ಮೈಸೂರು,ನವೆಂಬರ್,8,2025 (www.justkannada.in): ಮೈಸೂರು ಜಿಲ್ಲೆ ಸರಗೂರು ತಾಲೂಕಿನಲ್ಲಿ ಹುಲಿ ದಾಳಿ ಮುಂದುವರೆದಿದ್ದು ಇದೀಗ ಅರಣ್ಯ ಇಲಾಖೆ ವಾಚರ್, ಹಸು, ಮೇಕೆ ಮೇಲೆ ಹುಲಿರಾಯ ದಾಳಿ ಮಾಡಿದ್ದಾನೆ.
ಸದ್ಯ ವಾಚರ್ ಪ್ರಾಣಾಪಾಯದಿಂದ ಪಾರಾಗಿದ್ದು , ಹಸು, ಮೇಕೆ ಸಾವನ್ನಪ್ಪಿವೆ. ಯಡಿಯಾಲ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸರಗೂರು ತಾಲೂಕಿನ ಕಾಟ್ವಾಳು ಗ್ರಾಮದಲ್ಲಿ ಹಸು ಮೇಲೆ ದಾಳಿ ನಡೆಸಿದ್ದು, ಹುಲಿ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಹುಲಿ ಸೆರೆ ಕಾರ್ಯಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಭಾಗಿಯಾಗಿದ್ದರು. ಈ ವೇಳೆ ಫಾರೆಸ್ಟ್ ವಾಚರ್ ಮೇಲೆ ಹುಲಿ ದಾಳಿ ನಡೆಸಿದ್ದು ಸದ್ಯ ಜೀವಕ್ಕೆ ಯಾವುದೇ ಹಾನಿಯಾಗಲಿಲ್ಲ.
Key words: Mysore, Tiger, attacks, forest department, watcher, cow, goat
The post ಮೈಸೂರು: ಅರಣ್ಯ ಇಲಾಖೆಯ ವಾಚರ್, ಹಸು, ಮೇಕೆ ಮೇಲೆ ಹುಲಿ ದಾಳಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





