14
March, 2026

A News 365Times Venture

14
Saturday
March, 2026

A News 365Times Venture

ಇನ್ನರ್ ವೀಲ್ ನ ಧ್ಯೇಯವಾಕ್ಯವೇ ಸ್ನೇಹ ಮತ್ತು ಸೇವೆ- ಶಬರೀಕಡಿದಾಳು

Date:

ಹುಣಸೂರು, ನವೆಂಬರ್,12,2025 (www.justkannada.in): ಇನ್ನರ್ ವೀಲ್ ವಿಶ್ವದ ಅತಿದೊಡ್ಡ ಮಹಿಳಾ ಸ್ವಯಂ ಸೇವಾ ಸರ್ಕಾರೇತರ ಸಂಸ್ಥೆಯಾಗಿದ್ದು, ಸಮಾಜದ ನಿರ್ಗತಿಕ ಮತ್ತು ಹಿಂದುಳಿದ, ದುರ್ಬಲ ವರ್ಗಗಳಿಗೆ ಸಹಾಯ ಮಾಡಲು ಮತ್ತು ಸೇವೆ ಸಲ್ಲಿಸಲು ಶ್ರಮಿಸುತ್ತಿದೆ. ಇನ್ನರ್ ವೀಲ್ ನ ಧ್ಯೇಯವಾಕ್ಯವೇ ಸ್ನೇಹ ಮತ್ತು ಸೇವೆ ಎಂದು ಇನ್ನರ್ ವೀಲ್  318ರ  ಜಿಲ್ಲಾ ಚೇರ್ಮೇನ್  ಶಬರೀಕಡಿದಾಳು  ಅವರು  ಹೇಳಿದರು.

ನಗರದ ರೋಟರಿ ಭವನದಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು,  ಶಿಕ್ಷಣ, ಆರೋಗ್ಯ , ಸಮುದಾಯದ ಸಮಸ್ಯೆಗಳ ಅರಿತು ನಮ್ಮ ಕ್ಲಬ್ ಗಳು  ಯಾವುದೇ ಸ್ವಾರ್ಥವಿಲ್ಲದೆ ಮಾಡುವ ಸೇವೆಯೇ  ನಮ್ಮ ಗುರಿಯಾಗಿದೆ.  ಈ ನಿಟ್ಟಿನಲ್ಲಿ ಹುಣಸೂರು  ಇನ್ನರ್ ವೀಲ್ ಕ್ಲಬ್ ಉತ್ತಮವಾಗಿ ಕೆಲಸ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕ ಶಾಲೆಗೆ ಶುದ್ದ ಕುಡಿಯುವ ನೀರು  ಘಟಕ  ನೀಡಲಾಯಿತು, ಶಾಲಾ ಮಕ್ಕಳಿಗೆ ಕ್ರೀಡಾ ಬಹುಮಾನ ನೀಡಲಾಯಿತು. ಜೊತೆಗೆ ಮೈಸೂರು ಜಿಲ್ಲಾ ಕನ್ನಡರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಧರ್ಮಾಪುರ ನಾರಾಯಣ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ತೇನ್ ಮೋಳಿ ತಂಗಮಾರಯಪ್ಪನ್, ನಿಕಟ ಪೂರ್ವ ಅಧ್ಯಕ್ಷೆ ಸ್ಮೀತಾ ದಯನಂದ್ , ಸದಸ್ಯರಾದ ಡಾ.ರಾಜಶೇಶ್ವರಿ, ಶಿವಕುಮಾರಿ, ಡಾ.ಸಂಗೀತಾ. ರೋಟರಿ ಸಂಸ್ಥೆ ಅಧ್ಯಕ್ಷ ಎಚ್.ಆರ್.ಕೃಷ್ಣಕುಮಾರ್, ಸದಸ್ಯ ಮಹೇಶ್, ಇನ್ನರ್ ವೀಲ್ಸ್ ನಿರ್ದೇಶಕರಾದ ಜಯಲಕ್ಷ್ಮೀ, ಡಾ.ಮಂಜುಳ, ರೋಟರಿ ಶಾಲಾ ಮುಖ್ಯ ಶಿಕ್ಷಕಿ ದೀಪಾ ಎಲ್,  ಸುಜಾತ, ಅಂಜು,ಭಾಗ್ಯ, ಪ್ರಭ, ಸುಮಿತ್ರಾ ಮತ್ತಿತರು ಉಪಸ್ಥಿತರಿದ್ದರು.

Key words: Hunasur, Inner Wheel, service – Sabari Kadidalu

The post ಇನ್ನರ್ ವೀಲ್ ನ ಧ್ಯೇಯವಾಕ್ಯವೇ ಸ್ನೇಹ ಮತ್ತು ಸೇವೆ- ಶಬರೀಕಡಿದಾಳು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ದೇಶದಲ್ಲಿ LPG ಗ್ಯಾಸ್, ಪೆಟ್ರೋಲ್ ಡಿಸೇಲ್ ಗೆ ಅಭಾವವಿಲ್ಲ- ಪೆಟ್ರೋಲಿಯಂ ಸಚಿವಾಲಯ ಸ್ಪಷ್ಟನೆ

ನವದೆಹಲಿ,ಮಾರ್ಚ್,13,2026 (www.justkannada.in): ದೇಶದಲ್ಲಿ LPG ಗ್ಯಾಸ್ ಸಿಲಿಂಡರ್, ಪೆಟ್ರೋಲ್ ಡಿಸೇಲ್...

ഒറ്റ രാത്രി കൊണ്ടല്ല, പൊങ്കാല ശുചീകരണം നടന്നത് മൂന്നുദിവസം കൊണ്ട്; വി.വി. രാജേഷിന്റെ വാദം തള്ളി കളക്ടര്‍

തിരുവനന്തപുരം: ആറ്റുകാല്‍ പൊങ്കാല ദിനത്തില്‍ തന്നെ തിരുവനന്തപുരം നഗരം പൂര്‍ണമായും ശുചിയാക്കിയെന്ന...

ஆதவ் டேபிள் ஃபேன்; ஆனந்த் எலெக்ட்ரிக் குக்கர்! – போட்டி போட்டு பரிசுப் பொருட்களை இறக்கும் தவெக-வினர்

தவெகவின் முதற்கட்ட வேட்பாளர் பட்டியலை விஜய் உறுதி செய்திருக்கும் நிலையில், சென்னைக்குள்...

LPG Crisis: భారత్‌కు గుడ్‌ న్యూస్.. హార్ముజ్ నుంచి బయలుదేరిన LPG నౌకలు..

LPG Crisis: భారత్‌కు గుడ్ న్యూస్. దేశవ్యాప్తంగా ఇంధన సంక్షోభం ముంచుకొస్తున్న...