27
March, 2026

A News 365Times Venture

27
Friday
March, 2026

A News 365Times Venture

ಅನುಮತಿ ಪಡೆಯುವ ಆದೇಶ: ಯಾವುದೇ ಸಂಘಸಂಸ್ಥೆಗಳನ್ನು ಗುರಿಯಾಗಿಸಿಲ್ಲ- ಸಿಎಂ ಸಿದ್ದರಾಮಯ್ಯ

Date:

ಮೈಸೂರು, ಅಕ್ಟೋಬರ್, 18,2025 (www.justkannada.in):  ಯಾವುದೇ ಸಂಘಸಂಸ್ಥೆಗಳ ಚಟುವಟಿಕೆಗಳನ್ನು ಜನರಿಗೆ ತೊಂದರೆಯಾಗುವಂತೆ ಸಾರ್ವಜನಿಕ ಸ್ಥಳಗಳಲ್ಲಿ ನಡೆಸಲು ಅನುಮತಿ ಪಡೆಯುವಂತೆ ಆದೇಶ ನೀಡಲಾಗಿದ್ದು, ಇದರಲ್ಲಿ ಯಾವುದೇ ಸಂಘಸಂಸ್ಥೆಗಳನ್ನು ಗುರಿಯಾಗಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥಸಂಚಲನದ ಬಗ್ಗೆ ಗೊಂದಲ ಎದ್ದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಹಿಂದೆ ಬಿಜೆಪಿಯ ಜಗದೀಶ್ ಶೆಟ್ಟರ್ ಅವರ ನೇತೃತ್ವದ ಸರ್ಕಾರ ಆದೇಶ ಹೊರಡಿಸಿದಂತೆ , ನಮ್ಮ ಸರ್ಕಾರವೂ ಆದೇಶವನ್ನು ಹೊರಡಿಸಿದೆ. ಬಿಜೆಪಿ ಸರ್ಕಾರ ಹೊರಡಿಸಿದ್ದ ಈ ಆದೇಶಕ್ಕೆ ಯಾವುದೇ ವಿರೋಧ ವ್ಯಕ್ತವಾಗಿರಲಿಲ್ಲ. ಈ ಆದೇಶದಲ್ಲಿ ಸರ್ಕಾರ ಯಾವುದೇ ನಿಗಧಿತವಾದ ಸಂಘಸಂಸ್ಥೆಯನ್ನು ಗುರಿ ಮಾಡಿಲ್ಲ. ಬಿಜೆಪಿ ಜನರ ಹಿತಚಿಂತನೆ ಮಾಡುವುದನ್ನು ಬಿಟ್ಟು ರಾಜಕೀಯದಲ್ಲಿ ತೊಡಗಿದ್ದಾರೆ. ಈ ವಿಷಯದಲ್ಲಿ ಸಮಾಜದ ಶಾಂತಿಭಂಗವಾಗದಂತೆ ಪೊಲೀಸ್ ಇಲಾಖೆ ನೋಡಿಕೊಳ್ಳುತ್ತದೆ ಎಂದರು.

ಗುತ್ತಿಗೆದಾರರ ಬಾಕಿ- ಸಂಬಂಧಪಟ್ಟ ಸಚಿವರಿಂದ ಕ್ರಮ

ಗುತ್ತಿಗೆದಾರರ ಬಾಕಿ ಪಾವತಿಯಾಗದಿದ್ದರೆ ಮಾನ್ಯ ರಾಜ್ಯಪಾಲರನ್ನು ಭೇಟಿಮಾಡುವುದಾಗಿ ಕೂಗೆದ್ದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಸಂಬಂಧಪಟ್ಟ ಸಚಿವರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

Key words: No, organizations, targeted, CM, Siddaramaiah, Mysore

The post ಅನುಮತಿ ಪಡೆಯುವ ಆದೇಶ: ಯಾವುದೇ ಸಂಘಸಂಸ್ಥೆಗಳನ್ನು ಗುರಿಯಾಗಿಸಿಲ್ಲ- ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಕಾಳಸಂತೆಯಲ್ಲಿ ಗೃಹ ಬಳಕೆ ಸಿಲಿಂಡರ್ ಮಾರಾಟ ಮಾಡಿದ್ರೆ ಕಟ್ಟುನಿಟ್ಟಿನ ಕ್ರಮ- ಜಿಲ್ಲಾಧಿಕಾರಿ

ಮಂಡ್ಯ ,ಮಾರ್ಚ್,27,2026 (www.justkannada.in):  ಕಾಳಸಂತೆಯಲ್ಲಿ ಗೃಹ ಬಳಕೆ ಸಿಲಿಂಡರ್ ಮಾರಾಟ...

വൈദികരുടെ ലൈംഗിക പീഡനം; 57 ഇരകള്‍ക്ക് 1.85 മില്യണ്‍ ഡോളര്‍ നഷ്ടപരിഹാരം പ്രഖ്യാപിച്ച് പോര്‍ച്ചുഗീസ് കത്തോലിക്കാ സഭ

ലിസ്ബണ്‍: പോര്‍ച്ചുഗലിലെ കത്തോലിക്കാ പുരോഹിതന്മാരുടെ ലൈംഗിക പീഡനത്തിന് ഇരയായവര്‍ക്ക് നഷ്ടപരിഹാരം നല്‍കി...

'டிஜிட்டல் மயமான தமிழக மட்பாண்டக் குறியீடுகள்' – எப்படி இருக்கிறது தொல்லியல் குறியீடு இணையதளம்?

தமிழகத்தின் பண்டைய வரலாற்றையும், சிந்துவெளி நாகரிகத்துடனான அதன் பண்பாட்டுத் தொடர்ச்சியையும் பறைசாற்றும்...