15
March, 2026

A News 365Times Venture

15
Sunday
March, 2026

A News 365Times Venture

‘ನೀವು ಕೆಮ್ಮಿದ್ರೆ ಯಾರ್ ಯಾರಿಗೆ ಅಪಾಯ ಕಾದಿದ್ಯೋ ಗೊತ್ತಿಲ್ಲ’:  ಡಿಸಿಎಂ ಡಿಕೆಶಿ ಕಿಚಾಯಿಸಿದ ಬಿಜೆಪಿ

Date:

ಬೆಂಗಳೂರು,ಆಗಸ್ಟ್,12,2025 (www.justkannada.in):  ಇಂದು ವಿಧಾನಸಭೆ ಕಲಾಪದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಉತ್ತರ ಕೊಡಲು ಮುಂದಾದಾಗ ಕೆಮ್ಮಿದ್ದಕ್ಕೆ ಬಿಜೆಪಿ ಸದಸ್ಯರು ಕೆಎನ್ ರಾಜಣ್ಣ ತಲೆದಂಡ ವಿಚಾರವಾಗಿ ಕಿಚಾಯಿಸಿದ ಸ್ವಾರಸ್ಯಕರ ಘಟನೆ ನಡೆಯಿತು.

ಇಂದು ಸದನದಲ್ಲಿ ಉತ್ತರ ನೀಡಲು ಮುಂದಾದಾಗ ಡಿಸಿಎಂ ಡಿಕೆ ಶಿವಕುಮಾರ್ ಕೆಮ್ಮಿದರು.   ಈ ವೇಳೆ ಬಿಜೆಪಿ ಶಾಸಕ ಸುನೀಲ್ ಕುಮಾರ್ ನೀವು ಕೆಮ್ಮಿದರೇ ಯಾರ್ ಯಾರಿಗೆ ಅಪಾಯ ಕಾದಿದೆಯೋ ಗೊತ್ತಿಲ್ಲ ಎಂದು ಕಾಲೆಳೆದರು. ಶಾಸಕ ಸುನೀಲ್ ಕುಮಾರ್ ಮಾತಿಗೆ ಸದನ ನಗೆಗಡಲಲ್ಲಿ ತೇಲಿತು.

ಈ ಮಧ್ಯೆ ಕೆಎನ್ ರಾಜಣ್ಣ ವಜಾ ಕುರಿತು ಸದನದಲ್ಲಿ ಹೆಚ್ .ಕೆ ಪಾಟೀಲ್ ಉತ್ತರ ನೀಡಲು ಮುಂದಾದರು. ಈ ವೇಳೆ ರಾಜೀನಾಮೆ ಬಗ್ಗೆ ಉತ್ತರ ಕೊಡಲು ಬರಲ್ಲ.  ಸಿಎಂ ಅವರೇ ಇದರ ಬಗ್ಗೆ ಉತ್ತರ ಕೊಡಬೇಕು ಎಂದು ಬಿಜೆಪಿ ಪಟ್ಟು ಹಿಡಿಯಿತು. ಇನ್ನು ಇದೇ ಸಂದರ್ಭದಲ್ಲಿ ಉಪರಾಷ್ಟ್ರಪತಿಯಾಗಿದ್ದ ಜಗದೀಪ್ ಧನ್ಕರ್ ರಾಜೀನಾಮೆ ಬಗ್ಗೆ ಹೆಚ್.ಕೆ ಪಾಟೀಲ್ ಪ್ರಸ್ತಾಪಿಸಿದಕ್ಕೆ,  ವಜಾ ಬೇರೆ ರಾಜೀನಾಮೆ ಬೇರೆ ಎಂದು  ಬಿಜೆಪಿ ಸದಸ್ಯರು ಕೌಂಟರ್ ಕೊಟ್ಟರು. ಈ ವಿಚಾರ ಸಿಎಂ ವಿವೇಚನೆಗೆ ಬಿಟ್ಟಿದ್ದು ಎಂದು ಸಚಿವ ಪ್ರಿಯಾಂಕ್  ಖರ್ಗೆ ಹೇಳಿದರು. ಇದಕ್ಕೆ ಟಾಂಗ್ ಕೊಟ್ಟ ಶಾಸಕ ಸುನೀಲ್ ಕುಮಾರ್  ಆದ್ರೆ ಇದು ಹೈಕಮಾಂಡ್ ವಿವೇಚನೆ  ಎಂದರು.

Key words:  Session,  DCM, DK Shivakumar, cough, danger, BJP

The post ‘ನೀವು ಕೆಮ್ಮಿದ್ರೆ ಯಾರ್ ಯಾರಿಗೆ ಅಪಾಯ ಕಾದಿದ್ಯೋ ಗೊತ್ತಿಲ್ಲ’:  ಡಿಸಿಎಂ ಡಿಕೆಶಿ ಕಿಚಾಯಿಸಿದ ಬಿಜೆಪಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഏത് വിധേനെയും ഹോര്‍മുസ് തുറക്കും; ചൈനയും യു.കെയും ഉള്‍പ്പടെയുള്ള രാജ്യങ്ങള്‍ യുദ്ധക്കപ്പലുകള്‍ അയക്കുമെന്ന് ട്രംപ്

വാഷിങ്ടണ്‍: ഇറാന്റെ നിയന്ത്രണത്തിലുള്ള ഹോര്‍മുസ് കടലിടുക്ക് തുറക്കാന്‍ ഏത് മാര്‍ഗവും സ്വീകരിക്കുമെന്ന്...

இறுதியான என்.ஆர் – பாஜக கூட்டணி; தவெக-வுக்கு வலை வீசும் ரங்கசாமி! – புதுவையில் விசிலடிப்பாரா விஜய்?

புதுச்சேரி, தமிழகம் உட்பட ஐந்து மாநில சட்டப்பேரவை தேர்தலுக்கான அறிவிப்பு இன்றே...

Car Sold: ఇదెక్కడి పనికిమాలిన ఐడియా రా.. అద్దెకు తీసుకున్న కారును అమ్మడం ఏంటి రా బాబు..

అద్దె కారు తీసుకున్నారు.. లాంగ్ డ్రైవ్‌కు వెళ్లారు.. మధ్యలో ఓ కన్నింగ్...