8
March, 2026

A News 365Times Venture

8
Sunday
March, 2026

A News 365Times Venture

ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪರಿಷ್ಕರಣೆ: ನಾಳೆಯಿಂದ ಜಾರಿ

Date:

ಬೆಂಗಳೂರು,ಆಗಸ್ಟ್,30,2025 (www.justkannada.in): ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪರಿಷ್ಕರಣೆ ಮಾಡಲಾಗಿದ್ದು ನಾಳೆಯಿಂದ ಜಾರಿ ಸ್ಥಿರಾಸ್ತಿ ಮೇಲಿನ ವ್ಯವಹಾರ ದಸ್ತಾವೇಜುಗಳಿಗೆ ವಿಧಿಸುತ್ತಿರುವ ನೋಂದಣಿ ಮತ್ತು ಮುದ್ರಾಂಕ ಶುಲ್ಕ ನಾಳೆಯಿಂದ ಹೆಚ್ಚಳವಾಗಲಿದೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ನೋಂದಣಿ ಮತ್ತು ಮುದ್ರಾಂಕ  ಇಲಾಖೆ ಆಯುಕ್ತ ಮುಲೈ ಮುಗಿಲನ್, ಕರ್ನಾಟಕ ರಾಜ್ಯ ಸರ್ಕಾರವು ಆಗಸ್ಟ್ ,31 ರಿಂದ ಜಾರಿಗೊಳಿಸುತ್ತಿರುವ ಸ್ಥಿರಾಸ್ತಿ ಮೇಲಿನ ವ್ಯವಹಾರಗಳ ದಸ್ತಾವೇಜುಗಳಿಗೆ ವಿಧಿಸುತ್ತಿರುವ ನೋಂದಣಿ ಮತ್ತು ಮುದ್ರಾಂಕ ಶುಲ್ಕವು ನೆರೆಹೊರೆಯ ರಾಜ್ಯಗಳಲ್ಲಿರುವ ದರಗಳಿಗಿಂತ ಪ್ರಸ್ತುತ ಕಡಿಮೆ ಶುಲ್ಕ ಇದ್ದು, ಅದನ್ನು ಇತರೆ ರಾಜ್ಯಗಳ ಶುಲ್ಕಗಳೊಂದಿಗೆ ಸಮೀಕರಣ ಮಾಡಿ ಪರಿಷ್ಕರಿಸಲಾಗುತ್ತಿದೆ  ಎಂದು ತಿಳಿಸಿದ್ದಾರೆ.

ಮುದ್ರಾಂಕ ,ನೋಂದಣಿ ಹಾಗೂ ಇತರೆ ಸೆಸ್ ಸೇರಿ ಕರ್ನಾಟಕ ರಾಜ್ಯವು ಶೇ.6.6 ರಷ್ಟು ವಿಧಿಸುತ್ತಿತ್ತು. ಇದೇ ಅವಧಿಯಲ್ಲಿ ಈ ಶುಲ್ಕವು ತಮಿಳುನಾಡು ರಾಜ್ಯದಲ್ಲಿ ಶೇ.9, ಕೇರಳ ಶೇ.10, ಆಂಧ್ರಪ್ರದೇಶ ಶೇ. 7.5,ತೆಲಂಗಾಣ ರಾಜ್ಯಗಳು ಶೇ.7.5 ರಷ್ಟು ಶುಲ್ಕ ಆಕರಿಸುತ್ತಿವೆ.

ದಸ್ತಾವೇಜುಗಳ ಮೇಲಿನ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕಗಳನ್ನು ಇತರೆ ರಾಜ್ಯಗಳೊಂದಿಗೆ ಸಮೀಕರಿಸಿಗೊಳ್ಳಲು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಬಲಪಡಿಸಲು ಮತ್ತು ನಾಗರಿಕರಿಗೆ ಉತ್ತಮ ಹಾಗೂ ಪರಿಣಾಮಕಾರಿ ಸೇವೆಯನ್ನು ನೀಡಲು. ರಾಜ್ಯ ಸರ್ಕಾರವು ದಿನಾಂಕ: 31-08-2025 ರಿಂದ ಜಾರಿಗೆ ಬರುವಂತೆ ನೋಂದಣಿ ಶುಲ್ಕವನ್ನು ಶೇಕಡ 1 ರಿಂದ ಶೇ.2 ರಷ್ಟು ಪರಿಷ್ಕರಿಸಿದೆ ಎಂದು ತಿಳಿಸಿದ್ದಾರೆ.

Key words: Registration and Stamp, Fee, Revision, tomorrow

 

The post ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪರಿಷ್ಕರಣೆ: ನಾಳೆಯಿಂದ ಜಾರಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ನಾಳೆ ದೆಹಲಿಗೆ ಡಿಸಿಎಂ ಡಿಕೆ ಶಿವಕುಮಾರ್..!

ಬೆಂಗಳೂರು,ಮಾರ್ಚ್,7,2026 (www.justkannada.in):  ಸಿಎಂ ಸಿದ್ದರಾಮಯ್ಯ ನಿನ್ನೆ 2026-27ನೇ ಸಾಲಿನ ರಾಜ್ಯ...

ഞാനും ബംഗാളിന്റെ മകളാണ്; സ്വീകരിക്കാനെത്താതെ പ്രോട്ടോക്കോള്‍ ലംഘിച്ച മമതയ്‌ക്കെതിരെ രാഷ്ട്രപതി

കൊല്‍ക്കത്ത: രണ്ട് ദിവസത്തെ സന്ദര്‍ശനത്തിനായി പശ്ചിമ ബംഗാളിലെത്തിയിട്ടും സ്വീകരിക്കാനെത്താതെ പ്രോട്ടോക്കോള്‍ ലംഘിച്ച...

TVK: '6 சிலிண்டர்கள் இலவசம், அண்ணன் சீர்; பெண்களுக்கு மாதம் ரூ.2500' – விஜய்யின் தேர்தல் அறிக்கை!

தவெக சார்பில் அக்கட்சியின் தலைவர் விஜய் தலைமையில் மாமல்லபுரத்தில் மகளிர் தின...

T Congress : తెలంగాణ మహిళా కాంగ్రెస్ లో కొత్త చీఫ్ నియామకం చిచ్చు పెట్టిందా?

తెలంగాణ కాంగ్రెస్ పార్టీలో పదవుల భర్తీ ప్రక్రియ ఇప్పుడు మహిళా...