30
March, 2026

A News 365Times Venture

30
Monday
March, 2026

A News 365Times Venture

ದಸರಾ ಗಜಪಡೆ ಜತೆ ರೀಲ್ಸ್‌ : ತಪ್ಪಿತಸ್ಥರ ವಿರುದ್ಧ “ದಂಡ”  ಪ್ರಯೋಗಿಸಿದ ಅರಣ್ಯ ಇಲಾಖೆ

Date:

ಮೈಸೂರು, ಸೆ.೨೫,೨೦೨೫:  ದಸರಾದಲ್ಲಿ ಪಾಲ್ಗೊಳ್ಳುವ ಗಜಪಡೆಗಳ ಜತೆ ಫೋಟೋ, ವಿಡಿಯೋ, ರೀಲ್ಸ್ ಮಾಡುವವರ ವಿರುದ್ಧ ಅರಣ್ಯ ಇಲಾಖೆ ಚಾಟಿ ಬೀಸಿದೆ. ಇಂಥವರ ವಿರುದ್ಧ ದಂಡ ಪ್ರಯೋಗಿಸಿದೆ.

ಸೆ. 18ರಂದು ಯುವತಿಯೊಬ್ಬಳು ರೀಲ್ಸ್ ಮಾಡಿದ ವೀಡಿಯೋ ವೈರಲ್‌ ಆಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ಧಿ ಪ್ರಕಟಗೊಂಡು, ಪೊಲೀಸ್‌, ಅರಣ್ಯ ಇಲಾಖೆ ನಿರ್ಲಕ್ಷ್ಯದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ಕಾರ್ಯೋನ್ಮುಕರಾದ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳ ಜತೆ ಫೋಟೋ, ರೀಲ್ಸ್‌ ಮಾಡಿದವರ ವಿರುದ್ಧ ಕ್ರಮ ಜರುಗಿಸಿದೆ. ಪ್ರಜ್ವಲ್‌ , ಎಂ.ಡಿ.ರಾಘವೇಂದ್ರ ತಲಾ ೫೦೦ ರೂ. ಹಾಗೂ ಕೆ.ನವೀನ್‌ ೨೦೦೦ ರೂ. ಮತ್ತು ಕು.ಕೃತಿ ೧೦೦೦ ರೂ. ದಂಡ ಪಾವತಿಸಿದ್ದಾರೆ.

ಏನಿದು ಘಟನೆ:

ಈ ಹಿಂದೆಯೇ ದಸರಾ ಆನೆಗಳ ಜತೆ ಸಾರ್ವಜನಿಕರು ಫೋಟೋ, ವಿಡಿಯೋ ಹಾಗೂ ರೀಲ್ಸ್‌ ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದ ಸರಕಾರ ಇದರ ವಿಯಂತ್ರಣಕ್ಕೆ ಅದೇಶಿಸಿತ್ತು. ಈ ಬಗ್ಗ ಸ್ಪಷ್ಟ ಸೂಚನೆ ನೀಡಿದ್ದರು ಮತ್ತೆ ಅಂಥ ಘಟನೆ ಪುನರಾವರ್ತನೆ ಆಗುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿತು. ಕೆಲ ದಿನಗಳ ಹಿಂದೆಯಷ್ಟೆ ಕರ್ತವ್ಯಲೋಪವೆಸಗಿದವರ ವಿರುದ್ಧ ಶಿಸ್ತು ಕ್ರಮಕ್ಕೆ ಆದೇಶಿಸಿತ್ತು.

ಸೆ.18ರ ರಾತ್ರಿ ಸಿಬ್ಬಂದಿಯ ಕಣ್ಣು ತಪ್ಪಿಸಿ ಆನೆ ಸಮೀಪ ಹೋಗಿ ರೀಲ್ಸ್‌ ಮಾಡಿದ ಯುವತಿ ವರ್ತನೆಗೆ ಸಿಬ್ಬಂದಿ ಮತ್ತು ಆನೆಗಳ ಜವಾಬ್ದಾರಿ ಹೊತ್ತ ಅಧಿಕಾರಿಗಳ ಕರ್ತವ್ಯ ಲೋಪ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿ ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿತ್ತು. ಜತೆಗೆ ಮಹಿಳೆಯನ್ನು ಪತ್ತೆ ಮಾಡಿ ದಂಡ ವಿಧಿಸಿ, ಮತ್ತೆ ಇಂತಹ ಘಟನೆ ಮರುಕಳಿಸದಂತೆ ಕಟ್ಟೆಚ್ಚರ ವಹಿಸಲು ಸೂಚಿಸಿತ್ತು.

ಪ್ರಭಾವ ಬೀರಿದ ಪತ್ರಕರ್ತ..!

ಯುವತಿ ಆನೆ ಜತೆ ರೀಲ್ಸ್‌ ಮಾಡಿದ ಘಟನೆಗೆ ಸಂಬಂಧಿಸಿದಂತೆ ಆಕೆ ಅರಮನೆಗೆ ಪ್ರವೇಶಿಸಲು ನೆರವಾದವರು ಯಾರು ಎಂಬುದನ್ನು ಬೆನ್ನತ್ತಿದ ಅರಣ್ಯ ಇಲಾಖೆ ಅಧಿಕಾರಿಗಳಿಗೆ, ಪತ್ರಕರ್ತನೊಬ್ಬನ ಪ್ರಭಾವದಿಂದಲೇ ಆಕೆ ರಾತ್ರಿ ವೇಳೆ ಅರಮನೆ ಪ್ರವೇಶಿಸಿ ರೀಲ್ಸ್‌ ಮಾಡಿದ್ದು ಎಂಬ ಅಂಶ ತಿಳಿದು ಬಂದಿದೆ ಎನ್ನಲಾಗಿದೆ.

key words: Reels with Dasara Gajapade, Forest Department, imposes “fine”, on culprits

vtu

SUMMARY:

Reels with Dasara Gajapade: Forest Department imposes “fine” on culprits

The Forest Department has cracked down on those who take photos, videos and reels with elephants participating in Dasara. Fines have been imposed on such people.

On September 18, a video of a young woman taking a reel went viral. The news about this was published in the media, and there was widespread criticism of the negligence of the police and the Forest Department.

In this context, the Forest Department officials who took action have taken action against those who took photos and reels with elephants. Prajwal, M.D. Raghavendra have paid a fine of Rs. 500 each and K. Naveen Rs. 2000 and Ku. Kriti Rs. 1000.

The post ದಸರಾ ಗಜಪಡೆ ಜತೆ ರೀಲ್ಸ್‌ : ತಪ್ಪಿತಸ್ಥರ ವಿರುದ್ಧ “ದಂಡ”  ಪ್ರಯೋಗಿಸಿದ ಅರಣ್ಯ ಇಲಾಖೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

അധികാരത്തില്‍ വന്നാല്‍ നിങ്ങള്‍ എന്ത് കഴിക്കണമെന്ന് ബി.ജെ.പി തീരുമാനിക്കും; വോട്ടര്‍മാര്‍ക്ക് മുന്നറിയിപ്പുമായി മമത

കൊല്‍ക്കത്ത: ബി.ജെ.പി അധികാരത്തില്‍ വന്നാല്‍ ജനങ്ങളുടെ ഭക്ഷണ സ്വാതന്ത്ര്യം ഇല്ലാതാക്കുമെന്ന് പഞ്ചിമ...

"திமுக ஆட்சியில் தரமற்ற லேப்டாப் வழங்கப்பட்டது பற்றி விசாரணை கமிஷன் அமைப்போம்" – இபிஎஸ்

கன்னியாகுமரி சட்டமன்றத் தொகுதி வேட்பாளர் தளவாய் சுந்தரம், கிள்ளியூர் த.மா.க வேட்பாளர்...

Jewellery Missing: ఛీ.. ఛీ.. మృతదేహాల నుంచి ఆభరణాలు కొట్టేయడం ఏంటయ్యా..?

Jewellery Missing: ఉత్తరప్రదేశ్‌ లోని బరాబంకి జిల్లాలో జరిగిన ఓ రోడ్డు...

ഓശാന ദിനത്തിൽ പള്ളിയിൽ പ്രവേശനം നിഷേധിച്ച ഇസ്രഈൽ പൊലീസ് നടപടി; അപലപിച്ച് വത്തിക്കാൻ

ജെറുസലേം: ഓശാന ദിനത്തിൽ ജറുസലേമിലെ ‘ചർച്ച് ഓഫ് ദി ഹോളി സ്‌പൽച്ചർ’...