30
March, 2026

A News 365Times Venture

30
Monday
March, 2026

A News 365Times Venture

415ನೇ ಶ್ರೀರಂಗಪಟ್ಟಣ ದಸರಾ ಅದ್ಧೂರಿ ಚಾಲನೆ ನೀಡಿದ ಟಿ.ಎಸ್ ನಾಗಾಭರಣ

Date:

ಶ್ರೀರಂಗಪಟ್ಟಣ,ಸೆಪ್ಟಂಬರ್,25,2025 (www.justkannada.in): 415 ನೇ ಶ್ರೀರಂಗಪಟ್ಟಣ ದಸರಾ ಉದ್ಘಾಟನೆಯನ್ನು ಖ್ಯಾತ ಚಲನಚಿತ್ರ ನಟ,ನಿರ್ದೇಶಕ, ನಿರ್ಮಾಪಕ ಟಿ.ಎಸ್  ನಾಗಾಭರಣ ಅವರಿಂದ  ಅದ್ಧೂರಿಯಾಗಿ ಚಾಲನೆ ನೀಡಲಾಯಿತು.

ಇಂದು ( ಸೆ.25) ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಲಾಗಿದ್ದ 415 ನೇ ಶ್ರೀರಂಗಪಟ್ಟಣದಲ್ಲಿ ದಸಾರ ಕಾರ್ಯಕ್ರಮ ಅಧಿಕೃತ ಚಾಲನೆಯನ್ನು ನೀಡಲಾಯಿತು.

ಕಣ್ಮನ ಸೆಳೆದ ಮೆರವಣಿಗೆ

415 ನೇ ಶ್ರೀರಂಗಪಟ್ಟಣ ದಸರಾ ಅಂಗವಾಗಿ ಆಯೋಜಿಸಲಾಗಿದ್ದ  ಪೂಜಾಕುಣಿತ, ತಮಟೆ, ನಗಾರಿ, ಪಟ್ಟಕುಣಿತ, ಹುಲಿವೇಷ,ವೀರಗಾಸೆ, ವೀರ ಭದ್ರಕುಣಿತ, ಕಾಳಿ ಕುಣಿತ, ಕಂಸಾಳೆ,ವೀರ ಮಕ್ಕಳ ಕುಣಿತ, ಓನಕೆ ಕುಣಿತ, ಕೋಲಾಟ, ಕರಗಿದ ಕೋಲಾಟ, ಗೊಂಬೆ ಕುಣಿತ, ಡೊಳ್ಳು ಕುಣಿತ, ಬೆಂಕಿ ಭರಾಟೆ, ದೊಣ್ಣೆ ವರಸೆ, ಸೋಮನ ಕುಣಿತ, ಬೇಡರ ವೇಷ, ಹಾಲಕ್ಕಿ ಸುಗ್ಗಿ ಕುಣಿತ, ಗಾರುಡಿಗೊಂಬೆ, ಚಿಲಿಪಿಲಿಗೋಬೆ, ನಾಸಿಕ್ ಡೊಲಾಟಗಳು ನೋಡುಗರ ಗಮನ ಸೆಳೆದವು.

ಸ್ತಬ್ಧ ಚಿತ್ರಗಳು

ತೋಟಗಾರಿಕೆ ಇಲಾಖೆಯ ಸ್ತಬ್ಧ ಚಿತ್ರಗಳು, ಕೃಷಿ ಇಲಾಖೆಯ ಸ್ತಬ್ಧಚಿತ್ರ, ಭಾರತೀಯ ಬೌದ್ಧ ಮಹಾಸಭಾ, ಕೃಷಿ ಇಲಾಖೆಯ ಸ್ತಬ್ಧಚಿತ್ರ, ಶಿಕ್ಷಣ ಇಲಾಖೆಯ ಸ್ತಬ್ಧ ಚಿತ್ರ, ರೇಷ್ಮೆ ಇಲಾಖೆಯ ಸ್ತಬ್ಧ ಚಿತ್ರ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಂಚ ಗ್ಯಾರಂಟಿ ಯೋಜನೆಗಳ ಸ್ತಬ್ಧ ಚಿತ್ರ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಕ್ಕಳ ಮಾರಾಟ ನಿಷೇಧ ಮತ್ತು ಅಪರಾಧ, ಅರಣ್ಯ ಇಲಾಖೆಯ ಸ್ತಬ್ಧ ಚಿತ್ರಗಳು ನೆರೆದಿದ್ದ ಸಾರ್ವಜನಿಕರ ಚಿತ್ತವನ್ನು ತನ್ನತ್ತ ಸೆಳೆದವು.

ನಾಡದೇವತೆ ಚಾಮುಂಡೇಶ್ವರಿ ಹೊತ್ತ ಅಂಬಾರಿಗೆ ಪೊಲೀಸ್ ಬ್ಯಾಂಡ್ ವತಿಯಿಂದ ವಿಶೇಷ ಗೌರವ ಸಲ್ಲಿಸಲಾಯಿತು.

ಶ್ರೀರಂಗಪಟ್ಟಣ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್, ಚೆಲುವರಾಯಸ್ವಾಮಿ, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿ ಕುಮಾರ್, ಮಾಜಿ ಶಾಸಕಿ ವಿಜಯಲಕ್ಷ್ಮಿ ಬಂಡಿ ಸಿದ್ದೇಗೌಡ, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ, ಆರ್ ನಂದಿನಿ, ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದ ಮೂರ್ತಿ, ಉಪವಿಭಾಗಾಧಿಕಾರಿಗಳಾದ ಶಿವಮೂರ್ತಿ, ಶ್ರೀನಿವಾಸ್, ಶ್ರೀರಂಗಪಟ್ಟಣ ತಹಶೀಲ್ದಾರ್ ಚೇತನ ಯಾದವ್ ಉಪಸ್ಥಿತರಿದ್ದರು.

Key words: 415th, Srirangapatna Dasara, Drive,  TS Nagabarana

The post 415ನೇ ಶ್ರೀರಂಗಪಟ್ಟಣ ದಸರಾ ಅದ್ಧೂರಿ ಚಾಲನೆ ನೀಡಿದ ಟಿ.ಎಸ್ ನಾಗಾಭರಣ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

KSRTC  ಬಸ್ ಗಳಿಗೆ  ತಕ್ಷಣಕ್ಕೆ ಡೀಸೆಲ್ ಸಮಸ್ಯೆ ಇಲ್ಲ- ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಮಾರ್ಚ್,30,2026 (www.justkannada.in):  ಮಧ್ಯಪ್ರಾಚ್ಯದಲ್ಲಿ ಯುದ್ದದಿಂದಾಗಿ ಈಗಾಗಲೇ ದೇಶಾದ್ಯಂತ ಎಲ್ ಪಿಜಿ...

மனோ தங்கராஜ்: `அமைச்சருக்கே சீட் இல்லியா?' – இரவு வரை போராட்டம் – நிர்வாகிகள் சொல்வது என்ன?

கன்னியாகுமரி மாவட்டம் பத்மநாபபுரம் சட்டமன்ற தொகுதியில் சிட்டிங் அமைச்சர் மனோ தங்கராஜிக்கு...

Bihar: ఎమ్మెల్సీకి నితీష్ కుమార్, ఎమ్మెల్యే పదవికి నితిన్ నవీన్ రాజీనామా

బీహార్ రాజకీయాల్లో కీలక పరిణామం చోటుచేసుకుంది. ఎమ్మెల్సీ పదవికి ముఖ్యమంత్రి నితీష్...