25
March, 2026

A News 365Times Venture

25
Wednesday
March, 2026

A News 365Times Venture

ಧೂಮಪಾನ ನಿಷೇಧ ಕಾಯಿದೆ ಉಲ್ಲಂಘನೆ: 1,82,000 ಜನರಿಗೆ ದಂಡ- ವಿ.ಎಸ್. ಉಗ್ರಪ್ಪ

Date:

ಬೆಂಗಳೂರು, ಅಕ್ಟೋಬರ್ 28,2025 (www.justkannada.in): ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸುವ, “ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ, 2003 ಅಡಿಯಲ್ಲಿ ಏಪ್ರಿಲ್ ನಿಂದ ಸೆಪ್ಟೆಂಬರ್-2025 ತಿಂಗಳವರೆಗೆ ಸುಮಾರು 1,82,000 ಜನರು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕಾಯಿದೆಯನ್ನು ಉಲ್ಲಂಘನೆ ಮಾಡಿರುವರ ವಿರುದ್ಧ ಕ್ರಮಕೈಗೊಂಡು ದಂಡ ವಿಧಿಸಲಾಗಿದೆ ಎಂದು ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಸಮಿತಿಯ ಶಿಫಾರಸ್ಸುಗಳ ಅನುಷ್ಠಾನದ ಅಧ್ಯಕ್ಷರಾದ ವಿ.ಎಸ್. ಉಗ್ರಪ್ಪ ತಿಳಿಸಿದ್ದಾರೆ.

ಅವರು ಇತ್ತೀಚೆಗೆ ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಸಮಿತಿಯ ಶಿಫಾರಸ್ಸುಗಳ ಅನುಷ್ಠಾನದ ಕುರಿತು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು,  ಶಾಲಾ/ಕಾಲೇಜುಗಳಲ್ಲಿ 100 ಮೀ. ವ್ಯಾಪ್ತಿಯಲ್ಲಿ 2470 ಜನರು ಧೂಮಪಾನ ನಿಷೇಧ ಕಾಯಿದೆಯನ್ನು ಉಲ್ಲಂಘನೆ ಮಾಡಿದವರಿಗೆÉ ದಂಡ ವಿಧಿಸಲಾಗಿದೆ. ಇದರಿಂದಾಗಿ ರೂ. 45 ಲಕ್ಷ ಪ್ರತಿ ವರ್ಷ ದಂಡ ಸಂಗ್ರಹವಾಗುತ್ತಿದೆ. ಈ ಪೈಕಿ, 21 ವರ್ಷದೊಳಗಿನ ಯುವಜನರ ದತ್ತಾಂಶವನ್ನು ನೀಡಲು ಆರೋಗ್ಯ ಇಲಾಖೆಗೆ ಸೂಚಿಸಿದರು.

21 ವರ್ಷದೊಳಗಿನ ಯುವಜನರನ್ನು ಧೂಮಪಾನ, ಮಧ್ಯಪಾನ, ತಂಬಾಕು ಸೇವನೆ, ಡ್ರಗ್ಸ್ ಸೇವೆಯಂತಹ ಮಾದಕ ವಸ್ತುಗಳ ಸೇವನೆಯಿಂದ ವ್ಯಸನ ಮುಕ್ತರನ್ನಾಗಿಸಲು ಮಾದಕ ವಸ್ತು ವ್ಯಸನ ಮುಕ್ತ ಕೇಂದ್ರಗಳ ಮೂಲಕ ಏಪ್ರಿಲ್ ನಿಂದ ಸೆಪ್ಟೆಂಬರ್-2025ರವರೆಗೆ ಸುಮಾರು 1 ಲಕ್ಷ ಯುವಜನರಿಗೆ ಸಮಾಲೋಚನೆಯನ್ನು ನೀಡಲಾಗುತ್ತಿದೆ. ಆರೋಗ್ಯ ಇಲಾಖೆ ಮತ್ತು ನಿಮಾನ್ಸ್ ಸಹಯೋಗದಲ್ಲಿ ಟೆಲಿಮಾನಸ್ 14416 ಸಹಾಯವಾಣಿಯನ್ನು ತೆರೆಯಲಾಗಿದೆ. ಈ ಸಹಾಯವಾಣಿ ಮೂಲಕ ಮಾದಕ ವ್ಯಸನ ಪೀಡಿತ ಮಕ್ಕಳ ಮುಂದಿನ ಭವಿಷ್ಯವನ್ನು ಈ ಸುಧಾರಿಸಲು ಅಗತ್ಯ ಸಹಾಯ ಮತ್ತು ಸಮಾಲೋಚನೆಯನ್ನು ಪಡೆಯಬಹುದಾಗಿದೆ.

ದೃಶ್ಯ ಮಾಧ್ಯಮಗಳು ಅತ್ಯಾಚಾರ, ಮಹಿಳಾ ದೌರ್ಜನ್ಯ ಆತ್ಮಹತ್ಯೆ ಮತ್ತು ಇತರ ಪ್ರಕರಣಗಳನ್ನು ವೈಭವೀಕರಿಸಿ ಭಯಗೊಳ್ಳುವಂತೆ ಪ್ರಸಾರ ಮಾಡುವುದನ್ನು ನಿಯಂತ್ರಿಸಬೇಕು. ಪ್ರೆಸ್ ಕೌನ್ಸಿಲ್ ಮಾರ್ಗಸೂಚಿಗಳನ್ನು ದೃಶ್ಯ ಮಾಧ್ಯಮಗಳು ಅಳವಡಿಸಿಕೊಳ್ಳಬೇಕು. ಯಾರು ಈ ರೀತಿಯ ಪ್ರಕರಣಳಿಗೆ ಪ್ರಚಾರ ನೀಡುತ್ತಾರೋ ಅವರ ಮೇಲೆ ಮಹಿಳೆಯರ ಅಸಭ್ಯ ಪ್ರಾತಿನಿಧ್ಯ(ನಿಷೇಧ) ಕಾಯ್ದೆ-1986 (Indescent Representation of Women (Prohibition) Act-1986)  ರಡಿಯಲ್ಲಿ ಸ್ವಯಂ ಪ್ರೇರಿತವಾಗಿ ಕ್ರಮವನ್ನು ದೃಶ್ಯ ಮಾಧ್ಯಮಗಳು ತೆಗೆದುಕೊಳ್ಳಬೇಕು. ಅಥವಾ ಕೇಬಲ್ ಆಕ್ಟ್ ಇದ್ದರೆ ಆ ಕಾಯಿದೆಯಡಿಯಲ್ಲಿ ಕ್ರಮವಹಿಸಲು, ಅಥವಾ ಫಿಲ್ಮ್ಸ್ ಆಕ್ಟ್ ಇದ್ದರೆ ಆ ಕಾಯಿದೆಯಡಿಯಲ್ಲಿ ಕ್ರಮ ವಹಿಸಲು, ಪತ್ರಿಕೋದ್ಯಮಕ್ಕೆ ಸಂಬಂಧಿಸಿದ್ದರೆ ಪತ್ರಿಕೋದ್ಯಮ ಕಾಯಿದೆಯಡಿ ಕ್ರಮವಹಿಸಲು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗ ಹಾಗೂ ವಾರ್ತಾ ಇಲಾಖೆಯೊಂದಿಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕೆಂದು ಸೂಚಿಸಲಾಯಿತು.

Key words: Violation, No Smoking,  1,82,000 people, fined, V.S. Ugrappa

The post ಧೂಮಪಾನ ನಿಷೇಧ ಕಾಯಿದೆ ಉಲ್ಲಂಘನೆ: 1,82,000 ಜನರಿಗೆ ದಂಡ- ವಿ.ಎಸ್. ಉಗ್ರಪ್ಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

Iran War: ఇరాన్ యుద్ధంపై మొసాద్ సంచలన రిపోర్ట్..!

Iran War: మిడిల్ ఈస్ట్‌లో జరుగుతున్న ఇరాన్ యుద్ధం ఇప్పట్లో ముగిసేలా...

ಬಜೆಟ್ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ: ಪ್ರಮುಖ ಅಂಶಗಳು ಹೀಗಿವೆ ನೋಡಿ..!

ಬೆಂಗಳೂರು, ಮಾರ್ಚ್,25,2026 (www.justkannada.in):  ರಾಜ್ಯ ವಿಧಾನಮಂಡಲ ಬಜೆಟ್ ಅಧಿವೇಶನ ನಡೆಯುತ್ತಿದ್ದು...

ഇറാനെതിരെയുള്ള യുദ്ധം വിനാശകരമായ തെറ്റ്; ട്രംപിനെതിരെ രൂക്ഷ വിമർശനവുമായി ജർമൻ പ്രസിഡന്റ്

ബെർലിൻ: ഇറാനെതിരായുള്ള യുദ്ധം അന്താരാഷ്ട്ര നിയമങ്ങളുടെ ലംഘനമാണെന്നും അതൊരു വിനാശകരമായ തെറ്റാണെന്നും...

“ `இந்த' தேவைக்கு `இதனுடன்' ரூ.50,000-க்கு மேல் எடுத்துச் செல்லலாம்!" – தலைமை தேர்தல் அதிகாரி

தமிழ்நாடு சட்டமன்றத் தேர்தலை முன்னிட்டு, இன்று தமிழ்நாடு தலைமை தேர்தல் அதிகாரி...