14
March, 2026

A News 365Times Venture

14
Saturday
March, 2026

A News 365Times Venture

ಸರ್ಕಾರ ಕಾರ್ಮಿಕರ ಪರ: ಹೊಸ ಕಾರ್ಮಿಕ ಯೋಜನೆಗಳು ಜಾರಿ: ಸಚಿವ ಸಂತೋಷ್ ಲಾಡ್

Date:

ವಿಜಯಪುರ, ಜುಲೈ, 23,2025 (www.justkannada.in):  ಕಾರ್ಮಿಕ ಇಲಾಖೆಯ ಹೊಸ ಯೋಜನೆಗಳನ್ನು ಎಲ್ಲಾ ರೀತಿಯ ಕಾರ್ಮಿಕರಿಗೆ ಮುಟ್ಟಿಸುವ ಉದ್ದೇಶದಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದು ರಾಜ್ಯ ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ್ ಸ್ಪಷ್ಟಪಡಿಸಿದರು.

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಕಾರ್ಮಿಕ ಇಲಾಖೆ, ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರಾತಾ ಮಂಡಳಿ, ಸಾರಿಗೆ ಇಲಾಖೆ ಇವರ ಸಂಯುಕ್ತಆಶ್ರಯದಲ್ಲಿ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸಚಿವ ಸಂತೋಷ್ ಲಾಡ್ ಮಾತನಾಡಿದರು.

ಇಲಾಖೆಯಡಿ ಸರ್ಕಾರ ಸಾಂಸ್ಕೃತಿಕ ಕಾರ್ಮಿಕರ ಕಾರ್ಯಕರ್ತರ ಕಾಯಿದೆಗೆ ಉದ್ದೇಶಿಸಿದ್ದು, ಅದಕ್ಕಾಗಿ ನಿಯಮಗಳನ್ನು ಸಿದ್ಧಪಡಿಸುವ ಕೆಲಸ ಇಲಾಖೆಯಡಿ ಮಾಡಲಾಗುತ್ತಿದೆ. ಆಶಾದೀಪ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ನಿರುದ್ಯೋಗಿ ಯುವಕರಿಗೆ ಸಂಸ್ಥೆಗಳು ಕೆಲಸ ನೀಡಿದಲ್ಲಿ ಅಥವಾ ಅಪ್ರೆಂಟೈಸರ್ ನೀಡಿದಲ್ಲಿ ತಿಂಗಳಿಗೆ ಒಬ್ಬ ಅಭ್ಯರ್ಥಿಗೆ ಸುಮಾರು 7 ಸಾವಿರ ರೂಪಾಯಿವರೆಗೆ ಮ್ಯಾನೇಜ್ ಮೆಂಟಿಗೆ ರಿಅಂಬ್ರೈಸ್ ಮಾಡಲಾಗುವುದು ಎಂದು ಸಚಿವ ಲಾಡ್ ಮಾಹಿತಿ ನೀಡಿದರು.

ಈ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕಾರ್ಮಿಕರಿಗೆ ಎಲ್ಲಾ ರೀತಿಯಲ್ಲಿ ಅನುಕೂಲ ಕಲ್ಪಿಸಲೆಂದು ತಾವು ಕಾರ್ಮಿಕ ಸಚಿವರಾದ ಬಳಿಕ ಹೊಸಹೊಸ ಯೋಜನೆಗಳನ್ನು ತರಲಾಗಿದೆ. ರಾಜ್ಯದಲ್ಲಿ ಪ್ರಸಕ್ತ 91 ವರ್ಗದ ಕಾರ್ಮಿಕರಿಗೆ ಸಹಾಯ ಮಾಡಲೆಂದು ಕಾರ್ಮಿಕರನ್ನು ಗುರುತಿಸಿ ಕಾರ್ಮಿಕರ ದತ್ತಾಂಶಗಳನ್ನು ಸಂಗ್ರಹಿಸುವ ಕೆಲಸ ಮಾಡಲಾಗುತ್ತಿದೆ. ಪ್ರಾರಂಭಿಕವಾಗಿ ಹೊಸ ಹೋಸ ಯೋಜನೆಗಳನ್ನು ಕಾರ್ಮಿಕರಿಗೆ ತರಲಾಗಿದ್ದು, ಮುಂದಿನ ದಿನಗಳಲ್ಲಿ ಇದು ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.

ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ಹೊಸ ಕಾರ್ಮಿಕ ಯೋಜನೆಗಳ ಕಾರ್ಮಿಕರಿಗೆ ಅಪಘಾತ ವಿಮೆ, ಆಸ್ಪತ್ರೆ ವೆಚ್ಚಕ್ಕೆ ಸಹಾಯ, ಅಪಘಾತ ಹಾಗೂ ಸಹಜ ಮರಣಕ್ಕೆ ಸಹಾಯ, ಮೃತ ಕಾರ್ಮಿಕ ಕುಟುಂಬಕ್ಕೆ ಸಹಾಯ ಮಾಡಲಾಗುತ್ತಿದೆ. ಸಾರಿಗೆ ಮತ್ತು ಅದಕ್ಕೆ ಸಂಬಂಧಿಸಿದ ಕಾಮಿಕರಿಗೆ ಯೋಜನೆ ಮತ್ತು ಮಂಡಳಿ ಜಾರಿಗೆ ತರಲಾಗಿದೆ. ಸುಮಾರು 25 ಲಕ್ಷ ಮಂದಿ ಇದಕ್ಕೆ ಸಂಬಂಧಿಸಿದ ಕಾರ್ಮಿಕರಿದ್ದಾರೆಂದು ಗುರುತಿಸಲಾಗಿದೆ. ಗಿಗ್ ವರ್ಕರ್ಸ್ ಗಾಗಿ ಪ್ರತ್ಯೇಕ ಕಾಯಿದೆ ಜಾರಿಗೆ ತರಲಾಗಿದೆ ಎಂದರು .

ಆಡಳಿತರೂಢ  ಕಾಂಗ್ರೆಸ್ ಸರ್ಕಾರ ನೀಡಿದ ಪಂಚಯೋಜನೆಗಳನ್ನು ಟೀಕಿಸುತ್ತಿರುವ ಬಿಜೆಪಿ ಕಾರ್ಮಿಕ ವರ್ಗಕ್ಕೇನೂ ಮಾಡದೆ ಇರೋದು ಬೇಸರದ ಸಂಗತಿ. ಕಾರ್ಮಿಕರ ಪರವಾಗಿ ಕಾಂಗ್ರೆಸ್ ಸರ್ಕಾರ ಸದಾ ಇದೆ ಎಂದು ಸಂತೋಷ್ ಲಾಡ್ ತಿಳಿಸಿದರು.vtu

Key words: Government, pro-labor, Minister, Santosh Lad

The post ಸರ್ಕಾರ ಕಾರ್ಮಿಕರ ಪರ: ಹೊಸ ಕಾರ್ಮಿಕ ಯೋಜನೆಗಳು ಜಾರಿ: ಸಚಿವ ಸಂತೋಷ್ ಲಾಡ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ವಾಟಾಳ್‌ ನಾಗರಾಜು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ಆಗ್ರಹ: ಸದನದಲ್ಲಿ ಉತ್ತರ ಕೊಟ್ಟ ಸಚಿವ ಶಿವರಾಜ್ ತಂಗಡಗಿ

ಬೆಂಗಳೂರು,ಮಾರ್ಚ್,13,2026 (www.justkannada.in): ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜು ಅವರಿಗೆ ರಾಜ್ಯೋತ್ಸವ...

കേരളം എല്ലാവര്‍ക്കും റേഷന്‍ ഉറപ്പാക്കിയ രാജ്യത്തെ ഏക സംസ്ഥാനം: മന്ത്രി ജി.ആര്‍. അനില്‍

തിരുവനന്തപുരം: രാജ്യത്ത് എല്ലാ കുടുംബങ്ങള്‍ക്കും റേഷന്‍ ഉറപ്പാക്കിയ ഏക സംസ്ഥാനമാണ് കേരളമെന്ന്...

மோனலிசா போஸ்லேவுக்கு 18 வயது பூர்த்தி ஆகும் முன்பே திருமணம் நடந்ததா? விவாதத்துக்கு காரணம் என்ன?

பிரயாக்ராஜில் கடந்த ஆண்டு நடந்த மகா கும்பமேளாவில் ருத்ராட்சம் மற்றும் மாலைகள்...

Mother Daughter Suicide: పెళ్లి ఇంట్లో చావు కేకలు! వరుడి నిందలతో సాఫ్ట్‌వేర్ ఇంజినీర్, ఆమె తల్లి బలి..

Mother Daughter Suicide: పెళ్లి కాకముందే.. యువతిని అనుమానించాడు.. నీ ప్రవర్తన...