21
March, 2026

A News 365Times Venture

21
Saturday
March, 2026

A News 365Times Venture

ಇಬ್ಬರು ಮಕ್ಕಳನ್ನ ಹತ್ಯೆಗೈದು ತಾಯಿ ಆತ್ಮಹತ್ಯೆ: ಕಾರಣವೇನು..?

Date:

ಮೈಸೂರು,ನವೆಂಬರ್,1,2025 (www.justkannada.in): ತಾಯಿಗಿಂತ ದೇವರಿಲ್ಲ ಅಂತಾರೆ ಆದ್ರೆ ಇಲ್ಲೊಬ್ಬ ತಾಯಿ ತನ್ನ ಎರಡು ಹೆಣ್ಣು ಮಕ್ಕಳ ಕುತ್ತಿಗೆ ಕುಯ್ದು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದ ಮುಸ್ಲಿಂ ಬ್ಲಾಕ್ ನಲ್ಲಿ  ನಡೆದಿದೆ.

ಹೌದು ಬೆಟ್ಟದಪುರ ಗ್ರಾಮದ ರಬಿಯಾ ಭಾನು ಮಕ್ಕಳನ್ನು ಕೊಂದು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಕಳೆದ 3 ವರ್ಷಗಳ ಹಿಂದೆ ರಬಿಯಾ ಭಾನುಗೆ ಸೈಯದ್ ಮುಸಾವೀರ್ ಎಂಬುವರ ಜೊತೆಗೆ ಮದುವೆಯಾಗಿದೆ. ಇಬ್ಬರ ದಾಂಪತ್ಯ ಜೀವನಕ್ಕೆ 2 ವರ್ಷದ ಒಂದು ಹೆಣ್ಣು ಮಗು ಇದ್ದು, ಕಳೆದ 8 ದಿನಗಳ ಹಿಂದೆ ಮತ್ತೊಂದು ಹೆಣ್ಣು ಮಗು ಕೂಡ ಜನಿಸಿತ್ತು.

ಮೊದಲ ಹೆಣ್ಣು ಮಗು ಅನಮ್ ಫಾತಿಯ ವಿಶೇಷ ಚೇತನ ಮಗುವಾಗಿದ್ದ ಕಾರಣ ಕೌಟುಂಬಿಕ ಕಲಹ ಇತ್ತು ಎನ್ನಲಾಗಿದೆ. ಕಳೆದ 8 ದಿನದ ಹಿಂದೆ ಇನ್ನೊಂದು ಮಗು ಕೂಡ ಜನಿಸಿದ್ದು ಅದು ಹೆಣ್ಣು ಹೀಗಾಗಿ ತಾಯಿಯ ರಬಿಯಾ ಭಾನು ಬೇಜಾರಿನಲ್ಲಿದ್ದು ತಂದೆ ಮನೆಯಲ್ಲಿ ಬಾಣಂತನಕ್ಕೆ ಹೋಗಿದ್ದಾಳೆ.

ಇಂದು ಬೆಳಿಗ್ಗೆ ಮೊದಲ ಮಗು ಅಂಗವಿಕಲೆ ಎರಡನೇ ಮಗು ಕೂಡ ಹೆಣ್ಣು ಎಂದು ಮನನೊಂದು ಮಲಗಿದ್ದ ಮಕ್ಕಳ ಕತ್ತು ಕುಯ್ದು ತಾನು ಕೂಡ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ತಿಂಡಿಗೆ ಕರೆಯಲು ಕುಟುಂಬಸ್ಥರು ರೂಮಿನ ಬಳಿ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಬೆಟ್ಟದಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ

ಒಟ್ಟಾರೆಯಾಗಿ ಮಕ್ಕಳಿಲ್ಲದ ಎಷ್ಟೋ ಜನರು ಮಕ್ಕಳಾದ್ರೆ ಸಾಕು ಅಂತಿದ್ದರೆ ಮೊದಲ ಮಗು ಅಂಗವಿಕಲೆ ಎರಡನೇ ಮಗು ಹೆಣ್ಣು ಎಂದು ತಾಯಿಯೇ ಕೊಲೆ ಮಾಡಿರುವ ಘಟನೆ ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ.

Key words: Mysore, Mother, commits suicide, children, reason

The post ಇಬ್ಬರು ಮಕ್ಕಳನ್ನ ಹತ್ಯೆಗೈದು ತಾಯಿ ಆತ್ಮಹತ್ಯೆ: ಕಾರಣವೇನು..? appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಕರ್ನಾಟಕ ಜಾಹೀರಾತು ನೀತಿ ಪುನರ್‌ ಪರಿಶೀಲನೆಗೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಒತ್ತಾಯ

ಮೈಸೂರು,ಮಾರ್ಚ್.26,2026:  ರಾಜ್ಯ ಸರಕಾರವು ಜಾರಿಗೆ ತರಲು ಮುಂದಾಗಿರುವ ʻಕರ್ನಾಟಕ ಜಾಹೀರಾತು...

വര്‍ഗീയ പരാമര്‍ശം; ഗോപാലകൃഷ്ണനെതിരെ തെരഞ്ഞെടുപ്പ് കമ്മീഷന് പരാതി നല്‍കി സി.പി.ഐ.എം

  തൃശൂര്‍: ഗുരുവായൂരിലെ എന്‍.ഡി.എ സ്ഥാനാര്‍ത്ഥി അഡ്വ. ബി. ഗോപാലകൃഷ്ണനെതിരെ തെരഞ്ഞെടുപ്പ്...

தேர்தல் விதியை மீறி பரிசுப்பொருள்: வேலூர் மேயருக்கு போலீஸ் சம்மன்; திமுக எம்எல்ஏ-வும் சிக்குகிறாரா?

வேலூர் சத்துவாச்சாரியில், கடந்த 19-ம் தேதி, தேர்தல் நடத்தை விதிகளை மீறி...

Danam Nagender : దానం నాగేందర్ ‘క్లీన్ చిట్’పై హైకోర్టులో సవాల్

తెలంగాణ రాజకీయాల్లో పార్టీ ఫిరాయింపుల అంశం మరోసారి న్యాయస్థానం మెట్లెక్కింది. ఖైరతాబాద్...