ಬೆಂಗಳೂರು,ಫೆಬ್ರವರಿ,5,2026 (www.justkannada.in): ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್ ಸಿಎಲ್ ಶಾಕ್ ನೀಡಿದ್ದು ಶೇ. 5 ರಷ್ಟು ಮೆಟ್ರೋ ಪ್ರಯಾಣ ದರ ಏರಿಕೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ.
ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ಫೆಬ್ರವರಿ 9ರಿಂದ ಹೊಸ ದರಗಳು ಜಾರಿಗೆ ಬರಲಿದೆ. ಪ್ರವಾಸಿ ಕಾರ್ಡ್ ಗುಂಪು ಟಿಕೆಟ್ ಗಳಿಗೂ ಅನ್ವಯವಾಗಲಿದೆ.
ಕಳೆದ ವರ್ಷ 2025ರಲ್ಲಿ ಬಿಎಂಆರ್ಸಿಎಲ್ ದರಗಳಲ್ಲಿ ಗಣನೀಯ ಬದಲಾವಣೆ ಮಾಡಿತ್ತು. ಈ ಬಾರಿ ಶೇಕಡಾ 5ರಷ್ಟು ಏರಿಕೆ ಮಾಡಲಾಗಿದ್ದು, ಕನಿಷ್ಠ ಮತ್ತು ಗರಿಷ್ಠ ದರಗಳಲ್ಲಿ 2 ರಿಂದ 5 ರೂಪಾಯಿಗಳವರೆಗೆ ವ್ಯತ್ಯಾಸವಾಗುವ ಸಾಧ್ಯತೆಯಿದೆ.
Key words: Metro fare, hike, Feb. 9, Bangalore
The post ಮೆಟ್ರೋ ಪ್ರಯಾಣ ದರ ಏರಿಕೆ: ಫೆ.9ರಿಂದ ಜಾರಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





