ನವದೆಹಲಿ, ನವೆಂಬರ್,11,2025 (www.justkannada.in): ದೆಹಲಿಯ ಕೆಂಪುಕೋಟೆ ಬಳಿ ಕಾರು ಸ್ಪೋಟ ಮಾಡಿ 12 ಮಂದಿ ಸಾವಿಗೆ ಕಾರಣವಾಗಿರುವ ಯಾರನ್ನೂ ಬಿಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಕೆಂಪುಕೋಟೆ ಬಳಿ ಕಾರು ಸ್ಪೋಟ ಘಟನೆ ಹಿನ್ನೆಲೆಯಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭದ್ರತಾ ಪಡೆಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿದರು. ನಂತರ ಮಾತನಾಡಿದ ಅವರು, ದೆಹಲಿ ಕಾರು ಸ್ಪೋಟದ ಆರೋಪಿಗಳನ್ನ ಬಿಡಲ್ಲ. ಆರೋಪಿಗಳು ಎಲ್ಲೇ ಇದ್ರೂ ನಾವು ಬಿಡಲ್ಲ ಎಂದರು.
ದೆಹಲಿ ಪೊಲೀಸರು ಘಟನೆಯ ಸಂಬಂಧ ಕೇಂದ್ರ ಗೃಹ ಇಲಾಖೆಗೆ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಘಟನೆ ಸಂಬಂಧ ನಾಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.
Key words: Delhi, car blast, case, Union Home Minister, Amit Shah
The post ದೆಹಲಿ ಕಾರು ಸ್ಪೋಟ ಕೇಸ್: ಆರೋಪಿಗಳು ಎಲ್ಲೇ ಇದ್ರೂ ನಾವು ಬಿಡಲ್ಲ- ಕೇಂದ್ರ ಗೃಹ ಸಚಿವ ಅಮಿತ್ ಶಾ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





