26
March, 2026

A News 365Times Venture

26
Thursday
March, 2026

A News 365Times Venture

ಗ್ರಾಹಕರೇ ಗಮನಿಸಿ: ಈ ದಿನಗಳಲ್ಲಿ ‘ಸೆಸ್ಕ್’ ಆನ್‌ ಲೈನ್‌ ಸೇವೆಗಳು ಲಭ್ಯವಿರಲ್ಲ

Date:

ಮೈಸೂರು, ಅಕ್ಟೋಬರ್‌, 25, 2025 (www.justkannada.in): ತುರ್ತು ನಿರ್ವಹಣಾ ಕಾರ್ಯನಿಮಿತ್ತ ಅಕ್ಟೋಬರ್‌ 27 ಮತ್ತು 28ರಂದು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಸೆಸ್ಕ್‌)ದ ಆನ್‌ಲೈನ್‌ ಸೇವೆಗಳು ಲಭ್ಯವಿರುವುದಿಲ್ಲ.

ನಿಗದಿತ ದಿನಾಂಕಗಳಂದು ತುರ್ತು ನಿರ್ವಹಣೆ ಇರುವುದರಿಂದ ಅಕ್ಟೋಬರ್ 27ರ ರಾತ್ರಿ 8 ಗಂಟೆಯಿಂದ ಅಕ್ಟೋಬರ್ 28ರ ಬೆಳಗ್ಗೆ 11 ಗಂಟೆಯವರೆಗೆ ಸೆಸ್ಕ್‌ ನ ಆನ್‌ ಲೈನ್‌ ಸೇವೆಗಳಾದ ವಿದ್ಯುತ್‌ ಬಿಲ್‌ ಪಾವತಿ, ಹೆಸರು ಬದಲಾವಣೆ, ಜಕಾತಿ ಬದಲಾವಣೆ ಹಾಗೂ ಹೊಸ ಸಂಪರ್ಕ ಸೇರಿದಂತೆ ಇನ್ನಿತರ ಆನ್‌ ಲೈನ್‌ ಆಧಾರಿತ ಸೇವೆಗಳು ಲಭ್ಯವಿರುವುದಿಲ್ಲ.

ಸೆಸ್ಕ್ ವ್ಯಾಪ್ತಿಯ ಪ್ರದೇಶಗಳಾದ ಮೈಸೂರು, ನಂಜನಗೂಡು, ಹುಣಸೂರು, ಕೆ.ಆರ್. ನಗರ, ಮಂಡ್ಯ, ಮಳವಳ್ಳಿ, ಚಾಮರಾಜನಗರ, ಕೊಳ್ಳೇಗಾಲ, ಹಾಸನ, ಅರಸೀಕೆರೆ, ಚನ್ನರಾಯಪಟ್ಟಣ ಹಾಗೂ ಮಡಿಕೇರಿ ವ್ಯಾಪ್ತಿಯ ಗ್ರಾಹಕರಿಗೆ ಆನ್‌ ಲೈನ್‌ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ಗ್ರಾಹಕರು ಸಹಕರಿಸುವಂತೆ ಸೆಸ್ಕ್ ಪ್ರಕಟಣೆಯಲ್ಲಿ ಕೋರಿದೆ.

Key words: CESC, online services, not available

The post ಗ್ರಾಹಕರೇ ಗಮನಿಸಿ: ಈ ದಿನಗಳಲ್ಲಿ ‘ಸೆಸ್ಕ್’ ಆನ್‌ ಲೈನ್‌ ಸೇವೆಗಳು ಲಭ್ಯವಿರಲ್ಲ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

திடீரென டிஜிபி அலுவலகத்தில் விஜய்; யார் மீது புகார் கொடுத்தார்? – விவரம் என்ன?

தவெக தலைவர் விஜய் திடீரென சென்னை டிஜிபி அலுவலகத்திற்கு நேரில் சென்று...

Delhi Metro: ఢిల్లీ మెట్రో స్టేషన్‌లో పేలుడు.. బెంబేలెత్తిపోయిన ప్రయాణికులు

దేశ రాజధాని ఢిల్లీ మెట్రో స్టేషన్‌లో భారీ పేలుడు సంభవించింది. దీంతో...

ಪಾಲಿಕೆಯ 2026-27ನೇ ಆಯವ್ಯಯವು ‘ಸತ್ವ ಇಲ್ಲದ ಬಜೆಟ್’- ಮಾಜಿ ಮೇಯರ್ ಶಿವಕುಮಾರ್  ಟೀಕೆ

ಮೈಸೂರು,ಮಾರ್ಚ್,26,2026 (www.justkannada.in): ಜನಸ್ನೇಹಿ ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ 10 ಕೋಟಿ...