29
March, 2026

A News 365Times Venture

29
Sunday
March, 2026

A News 365Times Venture

‘ಸಿಟಿ ಇನ್ಸ್ ಟಿಟ್ಯೂಟ್’ ಸಾರ್ವಜನಿಕರಿಗೆ ಇನ್ನಷ್ಟು ಉತ್ತಮ ಸೇವೆಗಳನ್ನು ಒಗಿಸಲಿ- ಸಂಸದ ಡಾ. ಸಿ. ಎನ್. ಮಂಜುನಾಥ್

Date:

ಬೆಂಗಳೂರು,ಅಕ್ಟೋಬರ್,6,2025 (www.justkannada.in): ‘ದಿ ಬೆಂಗಳೂರು ಸಿಟಿ ಇನ್ಸ್ ಟಿಟ್ಯೂಟ್’ ಹೊಸ ತಂತ್ರಜ್ಞಾನ ಹಾಗೂ ಸೌಲಭ್ಯಗಳೊಂದಿಗೆ ಸಾರ್ವಜನಿಕರಿಗೆ ಇನ್ನಷ್ಟು ಉತ್ತಮ ಸೇವೆಗಳನ್ನು ಒದಗಿಸಲಿ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದ ಡಾ. ಸಿ. ಎನ್. ಮಂಜುನಾಥ್ ಶುಭ ಹಾರೈಸಿದರು.

ಸಂಸ್ಥೆಯ ನವೀಕರಿಸಿದ ಆಡಳಿತ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಡಾ. ಸಿ. ಎನ್. ಮಂಜುನಾಥ್,  ಈ ನವೀಕರಣವು ಎಲ್ಲಾ ಸದಸ್ಯರಿಗೆ ಸೌಲಭ್ಯಗಳು ಮತ್ತು ಸೇವೆಗಳನ್ನು ಹೆಚ್ಚಿಸುವಲ್ಲಿ ಪ್ರಮುಖ ಮೈಲಿಗಲ್ಲಾಗಿದೆ. City Institute ತನ್ನ ಪರಂಪರೆಯ ಮೌಲ್ಯಗಳನ್ನು ಉಳಿಸಿಕೊಂಡು, ಹೊಸ ತಂತ್ರಜ್ಞಾನ ಹಾಗೂ ಸೌಲಭ್ಯಗಳೊಂದಿಗೆ ಸಾರ್ವಜನಿಕರಿಗೆ ಇನ್ನಷ್ಟು ಉತ್ತಮ ಸೇವೆಗಳನ್ನು ಒದಗಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರು ಬಸವನಗುಡಿಯ ಹೃದಯ ಭಾಗದಲ್ಲಿ ಅಸ್ಥಿತ್ವದಲ್ಲಿರುವ “The Bangalore City Institute (R)” ಹಲವು ದಶಕಗಳಿಂದ ಸಮಾಜಮುಖಿ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿದ್ದು, ಅನೇಕರ ಸೇವಾಭಾವನೆ ಹಾಗೂ ಸಮರ್ಪಣೆಯಿಂದ ಬೆಳೆದು ಬಂದಿದೆ.

ಈ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಸುಕುಮಾರ್ ಕುನಾ, ಗೌರವ ಕಾರ್ಯದರ್ಶಿ ಲಕ್ಷ್ಮಿಶ ಚಂದ್ರ, ಉಪಾಧ್ಯಕ್ಷ ಚಂದ್ರಶೇಖರ ಎಸ್.ಸಿ., ಖಜಾಂಚಿ ಸತೀಶ್ ಬಾಬು ಆರ್.ಎಸ್., ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Key words: Bangalore City Institute, Public Service, MP, CN Manjunath

The post ‘ಸಿಟಿ ಇನ್ಸ್ ಟಿಟ್ಯೂಟ್’ ಸಾರ್ವಜನಿಕರಿಗೆ ಇನ್ನಷ್ಟು ಉತ್ತಮ ಸೇವೆಗಳನ್ನು ಒಗಿಸಲಿ- ಸಂಸದ ಡಾ. ಸಿ. ಎನ್. ಮಂಜುನಾಥ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ʼಮುಖ್ಯಮಂತ್ರಿ ಪದಕʼ ಪ್ರಕಟ: ಮೈಸೂರಿನ ನಾಲ್ವರು ಸೇರಿ ರಾಜ್ಯದ 153 ಪೊಲೀಸರಿಗೆ ಗೌರವ

  ಬೆಂಗಳೂರು, ಮಾ.೨೮,೨೦೨೬ : 2025ನೇ ಸಾಲಿನ ಮುಖ್ಯಮಂತ್ರಿ ಪದಕ (CM...

ആശങ്ക കുറയുന്നു; രണ്ട് ഇന്ത്യന്‍ എല്‍.പി.ജി കപ്പലുകള്‍ ഹോര്‍മുസ് കടലിടുക്ക് കടന്നു

ന്യൂദല്‍ഹി: ഹോര്‍മുസ് കടലിടുക്കിലൂടെയുള്ള ഗതാഗതം പൂര്‍ണമായും നിരോധിച്ചെന്ന റിപ്പോര്‍ട്ടുകള്‍ ആശങ്കയാകുന്നതിനിടെ രണ്ട്...

"இதற்குப் பெயர்தான் சீட் பங்கீடா?" – கடிந்துக்கொண்ட பி.எல்.சந்தோஷ் ; கப்சிப் நயினார்

அ.தி.மு.க தலைமையிலான தே.ஜ கூட்டணியில், பா.ஜ.க-வுக்கு 27 தொகுதிகள் ஒதுக்கப்பட்டுள்ளன. தொகுதி...

Viral Video: సీఎం బుగ్గపై ముద్దు పెట్టిన మహిళ.. నెట్టింట వీడియో వైరల్..

అసోం ముఖ్యమంత్రి హిమంత బిశ్వ శర్మ ఎన్నికల ప్రచారంలో జరిగిన ఒక...