5
December, 2025

A News 365Times Venture

5
Friday
December, 2025

A News 365Times Venture

ಹಾಡಿ ನಿವಾಸಿಗಳ ಜೊತೆ ಅಂತ:ಕರಣದಿಂದ  ವರ್ತಿಸಿ- ಸಿಎಂ ಸಿದ್ದರಾಮಯ್ಯ ಸೂಚನೆ

Date:

ಮೈಸೂರು,ನವೆಂಬರ್,11,2025 (www.justkannada.in): ಹಾಡಿ ನಿವಾಸಿಗಳ ಜೊತೆ ಅಂತ:ಕರಣದಿಂದ  ವರ್ತಿಸಿ ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.

ಇಂದು ಮೈಸೂರಿನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.  ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಪ್ರತೀ ಹಾಸ್ಟೆಲ್‌ ಗಳಿಗೆ ಒಬ್ಬ ನೋಡೆಲ್‌ ಅಧಿಕಾರಿಯನ್ನು ನೇಮಿಸಬೇಕು. ಆಹಾರದ ಗುಣಮಟ್ಟ, ಶೈಕ್ಷಣಿಕ ವಾತಾವರಣ, ಕಟ್ಟಡಗಳ ಸ್ಥಿತಿ ಗತಿಯನ್ನು ಅವಲೋಕಿಸಬೇಕು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ನೋಡಲ್‌ ಅಧಿಕಾರಿಗಳ ಮೇಲೆ ನಿಗಾ ಇಡಬೇಕು.

*ಹೆಚ್‌.ಡಿ.ಕೋಟೆ ವ್ಯಾಪ್ತಿಯ ಹಾಡಿಗಳಲ್ಲಿನ 16 ಹಾಡಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಆದರೆ ವಿದ್ಯುತ್‌ ಮಾತ್ರ ಬರುತ್ತಿಲ್ಲ. ಹಾಡಿಗಳ ಕುಡಿಯುವ ನೀರು, ಹಕ್ಕು ಪತ್ರ, ಅಂಗನವಾಡಿ, ಮನೆ, ಆಹಾರ ವಿತರಣೆ, ಆರೋಗ್ಯ ಕಿಟ್‌ ವಿತರಣೆಯಲ್ಲಿ ಆಗುತ್ತಿರುವ ಲೋಪಗಳನ್ನು ಶಾಸಕರಾದ ಅನಿಲ್‌ ಚಿಕ್ಕಮಾದು ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅಧಿಕಾರಿಗಳ ಲೋಪವನ್ನು ಪ್ರಶ್ನಿಸಿದರು.

*ಹಾಡಿ ನಿವಾಸಿಗಳ ಜೊತೆ ಅಂತ:ಕರಣದಿಂದ  ವರ್ತಿಸಿ ಎನ್ನುವ ಸೂಚನೆ ನೀಡಿದರು.

*ಹಾಡಿ ನಿವಾಸಿಗಳ ಅರಣ್ಯ ಉತ್ಪನ್ನ ಸಂಗ್ರಹ, ಮಾರಾಟದ ವಿಚಾರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದೌರ್ಜನ್ಯ ಮತ್ತು ಅಸಹಾಕಾರದ ಬಗ್ಗೆ ಸಭೆಯಲ್ಲಿ ವ್ಯಾಪಕ  ಚರ್ಚೆ ಆಯಿತು. ಈ ಬಗ್ಗೆ ಅರಣ್ಯಾಧಿಕಾರಿಗಳನ್ನು ಪ್ರಶ್ನಿಸಿದ ಮುಖ್ಯಮಂತ್ರಿಗಳು ಇಂಥಾ  ಘಟನೆಯನ್ನು ಸಹಿಸಲು ಸಾಧ್ಯವಿಲ್ಲ. ಕಣ್ಣಿಗೆ ಪಟ್ಟಿ ಕಟ್ಟಿಕೊಂಡವರ ರೀತಿ  ವರ್ತಿಸಬೇಡಿ. ಸ್ವಲ್ಪ ಉದಾರವಾಗಿ  ವರ್ತಿಸಿ ಮಾನವೀಯವಾಗಿ ನಡೆದುಕೊಳ್ಳಿ ಎಂದು ಶಾಸಕ ಅನಿಲ್‌ ಚಿಕ್ಕಮಾದು ಅವರ ಮಾತಿಗೆ ಧ್ವನಿಗೂಡಿಸಿ ಅರಣ್ಯಾಧಿಕಾರಿಗಳು ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.

*ಆಹಾರ ಇಲಾಖೆ, ಅಪ್ಲ ಸಂಖ್ಯಾತ ಇಲಾಖೆ, ಹಿಂದುಳಿದ ರ‍್ಗಗಳ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಸಭೆಯನ್ನು ಪ್ರತ್ಯೇಕವಾಗಿ ನಡೆಸಿ ಹಾಸ್ಟೆಲ್‌ ಗಳ ಗುಣಮಟ್ಟ ಮತ್ತು ಆಹಾರ ಗುಣಮಟ್ಟದ ಬಗ್ಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗಿದೆ. ಇದನ್ನು ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆ ಎಚ್ಚರಿಸಿತು.

*ಹೊಸದಾಗಿ ಆರಂಭಿಸಿರುವ ಹಿಂದುಳಿದ ರ‍್ಗಗಳ ಹಾಸ್ಟೆಲ್‌ ಗಳನ್ನು ತಕ್ಷಣ ಆರಂಭಿಸಲಾಗಿದೆಯೇ ? ಸ್ವಂತ ಕಟ್ಟಡ ಇಲ್ಲದ ಕಡೆ ಬಾಡಿಗೆ ಕಟ್ಟಡಗಳಲ್ಲಿ ಆರಂಭಿಸುವ ಸೂಚನೆ ನೀಡಲಾಗಿತ್ತು. ಈ ಸೂಚನೆ ಎಷ್ಟರ ಮಟ್ಟಿಗೆ ಪಾಲನೆ ಆಗಿದೆ ಎಂದು ಶಾಸಕರಾದ ಯತೀಂದ್ರ ಸಿದ್ದರಾಮಯ್ಯ ಅವರು ಸಭೆಯಲ್ಲಿ ಪ್ರಶ್ನಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

*ವಸತಿ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಯಲ್ಲಿ ಶೇ 89 ಮತ್ತು ಪಿಯುಸಿಯಲ್ಲಿ ಶೇ65 ರಷ್ಟು ಫಲಿತಾಂಶ ಬಂದಿದೆ ಎನ್ನುವ ಅಧಿಕಾರಿಗಳ ಉತ್ತರಕ್ಕೆ ಸಮಾಧಾನಗೊಳ್ಳದ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು,  ಸರ್ಕಾರ ಸಾಕಷ್ಟು ಅನುಕೂಲಗಳನ್ನು ಕಲ್ಪಿಸುತ್ತಿದೆ. ಕೇಳಿದಷ್ಟು ಅನುದಾನ ನೀಡುತ್ತಿದೆ. ಆದರೂ ಈ ಫಲಿತಾಂಶ ಸಮಾಧಾನಕರವಲ್ಲ. ಮಕ್ಕಳು ಹಾಸ್ಟೆಲ್‌ ಗಳಲ್ಲೇ ಇರುವುದರಿಂದ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ವಿಶೇಷ ತರಗತಿಗಳನ್ನು ನಡೆಸಿ ಅವರ ಕಲಿಕೆಯ ಗುಣಮಟ್ಟ ಹೆಚ್ಚಿಸಿ ಎನ್ನುವ ಸೂಚನೆ ನೀಡಿದರು.

ಜಾತಿ ಪ್ರಮಾಣ ಪತ್ರ: ಲೇಟ್‌ ಮಾಡಬೇಡಿ

ಜಾತಿ ಪ್ರಮಾಣ ಪತ್ರಗಳನ್ನು ನೀಡುವ ವಿಚಾರದಲ್ಲಿ ನಿಧಾನ ಮಾಡಬಾರದು. ತಕ್ಷಣ ತಕ್ಷಣ ನೀಡುವ ಪದ್ಧತಿ ರೂಢಿಸಿಕೊಳ್ಳಿ ಎನ್ನುವ ಸೂಚನೆಯನ್ನು ಸಿಎಂ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ:  ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಸಂಖ್ಯೆ 673050   ಇದ್ದು ಜುಲೈ ಅಂತ್ಯದವರೆಗೆ ಶೇ100 ರಷ್ಟು ಫಲಾನುಭವಿಗಳಿಗೆ ಗೃಹಲಕ್ಷ್ಮಿ ಹಣ ಪಾವತಿಯಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಯತೀಂದ್ರ ಅವರು, ನಾವು ಜನ ಸಂಪರ್ಕ ಸಭೆಗಳನ್ನು ಮಾಡಿದಾಗ ಹಣ ಬರುತ್ತಿಲ್ಲ ಎನ್ನುವ ದೂರು ಕೆಲವರಿಂದ ಬರುತ್ತಿದೆ ಏಕೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಸದ್ಯ ಖಚಿತಗೊಂಡಿರುವ ಫಲಾನುಭವಿಗಳಲ್ಲಿ ಅಷ್ಟೂ ಮಂದಿಗೆ ಹಣ ಪಾವತಿಯಾಗಿದೆ. ಕೆಲವರು ಅನರ್ಹರಾಗಿದ್ದು, ದಾಖಲಾತಿ ಸರಿ ಇಲ್ಲದ ಕಾರಣದಿಂದ ನೋಂದಣಿ ಆಗದಿದ್ದರೆ ಅವರಿಗೆ ಸಂದಾಯವಾಗಿಲ್ಲ ಎಂದರು.

key words: Hadi residents, Mysore, KDP, Meeting, CM Siddaramaiah

The post ಹಾಡಿ ನಿವಾಸಿಗಳ ಜೊತೆ ಅಂತ:ಕರಣದಿಂದ  ವರ್ತಿಸಿ- ಸಿಎಂ ಸಿದ್ದರಾಮಯ್ಯ ಸೂಚನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ರೌಡಿ sahacharaninda ಜೀವ ಬೆದರಿಕೆ: cm ಸಿದ್ದರಾಮಯ್ಯ

ಬೆಂಗಳೂರು,ನವೆಂಬರ್,11,2025 (www.justkannada.in): ಕುರುಬರ ಸಂಘದ ವಿಚಾರದಲ್ಲಿ ಭಾಗಿ ಆಗದಂತೆ ನನಗೆ...

‘MAHAN’ ವತಿಯಿಂದ ನ.14 ರಂದು ಮೈಸೂರಿನಾದ್ಯಂತ ಸರಣಿ ಉಚಿತ ಆರೋಗ್ಯ ಶಿಬಿರ

ಮೈಸೂರು,ನವೆಂಬರ್,12,2025 (www.justkannada.in): ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ನವೆಂಬರ್ 14...

ಇನ್ನರ್ ವೀಲ್ ನ ಧ್ಯೇಯವಾಕ್ಯವೇ ಸ್ನೇಹ ಮತ್ತು ಸೇವೆ- ಶಬರೀಕಡಿದಾಳು

ಹುಣಸೂರು, ನವೆಂಬರ್,12,2025 (www.justkannada.in): ಇನ್ನರ್ ವೀಲ್ ವಿಶ್ವದ ಅತಿದೊಡ್ಡ ಮಹಿಳಾ...

ಪೊಲೀಸರು ಶಿಸ್ತು ಹಾಗೂ ರಕ್ಷಣೆಯ ಪ್ರತೀಕ -ಬಿ.ಚೈತ್ರ

ಮೈಸೂರು,ನವೆಂಬರ್,12,2025 (www.justkannada.in): ಪೊಲೀಸ್ ಎಂದರೆ ಶಿಸ್ತು ಹಾಗೂ ರಕ್ಷಣೆಯ ಪ್ರತೀಕ....