17
February, 2026

A News 365Times Venture

17
Tuesday
February, 2026

A News 365Times Venture

ಬಿಹಾರದಲ್ಲಿ ಕರ್ನಾಟಕದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

Date:

ಬೆಂಗಳೂರು, ಫೆಬ್ರವರಿ ,7,2026 (www.justkannada.in): ಬಿಹಾರಕ್ಕೆ ಪ್ರವಾಸಕ್ಕೆ ತೆರಳಿದ್ದ ಕರ್ನಾಟಕದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಸೋಲದೇವನಹಳ್ಳಿ (Bengaluru rural)ಪೊಲೀಸ್ ಠಾಣಾ ವ್ಯಾಪ್ತಿಯ ಒಂದೇ ಕುಟುಂಬದ ನಾಲ್ಕು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನಾಗಪ್ರಸನ್ನ, ತಾಯಿ ಸುಮಂಗಲಾ(78), ಸಹೋದರಿ ಶಿಲ್ಪಾ(48), ಶ್ರುತಾ (43) ಆತ್ಮಹತ್ಯೆಗೆ ಶರಣಾದವರು.

ಕೆಲ ತಿಂಗಳ ಹಿಂದೆ ಫ್ರೀಫೈರ್ ಗೇಮ್ ಅಡಿಕ್ಟ್ ಆಗಿದ್ದ ತನ್ನ ಅಕ್ಕನ ಮಗ ಅಮೋಘಕೀರ್ತಿಯನ್ನು ಕೊಲೆ ಮಾವ ನಾಗಪ್ರಸಾದ್  ಕೊಲೆ ಮಾಡಿದ್ದರು. ಬಾಲಕನ ಸಾವಿನ ಹಿನ್ನೆಲೆ ಮನನೊಂದಿದ್ದ ಕುಟುಂಬಸ್ಥರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಮೃತ ಶರೀರಗಳ ಬಳಿ ನಿದ್ದೆ ಮಾತ್ರೆಗಳು ಸಿಕ್ಕಿದ್ದು, ಈ ಮಾತ್ರೆಗಳ ಓವರ್ ಡೋಸ್​ನಿಂದಲೇ ಕುಟುಂಬ ಮೃತಪಟ್ಟಿದೆ ಎನ್ನಲಾಗಿದೆ.

ಬಾಲಕ ಅಮೋಘಕೀರ್ತಿ  ಮೊಬೈಲ್ ​ನಲ್ಲಿ ಫ್ರೀಫೈರ್ ಗೇಮ್​​ ಗೆ ಅಡಿಕ್ಟ್ ಆಗಿದ್ದ. ಗೇಮ್ ಚಟಕ್ಕೆ ಬಿದ್ದು ಪದೇ ಪದೇ ಹಣ ಕೇಳುತ್ತಿದ್ದ. ಇದರಿಂದ ಬೇಸತ್ತ ನಾಗಪ್ರಸಾದ್ ಬಾಲಕ ಅಮೋಘಕೀರ್ತಿಯನ್ನು ಕೊಲೆ ಮಾಡಿದ್ದ.  ಘಟನೆಯ ಬಳಿಕ ಹಣದ ಕೊರತೆಯಿಂದ ಮೆಜೆಸ್ಟಿಕ್‌ನಲ್ಲಿ ಮೂರು ದಿನ ಕಾಲ ತಂಗಿದ್ದ ನಾಗಪ್ರಸಾದ್, ನಂತರ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ಶರಣಾಗಿದ್ದನು. ಪೊಲೀಸರು ಆತನ ಮೇಲೆ ಎಫ್​ಐಆರ್ ದಾಖಲಿಸಿ ಜೈಲಿನಲ್ಲಿಟ್ಟಿದ್ದರು.

ಬಳಿಕ ಆತನ ತಂಗಿ ಶಿಲ್ಪಾ ಬೇಲ್ ಮೂಲಕ ಅಣ್ಣನನ್ನು ಜೈಲಿನಿಂದ ಹೊರ ತಂದಿದ್ದರು. ಬಾಲಕ ಸಾವಿನಿಂದ ನೊಂದಿದ್ದ ಕುಟುಂಬದವರು ಬಿಹಾರದ ಪ್ರವಾಸ ಕೈಗೊಂಡಿದ್ದರು. ಇದೀಗ ಬಿಹಾರದಲ್ಲಿ  ನಾಲ್ವರೂ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದುಬಂದಿದೆ.

Key words: Four members, family, Karnataka, commit suicide, Bihar

The post ಬಿಹಾರದಲ್ಲಿ ಕರ್ನಾಟಕದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಕೃತಕ ಬುದ್ದಿಮತ್ತೆ ಅಂದ್ರೆ ರೈತರ ನಿರ್ಧಾರ ಶಕ್ತಿಯನ್ನು ಬಲಪಡಿಸುವ ತಂತ್ರಜ್ಞಾನ – ಡಾ. ಕೆ. ಎಂ. ಹರಿಣಿ ಕುಮಾರ್

ಮೈಸೂರು,ಫೆಬ್ರವರಿ,16,2026 (www.justkannada.in): ಕೃಷಿಯ ಭವಿಷ್ಯವನ್ನು ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಸುವ...

എക്‌സ് വീണ്ടും പണിമുടക്കി; 25,000ത്തിലധികം പരാതികള്‍, ഇന്ത്യയിലും തടസപ്പെട്ടു

ടെക്‌സസ്: ഇലോണ്‍ മസ്‌ക്കിന്റെ ഉടമസ്ഥതയിലുള്ള സോഷ്യല്‍ മീഡിയ പ്ലാറ്റ്‌ഫോമായ എക്‌സ് പണിമുടക്കി....

மேற்கு வங்கம்: தனித்து போட்டியிடும் காங்கிரஸ்; உருவாகும் நான்கு முனைப்போட்டி – பாஜக-வுக்கு சாதகமா?

மேற்குவங்கத்தில் இன்னும் சில மாதங்களில் சட்டமன்றத் தேர்தல் நடைபெற இருக்கும் நிலையில்,...