7
March, 2026

A News 365Times Venture

7
Saturday
March, 2026

A News 365Times Venture

ಆ.10 ರಂದು ‘ದಿ ಗುಡ್ ಡಾಕ್ಟರ್’ ನಾಟಕ ಪ್ರದರ್ಶನ

Date:

ಮೈಸೂರು,ಆಗಸ್ಟ್,7,2025 (www.justkannada.in): ಇಲ್ಯೂಮಿನೇಟಿಂಗ್ ವಿಂಡೋಸ್ ತಂಡದ ವತಿಯಿಂದ  ಆಗಸ್ಟ್ 10 ಭಾನುವಾರದಂದು ನಟನ ರಂಗಶಾಲೆಯಲ್ಲಿ ಸಂಜೆ, 6.30 ಗಂಟೆಗೆ ‘ದಿ ಗುಡ್ ಡಾಕ್ಟರ್ ‘ ಎಂದು ನಾಟಕ ಪ್ರದರ್ಶನವಾಗಲಿದೆ.

ಅಂದು ಸಂಜೆ 6.30ರಿಂದ 8.30 ರವರಿಗೂ ನಟನ ರಂಗಶಾಲೆಯಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ಈವರೆಗೆ 19 ಯಶಸ್ವಿ ಪ್ರದರ್ಶನಗಳನ್ನು ಬೆಂಗಳೂರು, ಮೈಸೂರು ಹಾಗೂ ಹೆೈದರಾಬಾದ್ ನಗರಗಳಲ್ಲಿ ಕಂಡಿದ್ದು – ಎರಡನೇ ಬಾರಿಗೆ ಮೈಸೂರಿಗೆ ಬರಲಿದೆ. 2 ತಾಸಿನ ಈ ನಗೆ ನಾಟಕವನ್ನು

ಟಿಕೆಟ್ “ಡಿಸ್ಟ್ರಿಕ್ಟ್ ”ಪ್ಲಾಟ್ ಫಾರ್ಮ್ ನಲ್ಲಿ ಹಾಗೂ ನಟನ ರಂಗಶಾಲೆಯಲ್ಲಿ ಕೂಡ ಲಭ್ಯವಿದೆ. ಮೂಲತಃ ರಷ್ಯಾದಲ್ಲಿ 70ರ ದಶಕದ ಕಾಲಮಾನದ ಅಂಟಾನ್ ಚೆಕೊವ್ ಅವರ ಕಥೆಗಳನ್ನು , ಅಮೇರಿಕದ ನಾಟಕಕಾರ ನೀಲ್ ಸೆೈಮನ್ ಅವರಿಂದ ರಚಿಸಲ್ಪಟ್ಟ ಹಾಸ್ಯ- ಹೃದಯಸ್ಪರ್ಶಿ ನಾಟಕ ಇದಾಗಿದೆ. ನಾಟಕವನ್ನು  1970 ರ ದಶಕದ ಭಾರತಕ್ಕೆ ಅಳವಡಿಸಲಾಗಿದ್ದು, ಭಾರತದ 4 ರಾಜ್ಯಗಳಲ್ಲಿ ಅಂದರೆ ತಮಿಳುನಾಡು, ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ಆಂಧ್ರ ಪ್ರದೇಶ ಗಳಲ್ಲಿ ನಾಟಕ ತೆರೆದುಕೊಳ್ಳುತ್ತದೆ.

4 ಸಣ್ಣ ಕಥಾಹಂದರಗಳುಳ್ಳ ಈ ನಾಟಕ ಶುರುವಾಗುವುದು ಓರ್ವ ಬರಹಗಾರನ ಕಥೆಯಿಂದ. ಅನಾಮಿಕನಾಗಿ ಉಳಿಯುವ ಈ ಸಂತ್ರಸ್ತ ಬರಹಗಾರ, ಕಥೆಯ ಮಜಲುಗಳೊಡನೆ ಹೋರಾಡುತ್ತಾ, ತನ್ನ ಕಲ್ಪನಾ ಲೋಕಕ್ಕೆ ನೋಡುಗರನ್ನು ನಗುವಿನ ಅಲೆಯಲ್ಲಿ ನಿಮ್ಮನ್ನು ತೋಯಿಸುತ್ತಾ ವಿಡಂಬನೆಯ ಲೇಪವಿರುವ 4 ಸಣ್ಣ ಜಗತ್ತುಗಳನ್ನು ಸೃಷ್ಟಿಸುತ್ತಾ  ನೋಡುಗರನ್ನು ರಂಜಿಸುತ್ತಾನೆ.

ಈ ನಾಟಕವನ್ನು ಭಾರತಕ್ಕೆ, ಸೃಜನಶೀಲವಾಗಿ , ಶ್ರೀಲಲಿತ ಪಮಿಡಿಪಾಟಿ ಅವರು ಅಳವಡಿಸಿದ್ದು ಅವರೆೇ ನಾಟಕದ ರಂಗರೂಪ ಹಾಗೂ ನಿರ್ದೇಶನ ಕೂಡ ಮಾಡಿದ್ದಾರೆ. ನಾಟಕದ ಡ್ರಾಮಾಟರ್ಜಿಯನ್ನು ದೀಪಕ್ ಸುಬ್ರಹ್ಮಣ್ಯ ಮಾಡಿದ್ದು, ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಯಂತ್ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಇವರು, ಈ ನಾಟಕದಲ್ಲಿ ಬರಹಗಾರನ ಪಾತ್ರದಲ್ಲಿ ಕಾಣಿಸುಕೊಳ್ಳುತ್ತಾರೆ. ಉಳಿದಂತೆ, ರಂಗಭೂಮಿ ಹಾಗೂ ಕಿರುತೆರೆಗಳಲ್ಲಿ ಯಶಸ್ವಿಯಾಗಿ ಕೆಲಸ ನಿರ್ವಹಿಸುತ್ತಿರುವ ಇಲ್ಯೂಮಿನೇಟಿಂಗ್ ವಿಂಡೋಸ್ ತಂಡದ ಕಲಾವಿದರು ನಾಟಕದ ವಿವಿಧ ಪಾತ್ರಗಳಲ್ಲಿ ಅಭಿನಯ ಮಾಡಿದ್ದಾರೆ.

ಸಂಗೀತ ಸಂಯೋಜನೆ ಹಾಗೂ ಹಿನ್ನೆಲೆ ಸಂಗೀತವನ್ನು ಎಂ.ಎಸ್.ಪ್ರಸನ್ನ ಮಾಡಿದ್ದು, ಬೆಳಕಿನ ವಿನ್ಯಾಸವನ್ನು ಸಂಬಿತ್ ದೆೇಬ್ ನಾಥ್ ಮಾಡಿದ್ದಾರೆ. ನಿರ್ವಹಣೆಯನ್ನು ಕಾರ್ತಿಕ್ ನಂಜುಂಡ ಮಾಡಲಿದ್ದಾರೆ. ನಾಟಕದ ನಿರ್ಮಾಣವನ್ನು ಇಲ್ಯೂಮಿನೇಟಿಂಗ್ ವಿಂಡೋಸ್ ಸಂಸ್ಥೆ ಮಾಡಿದೆ.

Key words:  Mysore, The Good Doctor, Drama, Aug 10th

The post ಆ.10 ರಂದು ‘ದಿ ಗುಡ್ ಡಾಕ್ಟರ್’ ನಾಟಕ ಪ್ರದರ್ಶನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

UPSC ಪರೀಕ್ಷೆ ಫಲಿತಾಂಶ ಪ್ರಕಟ: ಅನುಜ್​ ಅಗ್ನಿಹೋತ್ರಿ ದೇಶಕ್ಕೇ ನಂ.1

ನವದೆಹಲಿ,ಮಾರ್ಚ್,6,2026 (www.justkannada.in): ಕೇಂದ್ರ ಲೋಕಸೇವಾ ಸೇವಾ ಆಯೋಗದ (ಯುಪಿಎಸ್​ಸಿ) 2025ನೇ ಸಾಲಿನ...

സ്വന്തം ഊര്‍ജ ആവശ്യങ്ങള്‍ നിറവേറ്റാന്‍ ഇന്ത്യയ്ക്ക് മറ്റൊരു രാജ്യത്തിന്റെ അനുമതി എന്തിന്? സ്റ്റാലിന്‍

ചെന്നൈ: പശ്ചിമേഷ്യയില്‍ സംഘര്‍ഷം തുടരുന്ന സാഹചര്യത്തില്‍ റഷ്യയില്‍ നിന്നും എണ്ണ വാങ്ങുന്നതിനായി...

Vande Bharat Express: రైల్వే ప్రయాణికులకు అలర్ట్.. ఈ వందే భారత్ ట్రైన్ టైమింగ్స్‌ మారాయ్..

హిందూపూర్ స్టేషన్‌లో కాచిగూడ–యశ్వంతపూర్ వందే భారత్ ఎక్స్‌ప్రెస్ సమయాల్లో మార్పులు చేస్తూ...