12
March, 2026

A News 365Times Venture

12
Thursday
March, 2026

A News 365Times Venture

ಭೋವಿ ನಿಗಮದಲ್ಲಿ ಅಕ್ರಮ: ಕೈ ಸರ್ಕಾರದ ಕಮಿಷನ್ ದಂಧೆಗೆ ಸಾಕ್ಷಿ- ಹರಿಹಾಯ್ದ ಜೆಡಿಎಸ್

Date:

ಬೆಂಗಳೂರು,ಸೆಪ್ಟಂಬರ್,2,2025 (www.justkannada.in):  ಭೋವಿ ನಿಗಮದಲ್ಲಿ ನಡೆದಿರುವ  ಅಕ್ರಮ ಕಾಂಗ್ರೆಸ್ ಸರ್ಕಾರದ 60% ಕಮಿಷನ್ ದಂಧೆಗೆ ಸಾಕ್ಷಿಯಾಗಿದೆ ಎಂದು ಜೆಡಿಎಸ್ ಘಟಕ ವಾಗ್ದಾಳಿ ನಡೆಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್,  ಭೋವಿ ನಿಗಮದಲ್ಲಿ ಭೂ ಒಡೆತನ ಯೋಜನೆಯಡಿ ಭೂಮಿ ಮಂಜೂರಾದವರಿಗೆ 25 ಲಕ್ಷ ರೂ ಸಹಾಯಧನ ಬಿಡುಗಡೆ ಮಾಡಲು ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್ 5 ಲಕ್ಷ ರೂ ಕಮಿಷನ್ ಪಡೆಯುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಭ್ರಷ್ಟ ಅಧ್ಯಕ್ಷನನ್ನು ವಜಾ ಮಾಡಿ ಆತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆಗೆ ಆದೇಶಿಸಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.

ಭೋವಿ ನಿಗಮದ ಅಧ್ಯಕ್ಷರ ವಿರುದ್ಧ ಸರ್ಕಾರ ತನಿಖೆ ನಡೆಸಬೇಕು.  ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ರೂಪಾಯಿ ಹಗರಣ ನಡೆಸಿದ್ದ ಭ್ರಷ್ಟ ಸರ್ಕಾರ ಬಳಿಕ ಎಸ್ ಸಿ/ಎಸ್ ಪಿ/ಟಿಎಸ್ ಪಿ ನಿಧಿಯಲ್ಲಿನ ಕೋಟ್ಯಂತರ ಹಣವನ್ನು ದುರ್ಬಳಕೆ ಮಾಡಿಕೊಂಡು ಪರಿಶಿಷ್ಟರಿಗೆ ದ್ರೋಹ ಬಗೆದಿದ್ದ ಕಾಂಗ್ರೆಸ್ ಮತ್ತೊಮ್ಮೆ ದಲಿತರಿಗೆ ಅನ್ಯಾಯ ಮಾಡಿದೆ ಎಂದು ಜೆಡಿಎಸ್ ಹರಿಹಾಯ್ದಿದೆ.

Key words: illegal, commission, Bhovi corporation, JDS

The post ಭೋವಿ ನಿಗಮದಲ್ಲಿ ಅಕ್ರಮ: ಕೈ ಸರ್ಕಾರದ ಕಮಿಷನ್ ದಂಧೆಗೆ ಸಾಕ್ಷಿ- ಹರಿಹಾಯ್ದ ಜೆಡಿಎಸ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಹಿರಿಯ ಪತ್ರಕರ್ತ ಕೆ ಜೆ. ಕುಮಾರ್ ನಿಧನ: ಇಂದು ಅಂತ್ಯಕ್ರಿಯೆ

ಮೈಸೂರು,ಮಾರ್ಚ್,12,2026 (www.justkannada.in):  ನಿನ್ನೆ ಹೃದಯಾಘಾತದಿಂದ ನಿಧನರಾದ ಹಿರಿಯ ಪತ್ರಕರ್ತ ಕೆ...

മലയാളം എവിടെ? ചങ്ങനാശ്ശേരി റെയില്‍വേ സ്‌റ്റേഷനിലെ ഹിന്ദി ബോര്‍ഡിനെതിരെ സോഷ്യല്‍ മീഡിയ

കോട്ടയം: ചങ്ങനാശ്ശേരി റെയില്‍വേസ്റ്റ്ഷനിലെ പുതുക്കിയ പ്രവേശന കവാടത്തിലും കെട്ടിടത്തിലും ഹിന്ദിയില്‍ ബോര്‍ഡ്...

Suryakumar Yadav: డ్రెస్సింగ్ రూమ్ సీక్రెట్స్ బయటపెట్టిన సూర్య.. గంభీర్ స్పీచ్‌తో ప్లేయర్లలో పూనకాలు!

Suryakumar Yadav: భారత్ ప్రపంచ క్రికెట్‌లో ఆధిపత్యం చెలాయిస్తోంది. మూడు సార్లు...