14
March, 2026

A News 365Times Venture

14
Saturday
March, 2026

A News 365Times Venture

9 ಉಗ್ರನೆಲೆಗಳು ನಾಶ, 100 ಭಯೋತ್ಪಾದಕರು ನಿರ್ನಾಮ- ಆಪರೇಷನ್ ಸಿಂಧೂರ ಬಗ್ಗೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಮಾತು

Date:

ನವದೆಹಲಿ, ಜುಲೈ, 28,2025 (www.justkannada.in): ಆಪರೇಷನ್ ಸಿಂಧೂರ ಐತಿಹಾಸಿಕ ಮಿಲಿಟರಿ ಕ್ರಮವಾಗಿದ್ದು 9 ಉಗ್ರನೆಲೆಗಳು ನಾಶ ಮಾಡಲಾಗಿದೆ, 100 ಭಯೋತ್ಪಾದಕರನ್ನ ಹೊಡೆದುರುಳಿಸಿದ್ದೇವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ನೀಡಿದರು.

ಆಪರೇಷನ್ ಸಿಂಧೂರ್ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿದ್ದು ಈ ವೇಳೆ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್,  “ಪಹಲ್ಗಾಮ್ ದಾಳಿಯ ನಂತರ, ನಮ್ಮ ಸಶಸ್ತ್ರ ಪಡೆಗಳು ಕ್ರಮ ಕೈಗೊಂಡವು. 100ಕ್ಕೂ ಹೆಚ್ಚು ಭಯೋತ್ಪಾದಕರು, ಅವರ ಟ್ರೈನಿಂಗ್ ಕ್ಯಾಂಪ್ ​ಗಳನ್ನು ಗುರಿಯಾಗಿಸಿಕೊಂಡಿದ್ದ 9 ಭಯೋತ್ಪಾದಕ ಮೂಲಸೌಕರ್ಯ ತಾಣಗಳ ಮೇಲೆ ನಿಖರವಾಗಿ ದಾಳಿ ನಡೆಸಲಾಯಿತು. ಈ ಕಾರ್ಯಾಚರಣೆ ವೇಳೆ ಎಸ್ -400, ಆಕಾಶ್ ಕ್ಷಿಪಣಿ ವ್ಯವಸ್ಥೆ, ವಾಯು ರಕ್ಷಣಾ ಬಂದೂಕುಗಳು ಬಹಳ ಉಪಯುಕ್ತವೆಂದು ಸಾಬೀತಾಯಿತು. ಪಾಕಿಸ್ತಾನದ ದಾಳಿಯನ್ನು ಇವುಗಳು ಸಂಪೂರ್ಣವಾಗಿ ವಿಫಲಗೊಳಿಸಿದವು” ಎಂದು ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಭಯೋತ್ಪಾದಕ  ನೆಲೆಗಳನ್ನ ನಾಶ ಮಾಡಲು ಭಾರತೀಯ ಸೇನೆ ಕೇವಲ ’22 ನಿಮಿಷಗಳು’ ತೆಗೆದುಕೊಂಡಿತು. ಗಡಿಗಳನ್ನು ರಕ್ಷಿಸಲು ಅವಿರತವಾಗಿ ಕೆಲಸ ಮಾಡುವ ಸೈನಿಕರಿಗೆ ಅವರು ಧನ್ಯವಾದಗಳು ಎಂದು ರಾಜನಾಥ್ ಸಿಂಗ್ ತಿಳಿಸಿದರು.

“ಆಪರೇಷನ್ ಸಿಂಧೂರ್” ಸಂದರ್ಭದಲ್ಲಿ ನಮ್ಮ ಕ್ರಮಗಳು ಸಂಪೂರ್ಣವಾಗಿ ಆತ್ಮರಕ್ಷಣೆಗಾಗಿಯೇ ಇದ್ದವು. ನಾವು ಉಗ್ರರ ನೆಲೆಗೆ ನುಗ್ಗಿ ಹೊಡೆದಿದ್ದೇವೆ.  22 ನಿಮಿದಲ್ಲಿ ಆಪರೇಷನ್ ಸಿಂಧೂರ ಮುಗಿಯಿತು. ಇದು ಪ್ರಚೋದನಕಾರಿ ಅಥವಾ ವಿಸ್ತರಣಾವಾದಿಯಾಗಿರಲಿಲ್ಲ. ಆದರೂ, ಮೇ 10, 2025ರಂದು, ಮಧ್ಯರಾತ್ರಿ ಸುಮಾರು 1.30ರ ವೇಳೆಗೆ ಪಾಕಿಸ್ತಾನವು ಕ್ಷಿಪಣಿಗಳು, ಡ್ರೋನ್‌ ಗಳು, ರಾಕೆಟ್‌ಗಳು ಮತ್ತು ಇತರ ದೀರ್ಘ-ಶ್ರೇಣಿಯ ಶಸ್ತ್ರಾಸ್ತ್ರಗಳನ್ನು ಬಳಸಿ ಭಾರತದ ಮೇಲೆ ದೊಡ್ಡ ಪ್ರಮಾಣದ ದಾಳಿಯನ್ನು ಪ್ರಾರಂಭಿಸಿತು. ಆ ದಾಳಿಯನ್ನು ತಡೆಯಲು ನಮ್ಮ ಸೇನೆ ಸಫಲವಾಯಿತು” ಎಂದು ರಾಜನಾಥ್ ಸಿಂಗ್ ಸಂಸತ್ ನಲ್ಲಿ ತಿಳಿಸಿದರು.vtu

Key words: Union Minister, Rajnath Singh , Operation Sindhur

The post 9 ಉಗ್ರನೆಲೆಗಳು ನಾಶ, 100 ಭಯೋತ್ಪಾದಕರು ನಿರ್ನಾಮ- ಆಪರೇಷನ್ ಸಿಂಧೂರ ಬಗ್ಗೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಮಾತು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಕೃಷ್ಣ ಮೇಲ್ದಂಡೆ ಯೋಜನೆ: ಸರ್ವಪಕ್ಷ ಸಭೆ ಕರೆದಿದ್ದೇವೆ- ಡಿಸಿಎಂ ಡಿಕೆ ಶಿವಕುಮಾರ್

ಬಾಗಲಕೋಟೆ,ಮಾರ್ಚ್,14,2026 (www.justkannada.in) : ಕೃಷ್ಣ ಮೇಲ್ದಂಡೆ ಯೋಜನೆ ಸಂಬಂಧ ನವದೆಹಲಿಯಲ್ಲಿ...

കരുതലിന്റെ കാതല്‍; വയനാട് ടൗണ്‍ഷിപ്പിലെ താമസക്കാര്‍ക്ക് സാധന സാമഗ്രികള്‍ വാങ്ങാന്‍ ഒരു ലക്ഷം വീതം

തിരുവനന്തപുരം: ഒരുക്കിയ വയനാട് ടൗണ്‍ഷിപ്പിലെ താമസക്കാര്‍ക്ക് കൂടുതല്‍ ധനസഹായവുമായി സംസ്ഥാന സര്‍ക്കാര്‍....

"தேர்தலில் போட்டியிடும்படி மோடியின் பிரதிநிதி என்னை சந்தித்தார்" – எம்.பி ஆக ஆசைப்படும் ஐ.எம்.விஜயன்

கேரளாவில் விரைவில் சட்டசபை தேர்தல் நடைபெற உள்ளது. கேரளாவைச் சேர்ந்த இந்தியக்...

War Effect : తెలంగాణలో వార్ ఎఫెక్ట్.. చరిత్ర సృష్టించిన విద్యుత్ శాఖ

తెలంగాణ రాష్ట్ర విద్యుత్ రంగం సరికొత్త చరిత్రను లిఖించింది. రాష్ట్ర చరిత్రలో...