14
March, 2026

A News 365Times Venture

14
Saturday
March, 2026

A News 365Times Venture

RCB ಸಂಭ್ರಮಾಚರಣೆ ಕಾಲ್ತುಳಿತ ಕೇಸ್ CBI ತನಿಖೆಗೆ ವಹಿಸಿ- ಸಿಎಂಗೆ ಆರ್.ಅಶೋಕ್ ಪತ್ರ

Date:

ಬೆಂಗಳೂರು,ಜುಲೈ,19,2025 (www.justkannada.in):  ಜೂನ್ 4ರಂದು ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಿಂದ 11 ಮಂದಿ ಸಾವನ್ನಪ್ಪಿದ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಿ ಎಂದು ಸಿಎಂ ಸಿದ್ದರಾಮಯ್ಯಗೆ ವಿಪಕ್ಷ ನಾಯಕ ಆರ್.ಅಶೋಕ್ ಪತ್ರ ಬರೆದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ಪ್ರಕರಣ ಕುರಿತು ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಆರ್.ಅಶೋಕ್,  ಐಪಿಎಲ್ ವಿಜಯೋತ್ಸವದ ವೇಳೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ಸಂಭವಿಸಿದ ದುರಂತದಲ್ಲಿ ಪ್ರಾಣ ಕಳೆದುಕೊಂಡ 11 ಅಮಾಯಕ ಯುವಕರ ಕುಟುಂಬದವರಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ.

ದುರಂತಕ್ಕೆ ಪೊಲೀಸ್ ಇಲಾಖೆಯೇ ಕಾರಣ ಎಂದು ಬಿಂಬಿಸುವ ಮೂಲಕ ಸರ್ಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದು, ಮೃತರ ಕುಟುಂಬಗಳಿಗೆ ನ್ಯಾಯ ಒದಗಿಸಲು ಈ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದ್ದಾರೆ.vtu

Key words: RCB, stampede, case , CBI, investigation, R. Ashok, letter, CM

The post RCB ಸಂಭ್ರಮಾಚರಣೆ ಕಾಲ್ತುಳಿತ ಕೇಸ್ CBI ತನಿಖೆಗೆ ವಹಿಸಿ- ಸಿಎಂಗೆ ಆರ್.ಅಶೋಕ್ ಪತ್ರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

യു.എസ് -ഇസ്രഈല്‍ ആക്രമണത്തില്‍ മൊജ്തബ ഖാംനഇക്ക് സാരമായി പരിക്കേറ്റു; അവകാശവാദവുമായി യു.എസ് പ്രതിരോധ സെക്രട്ടറി

വാഷിങ്ടണ്‍: ഇറാന്റെ പുതിയ പരമോന്നത നേതാവ് മൊജ്തബ ഖാംനഇക്ക് യു.എസ് -ഇസ്രഈല്‍ ആക്രമണത്തില്‍...

"நடிகர் ரஜினிகாந்தை யாரும் மிரட்ட முடியாது; எந்த மிரட்டலுக்கும் அவர் அடிபணிய மாட்டார்!" – ரகுபதி

புதுக்கோட்டையில் செய்தியாளர்களை சந்தித்த அமைச்சர் ரகுபதி,"நடிகர் ரஜினிகாந்தை யாரும் மிரட்ட முடியாது....

Sachin Tendulkar: సచిన్ రిటైర్మెంట్ వెనుక ఇంత కథ ఉందా.. డ్రెస్సింగ్ రూంలోనే ప్లాన్..?

క్రికెట్ ప్రపంచంలో ‘దేవుడు’గా పిలవబడే సచిన్ టెండూల్కర్ పేరు వినగానే పరుగుల...