21
March, 2026

A News 365Times Venture

21
Saturday
March, 2026

A News 365Times Venture

ಇವರೆಲ್ಲರೂ ಕುರ್ಚಿ ಚಿಂತಕರು, ರಾಜ್ಯಕ್ಕೆ ಇವರ ಕೊಡುಗೆ ಏನು? ಸಚಿವ ಪ್ರಿಯಾಂಕ್ ಖರ್ಗೆ ಕಿಡಿ

Date:

ಬೆಂಗಳೂರು,ನವೆಂಬರ್,3,2025 (www.justkannada.in): ‘ ಪ್ರಿಯಾಂಕ್ ಖರ್ಗೆ ಮತ್ತು ಯತೀಂದ್ರ ಸಿದ್ದರಾಮಯ್ಯ  ಅವರು ರಾಜ್ಯವನ್ನ ನಿಯಂತ್ರಿಸುತ್ತಿರುವುದು ವಿಷಾದಕರ ಎಂದು ಟ್ವೀಟ್ ಮಾಡಿದ್ದ ರಾಜ್ಯಸಭಾ ಬಿಜೆಪಿ ಸದಸ್ಯ ಲಹರ್ ಸಿಂಗ್ ಗೆ ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯ ಲಹರ್ ಸಿಂಗ್  ಅವರು ಒಂದೂವರೆ ದಶಕಕ್ಕೂ ಹೆಚ್ಚು ಕಾಲ ರಾಜ್ಯದಲ್ಲಿದ್ದಾರೆ. ರಾಜ್ಯಕ್ಕೆ ಅವರ ಕೊಡುಗೆ ಏನು? ಅವರ ಜನಪ್ರಿಯತೆ ಮತಗಳ ಮೂಲಕ ಬರುವ ಸಾಮರ್ಥ್ಯ ಹೊಂದಿಲ್ಲ. ಅವರ ಕೊಡುಗೆಗಳಲ್ಲಿ ಒಂದನ್ನು ನನಗೆ ತೋರಿಸಲಿ. ಇವರೆಲ್ಲರೂ ಕುರ್ಚಿ ಚಿಂತಕರು ಎಂದು ಲೇವಡಿ ಮಾಡಿದರು.

ನಾನು ಕಾಂಗ್ರೆಸ್ಸಿಗ. ನನ್ನ ಸಿದ್ಧಾಂತವನ್ನು ನಾನು ರಕ್ಷಿಸುತ್ತೇನೆ. ಪ್ರಧಾನಿ ಮೋದಿ ಅವರ ಸಿದ್ಧಾಂತವನ್ನು ರಕ್ಷಿಸಲು ಅವರನ್ನು ನಿಯೋಜಿಸಿದ್ದಾರೆಯೇ? ಅವರು ಆರ್‌ಎಸ್‌ಎಸ್ ಸದಸ್ಯರಲ್ಲದಿದ್ದರೆ ಆರ್‌ಎಸ್‌ಎಸ್ ಬಗ್ಗೆ ಏಕೆ ಮಾತನಾಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.

ಪ್ರಿಯಾಂಕ್ ಖರ್ಗೆ ಮತ್ತು ಯತೀಂದ್ರ ಸಿದ್ದರಾಮಯ್ಯ ಅವರ ಬಗ್ಗೆ ಟ್ವೀಟ್ ಮಾಡಿದ್ದ ಲಹರ್ ಸಿಂಗ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್​ ಕಾಂಗ್ರೆಸ್ ಪಕ್ಷದ ಸೂಪರ್ ಅಧ್ಯಕ್ಷರಂತೆ ವರ್ತಿಸಿದರೆ, ಸಿಎಂ ಸಿದ್ದರಾಮಯ್ಯ ಅವರ ಮಗ ಯತೀಂದ್ರ ಸೂಪರ್ ಸಿಎಂರಂತೆ ವರ್ತಿಸುತ್ತಿದ್ದಾರೆ. ದುರಹಂಕಾರದಿಂದ ತಮ್ಮ ಪಕ್ಷ ಮತ್ತು ಸರ್ಕಾರದಲ್ಲಿರುವ ಹಿರಿಯರ ಮೇಲೆ ಅವರಿಬ್ಬರು ಸವಾರಿ ಮಾಡುತ್ತಿದ್ದರೂ ಸಹಿಸಿಕೊಳ್ಳಲಾಗುತ್ತಿದೆ. ಕರ್ನಾಟಕವನ್ನು ಇಬ್ಬರ ಪುತ್ರರು ನಿಯಂತ್ರಿಸುತ್ತಿರುವುದು ವಿಷಾದಕರ ಎಂದು ಆರೋಪಿಸಿದ್ದರು.

Key words: BJP, Lahar singh, Minister,  Priyank Kharge

The post ಇವರೆಲ್ಲರೂ ಕುರ್ಚಿ ಚಿಂತಕರು, ರಾಜ್ಯಕ್ಕೆ ಇವರ ಕೊಡುಗೆ ಏನು? ಸಚಿವ ಪ್ರಿಯಾಂಕ್ ಖರ್ಗೆ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಉಪಚುನಾವಣೆ ಟಿಕೆಟ್ ಕಗ್ಗಂಟು: ಸುರ್ಜೇವಾಲಗೆ ಅಭಿಪ್ರಾಯ ತಿಳಿಸಿದ ಸಿಎಂ, ಡಿಸಿಎಂ, ಸಚಿವರು

ಬೆಂಗಳೂರು,ಮಾರ್ಚ್,20,2026 (www.justkannada.in):  ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭೆ ಉಪಚುನಾವಣೆಯ...

UNI വാര്‍ത്താ ഏജന്‍സിയുടെ ഓഫീസ് ബലമായി ഒഴിപ്പിച്ചു; അപലപിച്ച് ദി സ്റ്റേറ്റ്‌സ്മാന്‍ പത്രം; പ്രതിഷേധിച്ച് മാധ്യമപ്രവര്‍ത്തകര്‍

ന്യൂദല്‍ഹി: രാജ്യത്തെ ഏറ്റവും പഴക്കമേറിയ വാര്‍ത്താ ഏജന്‍സിയായ യുണൈറ്റഡ് ന്യൂസ് ഓഫ്...

'நான் ஜெயிச்சா மட்டும் போதாது…' – விஜய்-ன் அடுத்தக்கட்ட '50' வேட்பாளர்கள் இவர்கள்தான்?

தவெக சார்பில் இரண்டாம் கட்டமாக '50' வேட்பாளர்களை அக்கட்சியின் தலைவர் விஜய்...

Off The Record: ఉమ్మడి నల్గొండ, ఖమ్మం, వరంగల్ నేతలపై సీరియస్

Off The Record: తెలంగాణ బీజేపీ వ్యవహారాల మీద పార్టీ అధిష్టానం...