ಬೆಂಗಳೂರು,ನವೆಂಬರ್,11,2025 (www.justkannada.in): ನವದೆಹಲಿಯ ಕೆಂಪುಕೋಟೆ ಬಳಿ ಕಾರು ಸ್ಪೋಟ ಪ್ರಕರಣ ಸಂಬಂಧ ಬಿಹಾರ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲೇ ಈ ಸ್ಫೋಟ ಸಂಭವಿಸಿದ್ದು ಈ ಬಗ್ಗೆ ಪ್ರತಿಕ್ರಿಯಿಸಿದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಈ ಬಗ್ಗೆ ಬಿಜೆಪಿಯವರನ್ನೇ ಕೇಳಿ ಎಂದರು.
ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್, ಸ್ಪೋಟದಲ್ಲಿ ಸಾವು ನೋವಿನ ವಿಚಾರ ತಿಳಿದು ತುಂಬಾ ನೋವಾಗಿದೆ. ಕೇಂದ್ರ ಸರ್ಕಾರ ಈ ಸ್ಪೋಟದ ಘಟನೆಯ ಜವಾಬ್ದಾರಿ ವಹಿಸಿಕೊಳ್ಳಬೇಕು. ಗೃಪ್ತಚರ ಇಲಾಖೆಯ ವೈಪಲ್ಯ ಎದ್ದು ಕಾಣುತ್ತಿದೆ ಎಂದರು.
ವಾಹನವನ್ನು ಸಿಗ್ನಲ್ ನಲ್ಲಿ ತಂದು ನಿಲ್ಲಿಸಿ ಸ್ಪೋಟ ಮಾಡಿದ್ದಾರೆ. ಬಿಹಾರ ಚುನಾವಣೆ ಸಂದರ್ಭದಲ್ಲಿ ನಡೆದಿರುವ ಸ್ಪೋಟದ ಬಗ್ಗೆ ಬಿಹೆಪಿಯನ್ನೇ ಕೇಳಿ ನಾವೇನಾದರೂ ಮಾತನಾಡಿದರೇ ವಿವಾದ ಮಾಡುತ್ತೀರಾ. ರಾಜಕೀಯ ಕಾರಣಕ್ಕೆ ಮಾಡಿದ್ರೆ ದೇವರಾಣೆ ಯಾರಿಗೂ ಒಳ್ಳೆಯದಾಗಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.
Key words: Delhi, Car blast, during, Bihar elections, Minister, Jamir
The post ಬಿಹಾರ ಚುನಾವಣೆ ಸಂದರ್ಭದಲ್ಲೇ ಕಾರು ಸ್ಪೋಟ: ಬಿಜೆಪಿಯವರನ್ನೇ ಕೇಳಿ ಎಂದ ಸಚಿವ ಜಮೀರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





