28
February, 2026

A News 365Times Venture

28
Saturday
February, 2026

A News 365Times Venture

ಪ್ರಶ್ನಿಸಲು ಪ್ರೇರೇಪಿಸುವ ರಂಗಭೂಮಿಯನ್ನು ಉಳಿಸೋಣ: ಜಿ ಎನ್ ಮೋಹನ್

Date:

 

ಬೆಂಗಳೂರು, ಫೆ.೦೨,೨೦೨೬: ರಂಗಭೂಮಿ ಹಾಗೂ ಸಾಹಿತ್ಯ ಸದಾ ಪ್ರಶ್ನೆ ಮಾಡಲು ಪ್ರೇರೇಪಿಸುತ್ತದೆ. ಸ್ಥಗಿತಗೊಂಡ ಸಮಾಜವನ್ನು ಎಚ್ಚರಗೊಳಿಸುವ ಕೆಲಸ ನಿರಂತರವಾಗಿರಲಿ ಎಂದು ಸಾಹಿತಿ, ಪತ್ರಕರ್ತ ಜಿ ಎನ್ ಮೋಹನ್ ಅಭಿಪ್ರಾಯಪಟ್ಟರು.

ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ರಾಷ್ಟ್ರೀಯ ರಂಗಶಾಲೆ ಹಮ್ಮಿಕೊಂಡಿದ್ದ ರಂಗ ಪರಿಷೆಯಲ್ಲಿ ಅವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪುಸ್ತಕಗಳನ್ನು ದ್ವೇಷಿಸುವ ನಾಜಿ ಕಾಲವಿತ್ತು. ಈಗ ದೇಶದೆಲ್ಲೆಡೆ ಅಂತಹದೇ ವಾತಾವರಣವನ್ನು ಸೃಷ್ಟಿಸಿ, ಪುಸ್ತಕ ದ್ವೇಷವನ್ನು ಹರಡಲಾಗುತ್ತಿದೆ. ಪ್ರಶ್ನೆ ಮಾಡುವ ಮನಸ್ಸನ್ನು ಮುರುಟಿ ಹಾಕುವ ಯತ್ನ ನಡೆಯುತ್ತಿದೆ. ಇದರ ವಿರುದ್ಧ ಜಾಗೃತಿ ಸದಾ ಅಗತ್ಯ ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್ ಎನ್ ಮುಕುಂದರಾಜ್ ಅವರು ಮಾತನಾಡಿ ರಂಗಭೂಮಿ ಹಾಗೂ ಸಾಹಿತ್ಯವನ್ನು ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ. ಎರಡೂ ಸಹಾ ಗಂಡಬೇರುಂಡದಂತೆ ಎಂದರು.

ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ನಾಗರಾಜ ಮೂರ್ತಿ ಅವರು ಮಾತನಾಡಿ ಮಾನವೀಯ ಸಮಾಜವನ್ನು ಸೃಷ್ಟಿಸುವುದು ಇಂದಿನ ಅಗತ್ಯ. ಮನಸ್ಸನ್ನು ಕಲುಷಿತಗೊಳಿಸುತ್ತಿರುವ ಕಾಲದ ಬಗ್ಗೆ ಎಚ್ಚರ ಇರಲಿ ಎಂದರು.

ಕಾವ್ಯ ಪರಿಷೆ ಮುಖ್ಯಸ್ಥರಾದ ಮಲ್ಲಿಕಾರ್ಜುನ ಮಹಾಮನೆ, ಕವಿ ಅಂಕಣಕಾರ ಬಿ ಎನ್ ಮಲ್ಲೇಶ್, ಅಕಾಡೆಮಿ ಸದಸ್ಯರುಗಳಾದ ಮಮತಾ ಅರಸೀಕೆರೆ, ರವಿಕುಮಾರ್ ಭಾಗಿ ಉಪಸ್ತಿತರಿದ್ದರು.

key words: Let’s save the, theatre, that inspires questioning, G N Mohan, bangalore

The post ಪ್ರಶ್ನಿಸಲು ಪ್ರೇರೇಪಿಸುವ ರಂಗಭೂಮಿಯನ್ನು ಉಳಿಸೋಣ: ಜಿ ಎನ್ ಮೋಹನ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

2028ರಲ್ಲಿ JDS-BJP ಮೈತ್ರಿ ಅಧಿಕಾರಕ್ಕೆ- ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡರು

ವಿಜಯಪುರ,ಫೆಬ್ರವರಿ,27,2026 (www.justkannada.in):   ರಾಜ್ಯದಲ್ಲಿ 2028ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು  ಬಿಜೆಪಿ...

തൊഴില്‍ മന്ത്രിയുടെ നിര്‍ദേശമടക്കം അംഗീകരിച്ചു; സമരം താത്ക്കാലികമായി നിര്‍ത്തിവെക്കുന്നതായി മാധ്യമം ജീവനക്കാര്‍

കോഴിക്കോട്: മാസങ്ങളായി ശമ്പളവും ആനുകൂല്യങ്ങളും നല്‍കാത്തതിനെ തുടര്‍ന്ന് നടത്തി വരികയായിരുന്ന പ്രത്യക്ഷ...

OTR: పర్యటన వివరాలు సీక్రెట్‌గా ఉంచడంలో ఆంతర్యం ఏంటి?

OTR: ఓ మంత్రి, ఇద్దరు ప్రభుత్వ సలహాదారులు కలిసి హెలికాప్టర్‌లో వెళ్ళి...