29
March, 2026

A News 365Times Venture

29
Sunday
March, 2026

A News 365Times Venture

ಮೈಸೂರು ಅರಮನೆಯಲ್ಲಿ ಕಳೆಗಟ್ಟಿದ ಆಯುಧಪೂಜೆ ಸಂಭ್ರಮ: ಯದುವೀರ್ ರಿಂದ ಪೂಜಾ ಕೈಂಕರ್ಯ

Date:

ಮೈಸೂರು,ಅಕ್ಟೋಬರ್,1,2025 (www.justkannada.in):  ಇಂದು ನಾಡಿನಾದ್ಯಂತ ಆಯುಧಪೂಜೆ ಸಂಭ್ರಮವಾಗಿದ್ದು ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ ಕಳೆಗಟ್ಟಿದೆ ಮನೆ ಮಾಡಿದೆ. ಬೆಳಗ್ಗೆಯಿಂದಲೇ ಸಾಂಪ್ರದಾಯಿಕ ಪೂಜೆ-ಪುನಸ್ಕಾರಗಳು ನಡೆದಿದ್ದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜಾಕೈಂಕರ್ಯ ನೆರವೇರಿಸಿದ್ದಾರೆ.

ಬೆಳಗ್ಗೆ ಅರಮನೆಯಲ್ಲಿ ಚಂಡಿಕಾ ಹೋಮ ನಡೆಯಿತು. ಅರಮನೆಯಿಂದ ಕೋಡಿ ಸೋಮೇಶ್ವರ ದೇವಾಲಯಕ್ಕೆ ಆಯುಧಗಳನ್ನು ಪಲ್ಲಕ್ಕಿಯಲ್ಲಿ ರವಾನಿಸಿ ಶುಚಿಗೊಳಿಸಿದ ಬಳಿಕ ಆಯುಧಗಳನ್ನ ಪಲ್ಲಕಿಯಲ್ಲಿ ವಾಪಸ್ ಅರಮನೆಗೆ ರವಾನೆ ಮಾಡಲಾಯಿತು. ನಂತರ ಅರಮನೆಯ ಆನೆ ಬಾಗಿಲು ಮೂಲಕ ಕಲ್ಯಾಟಮಂಟಪಕ್ಕೆ ಕೊಂಡೊಯ್ದು ಜೋಡಣೆ ಕಾರ್ಯ ನಡೆದಿದ್ದು, ಸಿಂಹಾಸನಕ್ಕೆ ಜೋಡಿಸಿದ್ದ ಸಿಂಹಕ್ಕೆ ಪೂಜೆ ಯದುವೀರರು ಪೂಜೆ ಸಲ್ಲಿಸಿದರು. ಆ ನಂತರ ರಾಜಪುರೋಹಿತರ ಮಾರ್ಗದರ್ಶನದಂತೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಆಯುಧ ಪೂಜೆ ನೆರವೇರಿಸಿದರು.

ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಒಂಟೆ, ಪಟ್ಟದ ಹಸುಗಳಿಗೂ ಪೂಜೆ ಸಲ್ಲಿಸಿದ ಬಳಿಕ ಅರಮನೆಯಲ್ಲಿರುವ ಐಷಾರಾಮಿ ಕಾರು ಮತ್ತು ಇತರೆ ವಾಹನಗಳಿಗೂ ಪೂಜೆ ಸಲ್ಲಿಕೆ ಮಾಡಲಾಯಿತು.

ಸೋಮೇಶ್ವರ ದೇಗುಲಕ್ಕೆ ಪಟ್ಟದ ಕತ್ತಿಯ ಜೊತೆಗೆ ಪಲ್ಲಕ್ಕಿ ಹೊರಟಿ. ಪಟ್ಟದ ಆನೆಗಳು. ಪಟ್ಟದ ಕುದುರೆಗಳ ಜೊತೆಗೆ ಸೋಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು.

Key words: Ayudha Puja, celebration, Mysore Palace

The post ಮೈಸೂರು ಅರಮನೆಯಲ್ಲಿ ಕಳೆಗಟ್ಟಿದ ಆಯುಧಪೂಜೆ ಸಂಭ್ರಮ: ಯದುವೀರ್ ರಿಂದ ಪೂಜಾ ಕೈಂಕರ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಟಾರ್ಚು – ಮರೆಯಲಾಗದ ಒಂದು ಪ್ರಯಾಣ

  ಬೆಂಗಳೂರು: ಇತ್ತೀಚೆಗೆ, ಆಹ್ವಾನದ ಮೇರೆಗೆ ನಾನು ಪ್ರಯೋಗಾತ್ಮಕ ಕನ್ನಡ ಚಲನಚಿತ್ರ...

എഥനോള്‍ ചേര്‍ത്ത പെട്രോളുള്ളതുകൊണ്ട് നമുക്ക് ഇന്ധന പ്രതിസന്ധിയുണ്ടായില്ല, E20 പെട്രോളിനെ ന്യായീകരിച്ച് മോദി

ലഖ്‌നൗ: കേന്ദ്ര സര്‍ക്കാരിന്റെ എഥനോള്‍ മിശ്രിത പെട്രോളിനെ ന്യായീകരിച്ച് പ്രധാനമന്ത്രി നരേന്ദ്ര...

"சிறுபான்மையினர் வாக்குகளை அவ்வளவு எளிதாகக் கவர முடியாது" – விஜய்யை விமர்சிக்கும் கருணாஸ்

தமிழக வெற்றிக் கழகத்தின் தலைவர் விஜய், வருகிற சட்டமன்றத் தேர்தலில் போட்டியிடப்...