31
March, 2026

A News 365Times Venture

31
Tuesday
March, 2026

A News 365Times Venture

ಪತ್ರಕರ್ತರ ಸಹಕಾರ ಸಂಘದ ಆರ್ಥಿಕ ಬಲವರ್ಧನೆಗೆ ಕ್ರಮ: ಅಧ್ಯಕ್ಷ ಕೆ.ದೀಪಕ್ ಭರವಸೆ

Date:

ಮೈಸೂರು, ಸೆಪ್ಟಂಬರ್, 20,2025 (www.justkannada.in):  ಮೈಸೂರು ಜಿಲ್ಲಾ ಪತ್ರಕರ್ತರ ಅಭ್ಯುದಯ ಸಹಕಾರ ಸಂಘಕ್ಕೆ ಆರ್ಥಿಕ ಚೈತನ್ಯ ತುಂಬಲು ಪಿಗ್ಮಿ ಸಂಗ್ರಹ, ಈ – ಸ್ಟಾಂಪಿಂಗ್ ಸೌಲಭ್ಯ ಮತ್ತು ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಆರಂಭಿಸಲು ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನಿಸಲಾಯಿತು.

ನಗರದ ಪತ್ರಕರ್ತರ ಭವನದಲ್ಲಿ ಇಂದು ನಡೆದ 9ನೇ ಸರ್ವ ಸದಸ್ಯರ ಸಭೆಯಲ್ಲಿ ಸದಸ್ಯರ ಅಭಿಪ್ರಾಯ ಸಂಗ್ರಹಿಸಿದ ಮಾತನಾಡಿದ ಅಧ್ಯಕ್ಷ ಕೆ.ದೀಪಕ್ ಈ ನಿರ್ಣಯ ಪ್ರಕಟಿಸಿದರು.

ಕಳೆದ 8 ವರ್ಷದ ಹಿಂದೆ ಆರಂಭಗೊಂಡ ಸಹಕಾರ ಸಂಘವು ಅನೇಕ ಸವಾಲುಗಳನ್ನು ದಾಟಿ ಸುಮಾರು 150ಕ್ಕೂ ಹೆಚ್ಚು ಪತ್ರಕರ್ತರಿಗೆ ಸುಮಾರು 50 ಲಕ್ಷ ರೂ.ಗಳ ವರೆಗೆ ಸಾಲಸೌಲಭ್ಯ ನೀಡಿಲಾಗಿದೆ‌. 60ಕ್ಕೂ ಹೆಚ್ಚು ಪತ್ರಕರ್ತರನ್ನು ಯಶಸ್ವಿನಿ ಆರೋಗ್ಯ ವಿಮಾ ಯೋಜನೆಗೆ ಒಳಪಡಿಸಲಾಗಿದೆ. ಆರ್.ಡಿ ಸಂಗ್ರಹದಲ್ಲಿ ನೂರಕ್ಕೆ ನೂರರಷ್ಟು ಆರ್ಥಿಕ ಶಿಸ್ತು ಪಾಲನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಪಿಗ್ಮಿ ಸಂಗ್ರಹ ಜಾರಿ ಸಂಬಂಧ ಸಾಧಕ ಬಾಧಕ ಪರಿಶೀಲಿಸಲು ಸಮಿತಿ ರಚನೆ ಮಾಡಲಾಗುವುದು. ಹಾಗೂ ಸಾಲ ವಸೂಲಾತಿಗೆ ಕಾನೂನಾತ್ಮಕ ಕ್ರಮಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಉಪಾಧ್ಯಕ್ಷ ಹನಗೋಡು ನಟರಾಜ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ಸಹಕಾರ ಸಂಘದ ನಿರ್ದೇಶಕರಾದ ಪ್ರಗತಿ ಗೋಪಾಲಕೃಷ್ಣ, ಹೆಚ್.ಎಸ್. ದಿನೇಶ್ ಕುಮಾರ್, ಜಯಶಂಕರ್ ಮೂರ್ತಿ, ಹುಲ್ಲಹಳ್ಳಿ ಮೋಹನ್, ಸಾಲಿಗ್ರಾಮ ಯಶವಂತ್ , ಮುಕುಂದ, ಎನ್. ಸುರೇಶ್, ಮಹೇಶ್ .ಎಂ. ದಾಸೇಗೌಡ, ನಾಗೇಂದ್ರಕುಮಾರ್,  ಬೀಚನಹಳ್ಳಿ ಮಂಜುನಾಥ್,  ಬಿ.ರಾಘವೇಂದ್ರ ಹಾಜರಿದ್ದರು.

Key words: Economic, Cooperative Society, Mysore, Journalists, Deepak

The post ಪತ್ರಕರ್ತರ ಸಹಕಾರ ಸಂಘದ ಆರ್ಥಿಕ ಬಲವರ್ಧನೆಗೆ ಕ್ರಮ: ಅಧ್ಯಕ್ಷ ಕೆ.ದೀಪಕ್ ಭರವಸೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಬಿಜೆಪಿಯವರು ಕಳ್ಳೆತ್ತು: ಅವರಿಗೆ ವೋಟ್‍ ಹಾಕಬಾರದು- ಸಿಎಂ ಸಿದ್ಧರಾಮಯ್ಯ,

ಬಾಗಲಕೋಟೆ,ಮಾರ್ಚ್,30,2026 (www.justkannada.in):  ಬಿಜೆಪಿಯವರು ಕಳ್ಳೆತ್ತುಗಳು ಅವರಿಗೆ ಮತ ಹಾಕಬಾರದು ಎಂದು...

തമിഴ്‌നാട് ബി.ജെ.പിക്ക് മുമ്പില്‍ കീഴടങ്ങില്ല എന്ന് തെളിയിക്കാനുള്ള തെരഞ്ഞെടുപ്പ്; പോരാട്ടത്തിന് തുടക്കമിട്ട് ഉദയനിധി

കാഞ്ചീപുരം: ബി.ജെ.പിക്ക് മുമ്പില്‍ കീഴടങ്ങില്ല എന്ന് തെളിയിക്കാനും എ.ഐ.എ.ഡി.എം.കെ ജനറല്‍ സെക്രട്ടറി...

"எனக்கு கோவை வேறு கரூர் வேறு அல்ல; எனக்கு கோவையில் வாய்ப்பு தர காரணம்..!" – செந்தில் பாலாஜி

கோவை தெற்கு தொகுதியில் திமுக சார்பில் வேட்பாளராக அறிவிக்கப்பட்டுள்ளார் செந்தில் பாலாஜி....

RR vs CSK : రాజస్థాన్ రాయల్స్ ఘనవిజయం.. వైభవ్ సూర్యవంశీ ‘సిక్సర్ల’ సునామీ.!

రాజస్థాన్ రాయల్స్ తన ఐపీఎల్ 2026 ప్రయాణాన్ని ఘనంగా ప్రారంభించింది. చెన్నై...