31
March, 2026

A News 365Times Venture

31
Tuesday
March, 2026

A News 365Times Venture

ಮೈಸೂರು ಜಿಲ್ಲಾ ಪ್ರವಾಸ: ದಸರಾ ಉದ್ಘಾಟನೆ ಸೇರಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಸಿಎಂ

Date:

ಮೈಸೂರು,ಸೆಪ್ಟಂಬರ್,20,2025 (www.justkannada.in): ನಾಳೆಯಿಂದ ಸಿಎಂ ಸಿದ್ದರಾಮಯ್ಯ ಎರಡು ದಿನಗಳ ಕಾಲ ಮೈಸೂರು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು ಸೆಪ್ಟಂಬರ್ 22 ರಂದು ನಡೆಯಲಿರುವ ಮೈಸೂರು ದಸರಾ ಉದ್ಘಾಟನೆ ಸೇರಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ನಾಳೆ ಸಂಜೆ 4.25ಕ್ಕೆ ಬೆಂಗಳೂರಿನಿಂದ ಮೈಸೂರಿಗೆ ವಿಶೇಷ ವಿಮಾನದ ಮೂಲಕ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ ರಾತ್ರಿ ಮೈಸೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಬಳಿಕ ಸೆಪ್ಟಂಬರ್ 22ರ ಸೋಮವಾರ ಬೆಳಿಗ್ಗೆ 10.10 ರಿಂದ 10.40ರವರೆಗೆ ಚಾಮುಂಡಿ ಬೆಟ್ಟದಲ್ಲಿ ನಡೆಯಲಿರುವ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಅಗ್ರಪೂಜೆ 2025ರ ದಸರಾ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ನಂತರ ಮಧ್ಯಾಹ್ನ 12.30ಕ್ಕೆ ಕುಪ್ಪಣ್ಣ ಪಾರ್ಕ್ ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನವನ್ನ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಸಂಜೆ 4 ಗಂಟೆಗೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನಡೆಯಲಿರುವ ದಸರಾ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆ.

ಸಂಜೆ 5 ಗಂಟೆಗೆ ಅರಮನೆ ಆವರಣದಲ್ಲಿ ಜರುಗಲಿರುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ  ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಸಂಜೆ 5.30ಕ್ಕೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ.

ರಾತ್ರಿ 7.30ಕ್ಕೆ ಕರ್ನಾಟಕ ವಸ್ತು ಪ್ರದರ್ಶನ ಆವರಣದಲ್ಲಿ ಆಯೋಜಿಸಿರುವ ವಸ್ತುಪ್ರದರ್ಶನವನ್ನ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.

Key words: Mysore tour, CM, Siddaramaiah, dasara, programs

The post ಮೈಸೂರು ಜಿಲ್ಲಾ ಪ್ರವಾಸ: ದಸರಾ ಉದ್ಘಾಟನೆ ಸೇರಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಸಿಎಂ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಬಿಜೆಪಿಯವರು ಕಳ್ಳೆತ್ತು: ಅವರಿಗೆ ವೋಟ್‍ ಹಾಕಬಾರದು- ಸಿಎಂ ಸಿದ್ಧರಾಮಯ್ಯ,

ಬಾಗಲಕೋಟೆ,ಮಾರ್ಚ್,30,2026 (www.justkannada.in):  ಬಿಜೆಪಿಯವರು ಕಳ್ಳೆತ್ತುಗಳು ಅವರಿಗೆ ಮತ ಹಾಕಬಾರದು ಎಂದು...

തമിഴ്‌നാട് ബി.ജെ.പിക്ക് മുമ്പില്‍ കീഴടങ്ങില്ല എന്ന് തെളിയിക്കാനുള്ള തെരഞ്ഞെടുപ്പ്; പോരാട്ടത്തിന് തുടക്കമിട്ട് ഉദയനിധി

കാഞ്ചീപുരം: ബി.ജെ.പിക്ക് മുമ്പില്‍ കീഴടങ്ങില്ല എന്ന് തെളിയിക്കാനും എ.ഐ.എ.ഡി.എം.കെ ജനറല്‍ സെക്രട്ടറി...

"எனக்கு கோவை வேறு கரூர் வேறு அல்ல; எனக்கு கோவையில் வாய்ப்பு தர காரணம்..!" – செந்தில் பாலாஜி

கோவை தெற்கு தொகுதியில் திமுக சார்பில் வேட்பாளராக அறிவிக்கப்பட்டுள்ளார் செந்தில் பாலாஜி....

RR vs CSK : రాజస్థాన్ రాయల్స్ ఘనవిజయం.. వైభవ్ సూర్యవంశీ ‘సిక్సర్ల’ సునామీ.!

రాజస్థాన్ రాయల్స్ తన ఐపీఎల్ 2026 ప్రయాణాన్ని ఘనంగా ప్రారంభించింది. చెన్నై...