15
March, 2026

A News 365Times Venture

15
Sunday
March, 2026

A News 365Times Venture

ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಗುದ್ದಲಿ ಪೂಜೆ

Date:

ಮೈಸೂರು,ಅಕ್ಟೋಬರ್,18,2025 (www.justkannada.in):  ನಾಡನಹಳ್ಳಿ ರಾಜಕೀಯವಾಗಿ ಪ್ರಬುದ್ಧ ಜನರನ್ನು ಒಳಗೊಂಡಿರುವ ಗ್ರಾಮವಾಗಿದ್ದು, ಗ್ರಾಮಕ್ಕೆ ಅವಶ್ಯಕತೆ ಇರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು.

ಮೈಸೂರಿನ ನಾಡನಹಳ್ಳಿ ಗ್ರಾಮದಲ್ಲಿ ಇಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಸಚಿವ ಹೆಚ್.ಸಿ ಮಹದೇವಪ್ಪ ಮಾತನಾಡಿದರು.

ಗ್ರಾಮದಲ್ಲಿ ಗ್ರಂಥಾಲಯ, ಆಟದ ಮೈದಾನ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಿ ಹಂತಹಂತವಾಗಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

ನಾನು ಪ್ರತಿಮೆಯಲ್ಲಿಲ್ಲ, ಸಂವಿಧಾನ ಮತ್ತು ಪುಸ್ತಕಗಳಲ್ಲಿದ್ದೇನೆ ಎಂದು ಅಂಬೇಡ್ಕರ್ ಅವರೇ ಹೇಳಿದ್ದಾರೆ. ಆದರೂ ಅವರ ಗೌರವದ ಸಂಕೇತವಾಗಿ ಪ್ರತಿಮೆಗಳನ್ನು ನಿರ್ಮಿಸುತ್ತಿದ್ದೇವೆ. ನಮ್ಮ ಜನರು ಬಾಬಾಸಾಹೇಬರ ಮಾತನ್ನು ಅರ್ಥ ಮಾಡಿಕೊಂಡು ಶಿಕ್ಷಣ ಪಡೆದು, ಪುಸ್ತಕಗಳನ್ನು ಅಧ್ಯಯನ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಶಾಸಕ ಜಿ.ಟಿ.ದೇವೇಗೌಡ ಅವರು ಮಾತನಾಡಿ, ಈ ಗ್ರಾಮವು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟು ಮೇಲ್ದರ್ಜೆಗೇರಿದೆ. ಆದರೂ ಇಲ್ಲಿನ ಗ್ರಾಮಸ್ಥರಿಗೆ ಕೆಲವು ತೊಂದರೆ ಉಂಟಾಗುತ್ತಿದೆ. ಗ್ರಾಮದ ನಿರಾಶ್ರಿತರಿಗೆ ಆಶ್ರಯ ಯೋಜನೆಯಡಿ ನಿವೇಶನ ವಿತರಿಸಲು ಸಚಿವರೊಂದಿಗೆ ಮಾತನಾಡಿ ಕ್ರಮವಹಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ನಾಡಹಳ್ಳಿ ಗ್ರಾಮದ ಎಂ.ಪ್ರಸಾದ್, ಸಿದ್ದಯ್ಯ, ಎಂ.ಕುಮಾರ್, ಎಸ್.ಸಂತೋಷ್ ಕುಮಾರ್, ಮಾಹಲಿಂಗಸ್ವಾಮಿ, ಮಧುಸೂದನ್, ಎಂ.ಹರೀಶ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಪದಾಧಿಕಾರಿಗಳು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Key words: Minister, Dr. H.C. Mahadevappa, Gudali Puja, Dr. B.R. Ambedkar Community Hall

The post ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಗುದ್ದಲಿ ಪೂಜೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಯುದ್ದದ ವಿಚಾರದಲ್ಲಿ ಕಾಂಗ್ರೆಸ್ ಸುಳ್ಳು ಹೇಳಿಕೆ, ಜನರಲ್ಲಿ ಆತಂಕ ಉಂಟು ಮಾಡಿದೆ- ಪ್ರಧಾನಿ ಮೋದಿ

ಅಸ್ಸಾಂ, ಮಾರ್ಚ್, 14,2026 (www.justkannada.in):  ಯುದ್ದದ ವಿಚಾರದಲ್ಲಿ ಕಾಂಗ್ರೆಸ್ ಸುಳ್ಳು...

ഭരണാഘടനാ തടസ്സം; യുദ്ധകപ്പലുകള്‍ അയക്കാനാവില്ല; ട്രംപിനെ തള്ളി ജപ്പാന്‍

വാഷിങ്ടണ്‍: ഹോര്‍മുസ് കടലിടുക്കിന്റെ സുരക്ഷ ഉറപ്പാക്കാന്‍ ലോകരാഷ്ട്രങ്ങള്‍ സ്വന്തം യുദ്ധ കപ്പലുകള്‍...

''காங்கிரஸுக்குக் கூடுதல் தொகுதிகள் ஒதுக்கியதை தோழமைக்கட்சிகள் விவாதமாக்காதீர்கள்"- செல்வப்பெருந்தகை

இன்று சட்டமன்றத் தேர்தலுக்கான தேதி அறிவிக்கப்படும் எனத் தேர்தல் ஆணையம் அறிவித்திருக்கிறது....

LPG Crisis: వారికి కేంద్రం షాక్.. “నో బుకింగ్, సిలిండర్ సరెండల్ చేయాలి “..

LPG Crisis: ఇరాన్ యుద్ధం దేశంలో వంటగ్యాస్ (LPG) ఆందోళన్ని...