7
March, 2026

A News 365Times Venture

7
Saturday
March, 2026

A News 365Times Venture

‘ನಾನು ಕನ್ನಡಿಗ ಆದರೆ…’: ಸಾಂಸ್ಕೃತಿಕ ಬದಲಾವಣೆಯಿಂದ ನಮ್ಮೂರಲ್ಲೇ ‘ಅಪರಿಚಿತ’..!

Date:

ಬೆಂಗಳೂರು, ಆ.೩೦,೨೦೨೫:  ರಾಜಧಾನಿ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಕನ್ನಡಿಗನೊಬ್ಬ, ಹೊರ ರಾಜ್ಯಗಳ ಜನರು ಹೆಚ್ಚಾಗುತ್ತಿರುವುದರಿಂದ  ತನ್ನ ಸ್ವಂತ ನಗರದಲ್ಲಿ ಅಪರಿಚಿತನಂತೆ ಭಾಸವಾಗುತ್ತಿದೆ ಎಂದು ವಿಷಾಧಿಸಿದ್ದಾರೆ.

“ನಾನು ಬೆಂಗಳೂರಿನವನು, ಆದರೆ ನನ್ನ ಸ್ವಂತ ನಗರದಲ್ಲಿ… ವಿಶೇಷವಾಗಿ ಕೆಲಸದಲ್ಲಿ ಅಪರಿಚಿತನಂತೆ ಭಾಸವಾಗುತ್ತಿದೆ” ಎಂಬ ಶೀರ್ಷಿಕೆಯ ರೆಡ್ಡಿಟ್ ಪೋಸ್ಟ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಜನಿಸಿದರೂ, ನಾನು ಬೆಳೆದು ಬಂದ ಸಂಸ್ಕೃತಿ , ನೆರೆಹೊರೆ ಸಮೂಹ ಮಸುಕಾಗಲು ಪ್ರಾರಂಭಿಸಿದ್ದಾರೆ.  “ನಾನು ಬೆಂಗಳೂರಿನವನು, ಕನ್ನಡಿಗ, ಇಲ್ಲಿ ಹುಟ್ಟಿ ಬೆಳೆದಿದ್ದೇನೆ, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ, ಆದರೆ ನನ್ನ ಸ್ವಂತ ನಗರದಲ್ಲಿ ನಾನು ಹೊರಗಿನವನಂತೆ ಭಾಸವಾಗುತ್ತಿದ್ದೇನೆ” ಎಂದು ವಿಷಾಧದ ನುಡಿಗಳನ್ನಾಡಿದ್ದಾರೆ.

ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುತ್ತಾ, ಬೆಂಗಳೂರು ನಗರ ನನ್ನ ಸ್ವಂತ ಮನೆಯಂತೆ ಭಾಸವಾಗುವುದನ್ನು ನಿಲ್ಲಿಸಿದೆ. ಪರ ರಾಜ್ಯದವರು ಬೆಂಗಳೂರಿಗೆ ಬಂದು ತಮ್ಮದೇ ಆದ ಸ್ವಂತ ಸಮುದಾಯಗಳನ್ನು ರಚಿಸಿಕೊಂಡಿದ್ದಾರೆ.  “ಪರ ರಾಜ್ಯಗಳ ಜನರ ಈ ನಡೆ ಯಾವುದೇ ಅಪರಾಧವಲ್ಲ. ನೀವು ಬೆಂಗಳೂರನ್ನು ನಿಮ್ಮ ಮನೆಯನ್ನಾಗಿ ಮಾಡಿಕೊಂಡಿರುವುದು ಸಂತೋಷವಾಗಿದೆ. ಆದರೆ ದಾರಿಯುದ್ದಕ್ಕೂ ಎಲ್ಲೋ, ಬೆಂಗಳೂರು ನನಗೆ ನನ್ನ ಮನೆಯಂತೆ ಭಾಸವಾಗುತ್ತಿಲ್ಲ ” ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ತಾನು ಕೆಲಸ ಮಾಡುವ ಕಚೇರಿಯ ಉದಾಹರಣೆ ಉಲ್ಲೇಖಿಸಿ, “ನನ್ನ ತಂಡದಲ್ಲಿರುವ ಏಕೈಕ ದಕ್ಷಿಣ ಭಾರತೀಯ ನಾನೇ, ಮತ್ತು ನನ್ನ ಮಹಡಿಯಲ್ಲಿರುವ 400 ಜನರಲ್ಲಿ, ನನಗೆ ಇನ್ನೊಬ್ಬ ಬೆಂಗಳೂರಿಗ ಸಿಗುತ್ತಿಲ್ಲ. ನನ್ನ ಸುತ್ತಲಿನ ಸಂಭಾಷಣೆಗಳು ಹಿಂದಿಯಲ್ಲಿ ಮಾತ್ರ.. ನಾನು ಬೆಳೆದ ಸಂಸ್ಕೃತಿ ಮರೆಯಾಗುತ್ತಿರುವಂತೆ ಭಾಸವಾಗುತ್ತಿದೆ. ಇದು ನನಗೆ ವಿಚಿತ್ರವಾದ ಶೂನ್ಯತೆ ಉಂಟುಮಾಡುತ್ತದೆ” ಎಂದು ಬರೆದುಕೊಂಡಿದ್ದಾರೆ.

ಪೋಸ್ಟ್ ವೈರಲ್ ಆಗುತ್ತಿದ್ದಂತೆ, ರೆಡ್ಡಿಟ್‌ನಲ್ಲಿರುವ ಹೆಚ್ಚಿನ ಬಳಕೆದಾರರು, ಈ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿ ತಾವು ಸಹ ಅದೇ ರೀತಿ ಭಾವಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

key words:  Kannadiga, Unfamiliar, cultural change, Bangalore,

vtu

SUMMARY: 

‘I am Kannadigas but…’: ‘Unfamiliar’ in our own village due to cultural change..!

A Kannadiga, born and raised in the capital city of Bengaluru, laments that he feels like a stranger in his own city due to the increasing influx of people from other states. “I’m from Bengaluru, but I feel like a stranger in my own city… especially at work,” he wrote in a Reddit post.

 

The post ‘ನಾನು ಕನ್ನಡಿಗ ಆದರೆ…’: ಸಾಂಸ್ಕೃತಿಕ ಬದಲಾವಣೆಯಿಂದ ನಮ್ಮೂರಲ್ಲೇ ‘ಅಪರಿಚಿತ’..! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಅದು ಬಜೆಟ್ ನಲ್ಲಿ ಘೋಷಿಸುವ ಹಣವಲ್ಲ: ಗುತ್ತಿಗೆದಾರರು ಕಾಯಬೇಕಷ್ಟೆ- ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು,ಮಾರ್ಚ್,7,2026 (www.justkannada.in): ಬಾಕಿ ಬಿಲ್ ಪಾವತಿ ಮಾಡುವಂತೆ ಆಗ್ರಹಿಸಿ ಗುತ್ತಿಗೆದಾರರು...

ഇറാന്‍ വിഷയത്തില്‍ നയതന്ത്ര നിലപാട് കടുപ്പിച്ച് ഇന്തോനേഷ്യ; ബോര്‍ഡ് ഓഫ് പീസില്‍ നിന്ന് പിന്മാറി

ജാക്കാര്‍ത്ത: ഇറാനിലെ വ്യോമാക്രമണത്തിന് പിന്നാലെ യു.എസ് പ്രസിഡന്റ് ആരംഭിച്ച ഗസ ബോര്‍ഡ്...

Christopher Tilak: "உழைக்கும் தொண்டனுக்கும் கிடைத்த வெற்றியாகக் கருதுகிறேன்" – கிறிஸ்டோபர் திலக்

அகில இந்திய காங்கிரஸ் கமிட்டியின் செயலாளரும், திருச்சி மாவட்டத்தைச் சேர்ந்தவருமான கிறிஸ்டோபர்...