29
March, 2026

A News 365Times Venture

29
Sunday
March, 2026

A News 365Times Venture

ಮಹೇಶ್ ತಿಮರೋಡಿಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್

Date:

ಬೆಂಗಳೂರು, ಸೆಪ್ಟಂಬರ್,30,2025 (www.justkannada.in): ದಕ್ಷಿಣ ಕನ್ನಡದಿಂದ ರಾಯಚೂರಿಗೆ ಹೋರಾಟಗಾರ ಮಹೇಶ್ ತಿಮರೋಡಿ ಅವರನ್ನ ಗಡಿಪಾರು ಮಾಡದ್ದ ಆದೇಶವನ್ನ ಸದ್ಯಕ್ಕೆ ಜಾರಿ ಮಾಡದಂತೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ.

ಈ ಮೂಲಕ  ಮಹೇಶ್ ತಿಮರೋಡಿ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.  ಮಹೇಶ್ ತಿಮರೋಡಿ ಅವರು ಧರ್ಮಸ್ಥಳ ಪ್ರಕರಣ ಸಂಬಂಧ ಬುರುಡೆ ಚೆನ್ನಯ್ಯನಿಗೆ ಆಶ್ರಯ ನೀಡಿದ್ದರು. ಜೊತೆಗೆ ಅವರ ವಿರುದ್ದ 32 ಪ್ರಕರಣಗಳು ದಾಖಲಾಗಿದ್ದವು.

ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿಗೆ ಮಹೇಶ್ ತಿಮರೋಡಿ ಅವರನ್ನ  ಗಡಿಪಾರು ಮಾಡಲಾಗಿತ್ತು. ಇದನ್ನ ಪ್ರಶ್ನಿಸಿ ಮಹೇಶ್ ತಿಮರೋಡಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಮಹೇಶ್ ತಿಮರೋಡಿ ವಿರುದ್ಧ ಬಲವಂತದ ಕ್ರಮ ಬೇಡ. ಸಧ್ಯಕ್ಕೆ ಗಡಿಪಾರು ಆದೇಶ ಜಾರಿಗೆ ತರದಂತೆ ಸೂಚಿಸಿದೆ. ಅಕ್ಟೋಬರ್ 8ರವರೆಗೆ ಮಹೇಶ್ ತಿಮರೋಡಿ ವಿರುದ್ಧ ಗಡಿಪಾರು ಆದೇಶ ಕೈಗೊಳ್ಳದಂತೆ ಹೈಕೋರ್ಟ್ ತಿಳಿಸಿದೆ.

Key words: High Court, temporary relief, Mahesh Timarodi

The post ಮಹೇಶ್ ತಿಮರೋಡಿಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಟಾರ್ಚು – ಮರೆಯಲಾಗದ ಒಂದು ಪ್ರಯಾಣ

  ಬೆಂಗಳೂರು: ಇತ್ತೀಚೆಗೆ, ಆಹ್ವಾನದ ಮೇರೆಗೆ ನಾನು ಪ್ರಯೋಗಾತ್ಮಕ ಕನ್ನಡ ಚಲನಚಿತ್ರ...

എഥനോള്‍ ചേര്‍ത്ത പെട്രോളുള്ളതുകൊണ്ട് നമുക്ക് ഇന്ധന പ്രതിസന്ധിയുണ്ടായില്ല, E20 പെട്രോളിനെ ന്യായീകരിച്ച് മോദി

ലഖ്‌നൗ: കേന്ദ്ര സര്‍ക്കാരിന്റെ എഥനോള്‍ മിശ്രിത പെട്രോളിനെ ന്യായീകരിച്ച് പ്രധാനമന്ത്രി നരേന്ദ്ര...

"சிறுபான்மையினர் வாக்குகளை அவ்வளவு எளிதாகக் கவர முடியாது" – விஜய்யை விமர்சிக்கும் கருணாஸ்

தமிழக வெற்றிக் கழகத்தின் தலைவர் விஜய், வருகிற சட்டமன்றத் தேர்தலில் போட்டியிடப்...