿ ವಾಲ್ಮೀಕಿಯವರು  ಶಿಕ್ಷಣ ಪಡೆದು ರಾಮಾಯಣದಂತಹ ಮಹತ್ತರ ರಚನೆ ಮಾಡಿದರು. ಮಹಾಭಾರತ ರಚಿಸಿದ ವ್ಯಾಸ ಮುನಿಗಳು ಬೆಸ್ತರ ಸಮುದಾಯಕ್ಕೆ ಸೇರಿದವರು.  ಚತುರ್ವರ್ಣ ವ್ಯವಸ್ಥೆಯಲ್ಲಿ  ಶೂದ್ರರಿಗೆ ಶಿಕ್ಷಣದಿಂದ ಹೊರಗಿಡಲಾಯಿತು. ಆದರೆ ಸಂವಿಧಾನ ಜಾರಿಗೆ ಬಂದ ನಂತರ ಸಮಾನ ಅವಕಾಶಗಳು ದೊರೆಯತೊಡಗಿತು. ಶೋಷಿತರು ಶಿಕ್ಷಣದಿಂದ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಆದ್ದರಿಂದ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ತಳಸಮುದಾಯದವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ  , ಶೈಕ್ಷಣಿಕವಾಗಿ ಶಕ್ತಿ ತುಂಬಲಾಗುತ್ತಿದೆ ಎಂದರು.

ಜಾತಿವ್ಯವಸ್ಥೆಯಿಂದ ಅಸಮಾನತೆ

ಡಾ. ಬಿ.ಆರ್. ಅಂಬೇಡ್ಕರ್ ಅವರು ತಿಳಿಸಿದಂತೆ, ಪ್ರತಿಯೊಬ್ಬರಿಗೂ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ನಿಜ ಅರ್ಥದಲ್ಲಿ ಸ್ವಾತಂತ್ರ್ಯ ದೊರೆತಂತಾಗುತ್ತದೆ ಎಂದಿದ್ದರು. ಪಟ್ಟಭದ್ರ ಹಿತಾಸಕ್ತಿಗಳು ಜಾತಿವ್ಯವಸ್ಥೆಯನ್ನು ಹುಟ್ಟುಹಾಕಿದ್ದು, ಸಮಾಜದಲ್ಲಿ ಅಸಮಾನತೆಗೆ ಕಾರಣವಾಗಿದೆ. ಆರ್ಥಿಕ ಮತ್ತು ಸಾಮಾಜಿಕ ಶಕ್ತಿಯಿಂದ ಮಾತ್ರ ಸಮಾಜದಲ್ಲಿನ ಅಸಮಾನತೆ ತೊಲಗಲು ಸಾಧ್ಯ. ತಮ್ಮ ಹಕ್ಕುಗಳ ಬಗ್ಗೆ ಜಾಗೃತಿಯಿದ್ದರೆ ಮಾತ್ರ ಸಮಾಜದಲ್ಲಿ  ಬದಲಾವಣೆ ತರಲು ಸಾಧ್ಯ ಎಂದರು.ಬಸವಣ್ಣನವರು ಜಾತಿವರ್ಗಗಳ ವ್ಯವಸ್ಥೆಗಳ ನಿರ್ಮೂಲನೆಗೆ ಒತ್ತು ನೀಡಿದ್ದರು. ಆದರೆ ಇಂದಿಗೂ ಚಲನೆಯಿಲ್ಲದ ಜಾತಿವ್ಯವಸ್ಥೆ ನಮ್ಮಲ್ಲಿ ಪ್ರಚಲಿತವಾಗಿದೆ. ಪಟ್ಟಭದ್ರಹಿತಾಸಕ್ತಿಗಳು ಮೌಢ್ಯಗಳಿಗೆ, ಕಂದಾಚರಗಳನ್ನು ಪ್ರೋತ್ಸಾಹಿದ್ದರು. ಈ ಪಿತೂರಿಯಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಶಿಕ್ಷಣ ಅತ್ಯಗತ್ಯ ಎಂದರು.

ಬಿಜೆಪಿಯಿರುವ ರಾಜ್ಯಗಳಲ್ಲಿ ಎಸ್ ಸಿ ಎಸ್ ಪಿ/ಟಿಎಸ್ ಪಿ  ಕಾಯ್ದೆ ಇಲ್ಲ

ನಮ್ಮ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಎಸ್ ಸಿ ಎಸ್ ಪಿ/ಟಿಎಸ್ ಪಿ  ಯೋಜನೆಯನ್ನು ಜಾರಿಗೆ ತಂದಿತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ದೊರೆಯಬೇಕೆಂದು 2013 ರಲ್ಲಿ ಜಾರಿಗೆ ತರಲಾಯಿತು. 2025-26 ಕ್ಕೆ ಈ ಯೋಜನೆಯಡಿ 42018 ಕೋಟಿ ರೂ.ಗಳನ್ನು ನೀಡಲಾಗಿದೆ. ಬಿಜೆಪಿಯವರು ನಾಲ್ಕು ವರ್ಷ ಅಧಿಕಾರದಲ್ಲಿದ್ದರೂ , ಈ ಅವಧಿಯಲ್ಲಿ  1.10 ಲಕ್ಷ ಕೋಟಿ ಮಾಡಿದರೆ, ಆದರೆ ಕಾಂಗ್ರೆಸ್ ಸರ್ಕಾರ ಮೂರು ವರ್ಷದಲ್ಲಿ 1.17 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ. ಇಂತಹ ಜನಪರ ಕಾನೂನನ್ನು ಜಾರಿಗೆ ತಂದ ಕೇವಲ ಮೂರು ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂಬ ಹೆಮ್ಮೆ ನಮಗಿದೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಈ ಕಾಯ್ದೆಯನ್ನು ಜಾರಿಗೆ ತಂದಿಲ್ಲ. ಸುಪ್ರೀಂ ಕೋರ್ಟ್ ನಲ್ಲಿ ಎಸ್ ಸಿ ಎಸ್ ಪಿ/ಟಿಎಸ್ ಪಿ ಕಾಯ್ದೆಯನ್ನು ಎತ್ತಿಹಿಡಿಯಲಾಗಿದೆ ಎಂದರು.

ಎಸ್ ಸಿ ಎಸ್ ಟಿ ವರ್ಗಗಳಿಗೆ ಸರ್ಕಾರದ ಯೋಜನೆಗಳು

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಗುತ್ತಿಗೆದಾರರಿಗೆ ಗುತ್ತಿಗೆಯಲ್ಲಿ ಮೀಸಲಾತಿ   ಹಾಗೂ ಸರ್ಕಾರಿ ನೌಕರರಿಗೆ ಪದೋನ್ನತಿಯಲ್ಲಿಯೂ ಮೀಸಲಾತಿಯನ್ನು ತರಲಾಯಿತು.   ರಾಜ್ಯಲ್ಲಿನ ಹಲವು ಮಠಗಳಿಗೆ ಸರ್ಕಾರ ಸುಮಾರು 50 ಎಕರೆ ಜಾಗವನ್ನು ನೀಡಿದ್ದು, ವಾಲ್ಮೀಕೀ ಮಠಕ್ಕೆ 4.18 ಎಕರೆ ಜಾಗವನ್ನು ನೀಡಿದೆ.ಶೋಷಿತ ಸಮುದಾಯಗಳ ಪರವಾಗಿ ಯಾವ ಸರ್ಕಾರವಿದೆ ಎಂಬ ಬಗ್ಗೆ ಜನರು ಚಿಂತನೆ ನಡೆಸಬೇಕು. ಎಸ್ ಸಿ ಎಸ್ ಟಿ ಸಮುದಾಯವರು ರಾಜ್ಯದಲ್ಲಿ ಶೇ. 24.1 ರಷ್ಟಿದ್ದು, ಈ ಜನಸಂಖ್ಯೆಗೆ ಅನುಗುಣವಾಇ ಮೀಸಲಾತಿ ಹೆಚ್ಚಿಸಬೇಕೆಂದ ನಮ್ಮ ಶಿಫಾರಸ್ಸಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.  ಇದನ್ನು 9ನೇ ಶೆಡ್ಯೂಲ್ ಗೆ ಸೇರಿಸಬೇಕೆಂದು ,  ಈ ಮೀಸಲಾತಿಯನ್ನು ಜಾರಿಮಾಡಲೇಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಾಗಿ ಸಿಎಂ ತಿಳಿಸಿದರು.

ಸಮುದಾಯದ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸುವ ಭರವಸೆ

ಉದ್ಯೋಗ, ಶಿಕ್ಷಣ, ಆರ್ಥಿಕ ಸಾಮಾಜಿಕ ಸಮಾನತೆ ದೊರೆಯದ ಹೊರತು ಸಮಾನತೆ ಸ್ಥಾಪಿಸಲು ಸಾಧ್ಯವಿಲ್ಲ. ಸಮುದಾಯದ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸಲಾಗುವುದು. ಸಂವಿಧಾನ ವಿರೋಧಿಗಳು ಅಧಿಕಾರದಲ್ಲಿದ್ದರೆ, ಸಂವಿಧಾನದ ಜಾರಿಯಾಗುವುದಿಲ್ಲ ಎಂಬ ಸತ್ಯವನ್ನು ಎಲ್ಲರೂ ಅರಿಯಬೇಕಿದೆ. ನಮ್ಮ ಸರ್ಕಾರ ಸಾಮಾಜಿಕ ನ್ಯಾಯದ ಪರ ಎಂದರು.

Key words: CM Siddaramaiah, urges, Centre, increase, reservation, SC-ST

The post ಎಸ್ ಸಿ-ಎಸ್ ಟಿಯ ಮೀಸಲಾತಿಯ ಹೆಚ್ಚಳಕ್ಕೆ ಕೇಂದ್ರಕ್ಕೆ ಒತ್ತಾಯ-ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ವಿಳಂಬ ಮಾಡದೇ ಹೈಕಮಾಂಡ್ ತಮ್ಮ ನಿರ್ಣಯ ಹೇಳಬೇಕು- ಶಾಸಕ ದೇಶಪಾಂಡೆ

ಬೆಂಗಳೂರು,ಫೆಬ್ರವರಿ,10,2026 (www.justkannada.in):  ರಾಜ್ಯದಲ್ಲಿ ಮತ್ತೆ ಸಿಎಂ ಕುರ್ಚಿ ವಿಚಾರ ಚರ್ಚೆಯಾಗುತ್ತಿದ್ದು...

ഏറ്റവും വില കുറച്ച് ലഭിക്കുന്നിടത്ത് നിന്നും ഇന്ത്യ എണ്ണ വാങ്ങും; പാര്‍ലമെന്ററി പാനലിനോട് കേന്ദ്രം

ന്യൂദല്‍ഹി: മികച്ച ഗുണനിലവാരത്തില്‍ ഏറ്റവും വിലകുറച്ച് ലഭിക്കുന്നിടത്തു നിന്നും ഇന്ത്യ ക്രൂഡ്...

TVK: “100-க்கும் மேற்பட்ட ரெளடிகள் அராஜகத் தாக்குதல்" – தவெக தலைவர் விஜய் காட்டமான பதிவு!

தமிழ்நாட்டில் நடைபெற உள்ள சட்டசபை தேர்தலில் விஜய்யின் தமிழக வெற்றிக் கழகம்...

Monalisa: తన ఫస్ట్‌ మూవీ రెమ్యునరేషన్‌తో స్కూల్‌ పెడుతోన్న మోనాలిసా..

Monalisa: ప్రయాగ్‌రాజ్‌లో జరిగిన మహా కుంభమేళాలో దండలు అమ్ముతూ ఒక్కసారిగా దేశవ్యాప్తంగా...