17
March, 2026

A News 365Times Venture

17
Tuesday
March, 2026

A News 365Times Venture

ಕಬ್ಬು ಬೆಳೆಗಾರರ ಹೋರಾಟಕ್ಕೆ ಮಣಿದ ಸರ್ಕಾರ: 3300 ರೂ. ನೀಡಲು ನಿರ್ಧಾರ

Date:

ಬೆಂಗಳೂರು,ನವೆಂಬರ್,7,2025 (www.justkannada.in):  ಕಬ್ಬಿಗೆ 3500 ರೂ ದರ ನಿಗದಿ ಮಾಡುವಂತೆ ಕಳೆದ 9 ದಿನಗಳಿಂದ  ಪ್ರತಿಭಟನೆ ಮಾಡುತ್ತಿದ್ದ ಕಬ್ಬುಬೆಳೆಗಾರರ ಹೋರಾಟಕ್ಕೆ ರಾಜ್ಯ ಸರ್ಕಾರ ಮಣಿದಿದ್ದು ಪ್ರತಿ ಟನ್ ಕಬ್ಬಿಗೆ  3,300 ರೂ ನೀಡಲು ನಿರ್ಧರಿಸಿದೆ.

ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇಂದು ರೈತರು ಮತ್ತು ಕಾರ್ಖಾನೆ ಮಾಲೀಕರ  ಜೊತೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.  ಸರ್ಕಾರ ಪ್ರತಿ ಟನ್ ಕಬ್ಬಿಗೆ 3300 ರೂಪಾಯಿ ದರ ನಿಗದಿ ಮಾಡಲು ನಿರ್ಧರಿಸಿದೆ. ಸರ್ಕಾರದಿಂದ 50 ರೂಪಾಯಿ ಹಾಗೂ ಕಾರ್ಖಾನೆಯಿಂದ 50 ರೂಪಾಯಿ ನೀಡಲಾಗುವುದು. ಈ ಮೂಲಕ ಒಟ್ಟು 3300 ರೂಪಾಯಿ ನೀಡಲು ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಕಬ್ಬು ಬೆಳೆಗಾರರು ಪ್ರತಿ ಟನ್ ಕಬ್ಬಿಗೆ 3500 ರೂಪಾಯಿ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಸುತ್ತಿದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಬೆಳಗಾವಿಯಲ್ಲಿ ನಡೆಯುತ್ತಿದ್ದ ರೈತರ ಹೋರಾಟ ಹಿಂಸಾಚಾರಕ್ಕೆ ತಿರುಗಿತ್ತು.  ನಂತರ ಸಿಎಂ ಸಿದ್ದರಾಮಯ್ಯ ನಿರಂತರ ಸಭೆ ನಡೆಸಿದ್ದು ಇದೀಗ ಪ್ರತಿ ಟನ್  ಕಬ್ಬಿಗೆ 3300 ರೂ ನಿಗದಿಪಡಿಸಿದ್ದಾರೆ.

Key words: Government, sugarcane, Rs. 3300, farmers, Decision

The post ಕಬ್ಬು ಬೆಳೆಗಾರರ ಹೋರಾಟಕ್ಕೆ ಮಣಿದ ಸರ್ಕಾರ: 3300 ರೂ. ನೀಡಲು ನಿರ್ಧಾರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

Rajinikanth: 'காலம் பேசாது ஆனால் காத்திருந்து பதில் சொல்லும்' – ஆதவ் அர்ஜுனாவுக்கு ரஜினிகாந்த் பதில்

நடிகர் ரஜினிகாந்த் அரசியலுக்கு வராதது குறித்து தவெக நிர்வாகி ஆதவ் அர்ஜுனா...

Haryana Shocker: లవర్‌కు రంగులు రాశాడని, ఫ్రెండ్ దారుణహత్య..

Haryana Shocker: తన ప్రేయసికి రంగులు పూశాడనే కారణంగా ఒక వ్యక్తి...

ನಾಳೆ ದೆಹಲಿಗೆ ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಮಾರ್ಚ್,16,2026 (www.justkannada.in):   ಡಿಸಿಎಂ ಡಿಕೆ ಶಿವಕುಮಾರ್ ನಾಳೆ ದೆಹಲಿಗೆ ಪ್ರಯಾಣ...

കോളേജിലെ ഇഫ്താര്‍ വിരുന്നില്‍ ഹിന്ദു വിദ്യാര്‍ത്ഥിനികള്‍ പങ്കെടുത്തു; ശുദ്ധീകരണ കര്‍മം നടത്തി ഹിന്ദുത്വ സംഘടനകള്‍

ഭോപ്പാല്‍: കോളേജ് ക്യാമ്പസിനുള്ളില്‍ നടത്തിയ ഇഫ്താര്‍ വിരുന്നില്‍ ഹിന്ദു വിദ്യാര്‍ത്ഥിനികള്‍ പങ്കെടുത്തതിന്...