30
March, 2026

A News 365Times Venture

30
Monday
March, 2026

A News 365Times Venture

ದಸರಾ ಸಂಭ್ರಮಕ್ಕೆ ಹೊಸ ಮೆರಗು: ನಾಳೆ ನಾಡಿದ್ದು ಆಕರ್ಷಕ ‘ಡ್ರೋನ್‌ ಪ್ರಾಯೋಗಿಕ ಪ್ರದರ್ಶನ’

Date:

ಮೈಸೂರು, ಸೆಪ್ಟಂಬರ್,27, 2025 (www.justkannada.in): ನಾಡಹಬ್ಬ ದಸರಾ ಮಹೋತ್ಸವಕ್ಕೆ ಮೆರಗು ನೀಡಿರುವ ಆಕರ್ಷಕ ಡ್ರೋನ್‌ ಪ್ರದರ್ಶನ ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆಯಲಿದೆ. ಸೆಪ್ಟಂಬರ್ 28, 29ರಂದು ಡ್ರೋನ್‌ ಶೋ ಪ್ರಾಯೋಗಿಕ ಪ್ರದರ್ಶನ ನಡೆಯಲಿದ್ದು, ಅಕ್ಟೋಬರ್ 1 ಹಾಗೂ 2ರಂದು ಮುಖ್ಯ ಪ್ರದರ್ಶನ ನಡೆಯಲಿದೆ.

ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಸೆಸ್ಕ್‌)ನಿಂದ ಆಯೋಜಿಸಲಾಗುತ್ತಿರುವ ಡ್ರೋನ್‌ ಪ್ರದರ್ಶನ ಕಳೆದ ವರ್ಷ ನೋಡುಗರಿಗೆ ವಿಶೇಷ ಅನುಭವ ನೀಡಿತ್ತು. ದಸರೆಯ ಪ್ರಮುಖ ಆಕರ್ಷಣೆಯಾಗಿರುವ ಈ ಡ್ರೋನ್‌ ಪ್ರದರ್ಶನ ಈ ಬಾರಿ ಇನ್ನಷ್ಟು ರೋಮಾಂಚನಕಾರಿಯಾಗಿರಲಿದೆ. ಸೆಪ್ಟಂಬರ್ 28ರಂದು ಸಂಜೆ 7 ಗಂಟೆಯಿಂದ ಡ್ರೋನ್‌ ಪ್ರದರ್ಶನ ನಡೆಯಲಿದ್ದು, ಇದಕ್ಕೂ ಮುನ್ನ ಸಾರ್ವಜನಿಕರ ಮನರಂಜನೆಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಂಜೆ 4 ಗಂಟೆಯಿಂದ ಪಂಜಿನ ಕವಾಯತು ಮೈದಾನ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ.

ಈ ಬಾರಿ ಹೆಚ್ಚಿನ ಮೆರಗು:

ಸೆಸ್ಕ್‌ ವತಿಯಿಂದ ಕಳೆದ ವರ್ಷ ಆಯೋಜಿಸಿದ್ದ ಡ್ರೋನ್‌ ಪ್ರದರ್ಶನ ದಸರಾ ಸಂಭ್ರಮಕ್ಕೆ ಹೊಸ ಮೆರಗು ನೀಡಿತ್ತು. 1500 ಡ್ರೋನ್‌ ಗಳ ಮೂಲಕವಾಗಿ ನಡೆಸಲಾಗಿದ್ದ ಪ್ರದರ್ಶನದಲ್ಲಿ ಆಗಸದಲ್ಲಿ ವಿವಿಧ ವಿನ್ಯಾಸಗಳ 15ಕ್ಕೂ ಹೆಚ್ಚು ಬೆಳಕಿನ‌ ಚಿತ್ತಾರಗಳನ್ನು ಮೂಡಿಸಲಾಗಿತ್ತು.

3000 ಡ್ರೋನ್‌ ಗಳ ಬಳಕೆ..

ಡ್ರೋನ್‌ ಪ್ರದರ್ಶನಕ್ಕೆ ಮೊದಲ ಪ್ರಯತ್ನದಲ್ಲಿ ದೊರೆತ ಯಶಸ್ಸಿನ ಹಿನ್ನೆಲೆಯಲ್ಲಿ ಈ ಬಾರಿಯ ಪ್ರದರ್ಶನವನ್ನು ಮತ್ತಷ್ಟು ಆಕರ್ಷಣೀಯವಾಗಿ ಮಾಡಲು ಸೆಸ್ಕ್‌ ಸನ್ನದ್ಧವಾಗಿದೆ. ಈ ವರ್ಷದ ಡ್ರೋನ್‌ ಶೋನಲ್ಲಿ 3000 ಡ್ರೋನ್‌ ಗಳನ್ನು ಬಳಸಿಕೊಂಡು ಪ್ರದರ್ಶನ ನೀಡಲಾಗುತ್ತಿದೆ. ಹೀಗಾಗಿ ಈ ಬಾರಿಯ ಡ್ರೋನ್‌ ಶೋ ಹೊಸತನ ಹಾಗೂ ಅತ್ಯಾಕರ್ಷಕವಾಗಿರಲಿದ್ದು, ನೋಡುಗರಿಗೆ ವಿಶಿಷ್ಟ ಅನುಭವವನ್ನು ನೀಡಲಿದೆ.

ಈ ಡ್ರೋನ್ ಶೋ ಬಗ್ಗೆ ಮಾತನಾಡಿದ ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್‌ ರಾಜು, ಕಳೆದ ವರ್ಷ ಎಲ್ಲರನ್ನು ರಂಜಿಸಿದ್ದ ಡ್ರೋನ್‌ ಪ್ರದರ್ಶನ ಈ ಬಾರಿ ನಾಲ್ಕು ದಿನಗಳು ನಡೆಯಲಿದೆ. ಈ ಬಾರಿಯ ಪ್ರದರ್ಶನ ಹೆಚ್ಚು ಆಕರ್ಷಣೆಯಿಂದ ಕೂಡಿರಲಿದೆ. 3000 ಡ್ರೋನ್‌ಗಳನ್ನು ಬಳಸಿಕೊಂಡು ನೀಡಲಾಗುವ ಈ ಬಾರಿಯ ಪ್ರದರ್ಶನ ಪ್ರೇಕ್ಷಕರಿಗೆ ರೋಮಾಂಚನಕಾರಿ ಅನುಭವ ನೀಡಲಿದೆ ಎಂದಿದ್ದಾರೆ.

Key words: Mysore Dasara, drone  show, tomorrow

The post ದಸರಾ ಸಂಭ್ರಮಕ್ಕೆ ಹೊಸ ಮೆರಗು: ನಾಳೆ ನಾಡಿದ್ದು ಆಕರ್ಷಕ ‘ಡ್ರೋನ್‌ ಪ್ರಾಯೋಗಿಕ ಪ್ರದರ್ಶನ’ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഓശാന ദിനത്തിൽ പള്ളിയിൽ പ്രവേശനം നിഷേധിച്ച ഇസ്രഈൽ പൊലീസ് നടപടി; അപലപിച്ച് വത്തിക്കാൻ

ജെറുസലേം: ഓശാന ദിനത്തിൽ ജറുസലേമിലെ ‘ചർച്ച് ഓഫ് ദി ഹോളി സ്‌പൽച്ചർ’...

'சர்வே முடிவுகள்; கட்சிக் கட்டமைப்பு; MLA மீதான அதிருப்தி'- விஜய் பெரம்பூரை டிக் அடிக்க காரணம் என்ன?

விஜய், பெரம்பூர் தொகுதியில் போட்டியிடப் போவதாக அவரே அறிவித்திருக்கிறார். நாளையே வேட்புமனுவையும்...

Chairman’s Desk : చట్టసభల్లో మహిళలకు రిజర్వేషన్ పెను మార్పులు తెస్తుందా?

నియోజకవర్గాల పునర్విభజనతోపాటు దేశంలో 33 శాతం మహిళా రిజర్వేషన్లు అమలు కాబోతున్నాయి....

ಇರಾನ್ ಭಾರತದ ಮಿತ್ರರಾಷ್ಟ್ರವಾಗಿದ್ದಕ್ಕೆ ನಮ್ಮ ಹಡಗುಗಳನ್ನು ಮಾತ್ರ ಬಿಡುತ್ತಿದ್ದಾರೆ-ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಮಾರ್ಚ್,28,2026 (www.justkannada.in): ಇರಾನ್ ಭಾರತದ ಮಿತ್ರ ರಾಷ್ಟ್ರ. ಹೀಗಾಗಿ ನಮ್ಮ...