ಬೆಂಗಳೂರು,ಅಕ್ಟೋಬರ್,2025 (www.justkannada.in): ಸಂಸದ ತೇಜಸ್ವಿ ಸೂರ್ಯ ಇನ್ನೂ ಎಳಸು. ಆತನಿಗೆ ಅನುಭವ ಕಡಿಮೆ. ಟನಲ್ ರಸ್ತೆ ಬೇಡ ಎನ್ನಲು ತೇಜಸ್ವಿ ಸೂರ್ಯ ಯಾರು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ತೇಜಸ್ವಿ ಸೂರ್ಯ ಒಬ್ಬ ವೇಸ್ಟ್ ಮೆಟೀರಿಯಲ್. ಗೌರವ ಕೊಟ್ಟು ಕರೆದು ಮಾತನಾಡಿದರೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಸಂಸದ ತೇಜಸ್ವಿ ಸೂರ್ಯಗೆ ಪ್ರಪಂಚ ಹೇಗಿದೆ ಎಂಬುದೇ ಇನ್ನೂ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಹುಡುಗರ ಬಳಿ ಕಾರಿಲ್ಲದಿದ್ದರೆ ಹೆಣ್ಣು ಕೊಡುವುದಿಲ್ಲ ಎಂದು ನಾನು ಹೇಳಿದ್ದೆ. ಅದನ್ನೇ ಹಿಡಿದುಕೊಂಡಿದ್ದಾನೆ. ಅವರ್ಯಾಕೆ ಕಾರಿನಲ್ಲಿ ಓಡಾತ್ತಾರೆ? ಅವರ, ಅವರ ಕುಟುಂಬ ಸದಸ್ಯರು ಮೆಟ್ರೋ, ಸರ್ಕಾರಿ ಬಸ್ ಗಳಲ್ಲಿ ಓಡಾಡಲಿ, ಬೇಡ ಎಂದವರು ಯಾರು? ಇವರಿಗೇಕೆ ಕಾರುಗಳು ಬೇಕು? ಬೆಂಗಳೂರಿನಲ್ಲಿ 1.30ಕೋಟಿಗೂ ಹೆಚ್ಚು ವಾಹನಗಳಿವೆ ಎಂಬುದನ್ನು ತೇಜಸ್ವಿ ಮೊದಲು ಅರ್ಥಮಾಡಿಕೊಳ್ಳಬೇಕು. ಅವರಿಗೆಲ್ಲ ವಾಹನ ಬಳಸಬೇಡಿ ಎನ್ನಲು ಆಗುತ್ತಾ? ತೇಜಸ್ವಿ ಸೂರ್ಯ ಮೊದಲು ಕಾರಿನಲ್ಲಿ ಓಡಾಡುವುದನ್ನು ನಿಲ್ಲಿಸಲಿ ಎಂದು ಡಿಕೆ ಶಿವಕುಮಾರ್ ಟಾಂಗ್ ಕೊಟ್ಟರು.
Key words: MP, Tejaswi Surya, tunnel road, DCM, DK Shivakumar
The post ತೇಜಸ್ವಿ ಸೂರ್ಯ ಇನ್ನೂ ಎಳಸು: ಟನಲ್ ರಸ್ತೆ ಬೇಡ ಎನ್ನಲು ಅವರು ಯಾರು? ಡಿಸಿಎಂ ಡಿ.ಕೆ.ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





